ಆರ್ಯನ್ ಖಾನ್ ರಾತ್ರಿ ಮಲಗುವುದಿಲ್ಲ; ಯಾರಿಗೂ ತಿಳಿಯದ ಸತ್ಯ ಬಿಚ್ಚಿಟ್ಟ ಶಾರುಖ್ ಖಾನ್
ಬಾಲಿವುಡ್ ಭವಿಷ್ಯ ಆರ್ಯನ್ ಖಾನ್ ಕೈಯಲ್ಲಿದೆ ಎನ್ನುವ ಎಸ್‌ಆರ್‌ಕೆ ಫ್ಯಾನ್ಸ್. ಮಗನ ಬಗ್ಗೆ 10 ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡ ಹೆಮ್ಮೆಯ ತಂದೆ.
ಆರ್ಯನ್ ಖಾನ್ ಹುಟ್ಟಿದ್ದಾಗ ಪ್ರತಿಯೊಬ್ಬರು ನನ್ನನ್ನು ಕೇಳಿದ್ದರು ಹೇಗೆ ಫೀಲ್ ಆಗುತ್ತಿದೆ ಎಂದು. ತಂದೆ ಆಗಿರುವ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ನನಗೆ ಏನೂ ಬದಲಾವಣೆ ಅನಿಸಲಿಲ್ಲ. ಬದಲಿಗೆ ಜೀವನಕ್ಕೆ ಒಬ್ಬ ಒಳ್ಳೆಯ ಗೆಳೆಯ ಪಡೆದುಕೊಂಡೆ.
ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಮ್ ಖಾನ್ ಜೀವನದಲ್ಲಿ ಸಾಧನೆ ಮಾಡಬೇಕು. ಸಿನಿಮಾ ಕ್ಷೇತ್ರಕ್ಕೆ ಕಾಲಿಡಬೇಕು ಎಂದು ನಾನು ಹೇಳುವುದಿಲ್ಲ ಅವರ ಜೀವನವನ್ನು ಆವರೇ ನಿರ್ಧಾರ ಮಾಡಿಕೊಳ್ಳಬಹುದು ಅದು ಕೆಮಿಕಲ್ ಇಂಜಿನಿಯರಿಂಗ್ ಆಗಿರಬಹುದು ಅಥವಾ ಫುಟ್‌ಬಾಲ್ ಆಗಿರಬಹುದು. ನಾನು ಸದಾ ನೆರಳಾಗಿರಲು ಅಸಾಧ್ಯ.
ಕ್ಯಾರೆಕ್ಟರ್‌ನಲ್ಲಿ ಅರ್ಯಾನ್ ಖಾನ್ ತುಂಬಾ ಒಳ್ಳೆಯ ಹುಡುಗ ಹಾಗೂ ಸ್ಟ್ರಾಂಗ್ ವ್ಯಕ್ತಿ. ಸದಾ ಜೀವನದ ಗುರಿ ಬಗ್ಗೆ ಚರ್ಚೆ ಮಾಡುತ್ತಾನೆ. ಜೀವನದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ತುಂಬಾ ಕ್ಲಾರಿಟಿ ಹೊಂದಿರುವ ವ್ಯಕ್ತಿ. ನನಗಿಂತ ಹೆಚ್ಚಿಗೆ ಹೆಸರು ಮಾಡಬೇಕು ಹಾಗೂ ಕೂಲ್ ಆಗಿರುವುದಕ್ಕೆ ಇಷ್ಟ ಪಡುತ್ತಾನೆ.
ಒಂದು ದಿನ ಆರ್ಯನ್ ಜೊತೆ ನಾನು ಶರ್ಟ್ ಧರಿಸದೆ ಕೇವಲ ಚಡ್ಡಿಯಲ್ಲಿ ಇದ್ದು ನೆಲದ ಮೇಲೆ ಮಲಗಿಕೊಂಡು ಕೆಟ್ಟ ಕೆಟ್ಟ ಜೋಕ್ ಮಾಡುತ್ತಿದ್ದೆವು. ಆತ ಕಲಿತಿರುವ ಪೋಲಿ ತಮಾಷೆಗಳನ್ನು ನನ್ನ ಜೊತೆ ಹಂಚಿಕೊಳ್ಳುವಾಗ ಮುಖದಲ್ಲಿ ಖುಷಿ ಕಾಣಿಸುತ್ತದೆ. ಆಗ ನಾನು ಮತ್ತೊಂದು ದಿನ ನಾನು ಇನ್ನೂ ಹೆಚ್ಚಿಗೆ ಹೇಳುಕೊಡುವೆ ಎಂದು ಕಾಲೆಳೆಯುವೆ.
ಅರ್ಯಾನ್ ಖಾನ್ ಸುಮ್ಮನೆ ಕೂರುವುದಿಲ್ಲ. ಆತ Tarkwonda ಕಲಿತಿದ್ದಾನೆ ಹಾಗೂ ಬಾಡಿ ಬಿಲ್ಡ್ ಮಾಡುತ್ತಿದ್ದಾನೆ. ತುಂಬಾ ಸ್ವೀಟ್ ಆಗಿ 'ಅಪ್ಪ ನೀವು ನನ್ನನ್ನು ಮೀರಿಸಲು ಅಸಾಧ್ಯ' ಎನ್ನುತ್ತಾನೆ.
ಮೂವರು ಮಕ್ಕಳಲ್ಲಿ ನಾನು ಹೆಚ್ಚಿಗೆ ಸಮಯ ಕಳೆಯುವುದು ಆರ್ಯನ್ ಖಾನ್ ಜೊತೆಗೆ ಏಕೆಂದರೆ ಆತ ನನ್ನ ಹಾಗೆ ನೈಟ್ ಬರ್ಡ್. ರಾತ್ರಿ ಬೇಗ ನಿದ್ರೆ ಮಾಡುವುದಿಲ್ಲ ಹೀಗಾಗಿ ಮಾತನಾಡಿಕೊಂಡು ಕೂತಿರುತ್ತೀವಿ
ನಾವಿಬ್ಬರೂ ಒಟ್ಟಿಗೆ ಕುಳಿತುಕೊಂಡು ಸಿನಿಮಾ ನೋಡಲು ಇಷ್ಟ ಪಡುತ್ತೀವಿ. ಫಿಲ್ಮ ಮೇಕಿಂಗ್ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತೀವಿ. ಜಗಳ ಮಾಡುವುದು ಹೇಗೆ ಅದರಿಂದ ಪಾರಾಗುವುದು ಹೇಗೆ ಹಾಗೋ ಮತ್ತೊಬ್ಬರಿಗೆ ಯಾವರ ರೀತಿ ಮರು ಪ್ರಶ್ನೆ ಮಾಡಬಹುದು ಹೀಗೆ ನಾನ್ ಸ್ಟಾಪ್ ಚರ್ಚೆ ಮಾಡುತ್ತೀವಿ
ನಾಯಕನಾಗುವುದು ಅಷ್ಟು ಸುಲಭವಲ್ಲ ಎಂದು ಆರ್ಯನ್ ಖಾನ್‌ಗೆ ಚೆನ್ನಾಗಿ ಗೊತ್ತಿದೆ ಹೀಗಾಗಿ ಆತ ಹೆಚ್ಚಿಗೆ ಬರೆಯುವುದರ ಕಡೆ ಗಮನ ಕೊಡುತ್ತಾರೆ. ಆರ್ಯನ್ ಖಾನ್ ಬರೆವಣಿಗೆ ಅದ್ಭುತವಾಗಿದೆ.
ಆರ್ಯನ್ ಖಾನ್ ವ್ಯಕ್ತಿತ್ವ ತುಂಬಾ ಟೆರಿಫಿಕ್ ಏಕೆಂದರೆ ಆತನಿಗೆ ತಂದೆ ರೀತಿ ಸೈನ್ಸ್ ಆಫ್ ಹ್ಯೂಮರ್ ಇದೆ ಹಾಗೂ ತಾಯಿ ರೀತಿ ಕೆಲಸದ ಬಗ್ಗೆ ಕಂಪ್ಯಾಶನ್ ಇದೆ.
ಆರ್ಯನ್ ದೊಡ್ಡವನಾಗುತ್ತಿದ್ದಂತೆ ತುಂಬಾ ಹ್ಯಾಂಡ್ಸಮ್ ಆಗಿದ್ದಾನೆ. ನನ್ನನ್ನು ಮೀರಿಸುವಷ್ಟು ಗ್ಲಾಮರ್ ಅವನಿಗೆ ಬಂದಿದೆ. ಆದರೆ ಅವನ ಹಾದಿಯಲ್ಲಿ ಸಾಧನೆ ಮಾಡಲು ಹೇಳಿರುವೆ.