ಬಾಯ್‌ಫ್ರೆಂಡ್ ಜೊತೆ ಬಿಕಿನಿಯಲ್ಲಿ ಇರಾ ಬರ್ತಡೇ ಸೆಲೆಬ್ರೇಟ್; ಫೋಟೋ ಹಂಚಿಕೊಂಡ ಆಮೀರ್ ಪುತ್ರಿ
ಬಾಯ್ ಫ್ರೆಂಡ್ ಜೊತೆಗೆ ಇರಾ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವಿಮ್ಮಿಂಗ್ ಡ್ರೆಸ್‌ನಲ್ಲಿರುವ ಇರಾ ಖಾನ್ ಕೇಕ್ ಕತ್ತರಿಸುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಪುತ್ರ ಇರಾ ಖಾನ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇರಾ 25ನೇ ವರ್ಷದ ಹುಟ್ಟುಹಬ್ಬ ಸೆಲೆಬ್ರೀಟ್ ಮಾಡಿದ್ದಾರೆ. ತಂದೆ ಆಮೀರ್ ಖಾನ್ ಮತ್ತು ತಾಯಿ ರೀನಾ ದತ್ತಾ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಬ್ರಮಿಸಿದ್ದರು.
ಬಾಯ್ ಫ್ರೆಂಡ್ ಜೊತೆಗೆ ಇರಾ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ವಿಮ್ಮಿಂಗ್ ಡ್ರೆಸ್‌ನಲ್ಲಿರುವ ಇರಾ ಖಾನ್ ಕೇಕ್ ಕತ್ತರಿಸುತ್ತಿದ್ದಾರೆ. ಪಕ್ಕದಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಪುತ್ರ ಆಜಾದ್ ಖಾನ್ ಮತ್ತು ಇರಾ ಖಾನ್ ತಾಯಿ ರೀನಾ ದತ್ತಾ ಜೊತೆಯಲ್ಲಿದ್ದಾರೆ.
ಇರಾ ಖಾನ್ ಬಾಯ್ ಫ್ರೆಂಡ್ ಜೊತೆಯೂ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇರಾ ಖಾನ್ ಪ್ರೀತಿಯ ವಿಚಾರ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇರಾ ಖಾನ್ ಫಿಟ್ನೆಸ್ ಕೋಚ್ ನೂಪೂರ್ ಶಿಖಾರೆ ಜೊತೆಗೆ ಪ್ರೀತಿಯಲ್ಲಿ ಮುಳುಗಿದ್ದಾರೆ.
ಇಬ್ಬರ ಪ್ರೀತಿಯ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಒಟ್ಟಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ. ಸ್ವಿಮಿಂಗ್ ಪೂಲ್ ನಲ್ಲಿ ಜನ್ಮದಿನಾಚರಣೆ ಸಂಭ್ರಮಿಸಿದ ಇರಾ ಜೊತೆ ಬಾಯ್ ಫ್ರೆಂಡ್ ನೂಪುರ್ ಕೂಡ ಇದ್ದಾರೆ.
ಬಿಕಿನಿಯಲ್ಲಿ ಇರಾ ಖಾನ್ ಹುಟ್ಟಹುಬ್ಬ ಆಚಸಿಕೊಂಡಿದ್ದಾರೆ. ಬಾಯ್ ಫ್ರೆಂಡ್ ನೂಪುರ್ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ. ನೂಪುರ್ ಜೊತೆ ಅತ್ಯಂತ ಆಪ್ತವಾಗಿರುವ ರೊಮ್ಯಾಂಟಿಕ್ ಫೋಟೋಗಳನ್ನು ಇರಾ ಶೇರ್ ಮಾಡಿದ್ದಾರೆ.
ಇರಾ ಖಾನ್ ಧರಿಸಿದ್ದ ಬಟ್ಟೆ ನಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಾದರೂ ಸರಿಯಾದ ಬಟ್ಟೆ ಧರಿಸಬಾರದಾ ಎಂದು ಹೇಳುತ್ತಿದ್ದಾರೆ. ಅಪ್ಪನ ಮುಂದೆ ಇಂಥ ಬಟ್ಟೆ ಧರಿಸಲು ಧೈರ್ಯ ಬೇಕು.. ಯಾರು ಹೀಗೆ ಧರಿಸುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಕೆಲವರು ಅವರ ಬಟ್ಟೆ ಅವರ ಇಷ್ಟ ಎಂದು ಕಾಮೆಂಟ್ ಮಾಡುವ ಮೂಲಕ ಇರಾ ಪರ ನಿಂತಿದ್ದಾರೆ. ಇರಾ ಖಾನ್ ಸ್ವಿಮಿಂಗ್ ಪೂಲ್ ಪಕ್ಕದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗಾಗಿ ಬಿಕಿನಿಯಲ್ಲೇ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ವೃತ್ತಿಪರ ವಿಚಾರವಾಗಿ ಹೇಳುವುದಾದರೇ ಇರಾ ಖಾನ್ ರಂಗಭೂಮಿಯಲ್ಲಿ ಆಕ್ಟೀವ್ ಆಗಿದ್ದಾರೆ. ನಾಟಕಗಳನ್ನು ನಿರ್ದೇಶನ ಮಾಡುವ ಮೂಲಕ ರಂಗಭೂಮಿಯಲ್ಲಿ ತೊೆಡಗಿಸಿಕೊಂಡಿದ್ದಾರೆ. ಭಾರತದಾದ್ಯಂತ ಪ್ರದರ್ಶನ ನೀಡುತ್ತಿರುತ್ತಾರೆ.