- Home
- Entertainment
- Cine World
- ಸಲ್ಮಾನ್ ಖಾನ್ ಕಾರು ಗಿಫ್ಟ್ ಕೊಟ್ಟಿಲ್ಲ ಎಂದ ಭಾವ; ಶ್ರೀಮಂತರ ಮನೆಯಲ್ಲೂ ಅದೇ ಜಗಳನಾ?
ಸಲ್ಮಾನ್ ಖಾನ್ ಕಾರು ಗಿಫ್ಟ್ ಕೊಟ್ಟಿಲ್ಲ ಎಂದ ಭಾವ; ಶ್ರೀಮಂತರ ಮನೆಯಲ್ಲೂ ಅದೇ ಜಗಳನಾ?
ಸಲ್ಲು ಮಾಡಿರುವ ಹಣವನ್ನು ಖರ್ಚು ಮಾಡುತ್ತಿರುವ ಆಯುಷ್ ಶರ್ಮಾ. ನೆಟ್ಟಿಗರ ಟೀಕೆಗೆ ಉತ್ತರ ಕೊಟ್ಟ ನಟ...

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ.
ಅದರಲ್ಲೂ ಸಲ್ಮಾನ್ ಖಾನ್ ಮಾಡಿರುವ ಹಣವನ್ನು ತಂಗಿ ಮತ್ತು ಭಾವ ಆಯುಷ್ ಶರ್ಮಾ ಗುಡಿಸಿ ಗುಂಡಾಂತರ ಮಾಡುತ್ತಿದ್ದಾರೆ ಅನ್ನೋ ವಿಚಾರ ಬಂದಿದ್ದಕ್ಕೆ ಉತ್ತರ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಮ್ಮನ್ನು ಪದೇ ಪದೇ ಟ್ರೋಲ್ ಮಾಡುತ್ತಿದ್ದಾರೆ. ಪ್ರಮುಖ ಕಾರಣ ಏನೆಂದರೆ ಅರ್ಪಿತಾ ಬಣ್ಣದ ಪ್ರಪಂಚಕ್ಕೆ ತುಂಬಾನೇ ಹತ್ತಿರವಾಗಿರುವ ವ್ಯಕ್ತಿ ಆದರೆ ನನಗೆ ಒಂದು ಚೂರು ಅರಿವೇ ಇಲ್ಲ.
ತುಂಬಾ ಬೇಸರ ಆಗುವ ವಿಚಾರ ಏನೆಂದರೆ ಹಣಕ್ಕಾಗಿ ನಾನು ಅರ್ಪಿತಾಳನ್ನು ಮದುವೆ ಮಾಡಿಕೊಂಡು ಅದಾದ ನಂತರ ನಾಯಕನಾದೆ ಎಂದು. ನನಗೆ ಅರ್ಪಿತಾ ತುಂಬಾನೇ ಇಷ್ಟೆ ಆಕೆಯನ್ನು ಪ್ರೀತಿಸಿದೆ ಎಂದಿದ್ದಾರ್ ಆಯುಷ್.
ಪ್ರೀತಿಯಿಂದ ಆರ್ಪಿತಾಳನ್ನು ಮದುವೆ ಮಾಡಿಕೊಂಡೆ. ನನ್ನ ಪ್ರೀತಿ ಬಗ್ಗೆ ಆಕೆಗೆ ಗೊತ್ತಿತ್ತು ನನಗೆ ಗೊತ್ತಿತ್ತು ನಮ್ಮ ಕುಟುಂಬಕ್ಕೆ ಗೊತ್ತಿತ್ತು ಅಷ್ಟು ಸಾಕು. ಮಕ್ಕಳ ರಜೆ ದಿನ ನಾವು ವಿದೇಶ ಪ್ರಯಾಣ ಮಾಡಿದರೆ ಅದಿಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಾರೆ. rpita Khan Aayush Sharma Salman khan
ಸಲ್ಮಾನ್ ಖಾನ್ ಹಣವನ್ನು ಖರ್ಚು ಮಾಡಲು ಇವನೊಬ್ಬ ಸಾಕು ಎನ್ನುತ್ತಾರೆ. ನಮ್ಮ ಮದುವೆ ಸಮಯದಲ್ಲಿ ನಮಗೆ ಸಲ್ಮಾನ್ ಖಾನ್ ರೋಲ್ಸ್ ರಾಯ್ಸ್ ಕಾರು ಗಿಫ್ಟ್ ಕೊಟ್ಟಿದ್ದಾರೆ ಸುದ್ದಿ ಮಾಡಿದ್ದರು, ಮದುವೆಯಾಗಿ ಇಷ್ಟು ವರ್ಷ ಆಗಿದೆ ಆ ಕಾರು ಎಲ್ಲಿದೆ ಎಂದು ಹುಡುಕುತ್ತಿರುವೆ.
ಆಗಸ್ಟ್ 3 ರಂದು. ಅವರು 1989 ರಲ್ಲಿ ಮುಂಬೈನಲ್ಲಿಯೇ ಜನಿಸಿದ ಅರ್ಪಿತಾರನ್ನು ಸಲ್ಮಾನ್ ತಂದೆ ಸಲೀಂ ಖಾನ್ ದತ್ತು ಪಡೆದಿದ್ದಾರೆ. ಈ ಜೋಡಿ ಎಲ್ಲೇ ಹೋದರು ಸುದ್ದಿಯಲ್ಲಿ ಇರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.