- Home
- Automobile
- Car News
- ಸರಿಸುಮಾರು 700 ಕಿ.ಮಿ ಮೈಲೇಜ್, 10 ನಿಮಿಷದಲ್ಲಿ ಚಾರ್ಜಿಂಗ್ ತಂತ್ರಜ್ಞಾನದ ಹೊಸ ಕಾರು ಅನಾವರಣ
ಸರಿಸುಮಾರು 700 ಕಿ.ಮಿ ಮೈಲೇಜ್, 10 ನಿಮಿಷದಲ್ಲಿ ಚಾರ್ಜಿಂಗ್ ತಂತ್ರಜ್ಞಾನದ ಹೊಸ ಕಾರು ಅನಾವರಣ
ಒಂದು ಬಾರಿ ಚಾರ್ಜ್ ಮಾಡಿದರೆ 670 ಕಿಲೋಮೀಟರ್ ಮೈಲೇಜ್. ವಿಶೇಷ ಅಂದರೆ ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 270 ಕಿಲೋಮೀಟರ್ ಪ್ರಯಾಣ ಮಾಡಬಹುದು. ಈ ಅದ್ಭುತ ತಂತ್ರಜ್ಞಾನದ ಕಾರು ಅನಾವರಣಗೊಂಡಿದೆ.

ಹೊಸ ಕಾರಿನಲ್ಲಿ ಹೊಸ ತಂತ್ರಜ್ಞಾನ
ಎಲೆಕ್ಟ್ರಿಕ್ ಕಾರುಗಳು ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರ ಕೂಡ ಇವಿ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ. ಹಲವು ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಆದರೆ ಚಾರ್ಜಿಂಗ್ ಹಾಗೂ ಮೈಲೇಜ್ ತಲೆನೋವಾಗಿ ಪರಿಣಿಸುತ್ತದೆ. ಇದರ ನಡುವೆ ಹೊಸ ಕಾರು ಅನಾವರಣಗೊಂಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 670 ಕಿಲೋಮೀಟರ್ ಮೈಲೇಜ್ ನೀಡಲಿದೆ. ಅತೀ ವೇಗದಲ್ಲಿ ಚಾರ್ಜಿಂಗ್ ತಂತ್ರಜ್ಞಾನದ ಇದರಲ್ಲಿದೆ. ಈ ಹೊಸ ಕಾರು ಮರ್ಸಿಡೀಸ್ ಬೆಂಜ್ ಎಎಂಜಿ CLA 45 ಇವಿ.
ಅಸಧಾರಣ ಸಾಮರ್ಥ್ಯ, ಪವರ್‌ಫುಲ್ ಮೋಟಾರ್
ಮರ್ಸಿಡೀಸ್ ಬೆಂಜ್ ಎಎಂಜಿ CLA 45 ಇವಿ ಕಾರಿನಲ್ಲಿ 94 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ವಿಶೇಷ ಅಂದರೆ ಅತ್ಯಾಧುನಿಕ ಆಕ್ಸಿಯಲ್ ಫ್ಲಕ್ಸ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಬರೋಬ್ಬರಿ 612 hp ಪವರ್ ಹಾಗೂ 500 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. 7 ಡ್ರೈವ್ ಮೂಡ್ ಹೊಂದಿದೆ.
ಮೈಲೇಜ್ ಹಾಗೂ ಚಾರ್ಚಿಂಗ್
WLTP ಸರ್ಟಿಫೈಡ್ ರೇಂಜ್ 670 ಕಿಲೋಮೀಟರ್. ಸರಿಸುಮಾರು 640 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳುತ್ತಿದೆ. 330 kW ಡಿಸಿ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ ಕಾರಣ ಶೇಕಡಾ 10 ರಿಂದ 80ರಷ್ಟು ಚಾರ್ಜಿಂಗ್ ಸಮಯ ಕೇವಲ 22 ನಿಮಿಷ ಮಾತ್ರ. ಇನ್ನು 10 ನಿಮಿಷ ಚಾರ್ಜ್ ಮಾಡಿದರೆ 270 ಕಿಲೋಮೀಟರ್ ಪ್ರಯಾಣ ಮಾಡಲು ಸಾಧ್ಯ.
ಕೇವಲ 3 ಸೆಕೆಂಡ್ ಸಾಕು
0-100 ಕಿಲೋಮೀಟರ್ ವೇಗಕ್ಕೆ ಕೇವಲ 3 ಸೆಕೆಂಡ್ ಸಾಕು. ಈ ಕಾರಿನ ಗರಿಷ್ಠ ವೇಗ 270 ಕಿಲೋಮೀಟರ್ ಪ್ರತಿ ಗಂಟೆಗೆ. 2.3 ಟನ್ ತೂಕದ ಈ ಕಾರು ಅಸಾಧಾರಣ ಪರ್ಫಾಮೆನ್ಸ್ ನೀಡಲಿದೆ. 19 ಇಂಚಿನ ಅಲೋಯ್ ವ್ಹೀಲ್ಸ್ ಹೊಂದಿದೆ. 20 ಇಂಚಿನ ವ್ಹೀಲ್ ಆಯ್ಕೆಯೂ ಇದೆ. ಜೊತೆಗೆ ಅತ್ಯಾಕರ್ಷಕ ಡಿಸೈನ್ ಹೊಂದಿದೆ.
ಪೆಟ್ರೋಲ್ ಕಾರಿನ ಸೌಂಡ್ ಮೋಡ್ ಲಭ್ಯ
ಕಾರಿನಲ್ಲಿ ಡ್ರಿಫ್ಟ್ ಮೋಡ್ ನೀಡಲಾಗಿದೆ. ಹೈವೇಯಲ್ಲಿ ಪ್ರಯಾಣ ಮಾಡುವಾಗ ಮುಂಭಾಗ ಮೋಟಾರ್ ಸಂಪೂರ್ಣವಾಗಿ ಸ್ಥಗಿತಗೊಂಡು, ರೇರ್ ಮೋಟಾರ್ ಮೂಲಕ ಚಲಿಸಲಿದೆ. AMGFORCE S+ ಮೋಡ್ ಪರಿಚಯಿಸಲಾಗಿದೆ. ಈ ಮೋಡ್‌ನಲ್ಲಿ ಕಾರು ಪೆಟ್ರೋಲ್ ಎಂಜಿನ್ AMG A 45 S ಕಾರಿನ ಸೌಂಡ್‌ನಲ್ಲಿ ಚಲಿಸಲಿದೆ. ಇದರಿಂದ ಪೆಟ್ರೋಲ್ ಕಾರಿನ ಫೀಲ್ ಸಿಗಲಿದೆ.

