ಮೊಬೈಲ್ ಬಳಿಕ ಅತ್ಯಾಧುನಿಕ ತಂತ್ರಜ್ಞಾನದ ಶಓಮಿ ಹೊಸ SUV ಕಾರು ಅನಾವರಣ, ಅದ್ಭುತ ಫೀಚರ್
ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಫೀಚರ್ಸ್ ಫೋನ್ ಮೂಲಕ ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಶಓಮಿ ಇದೀಗ ಹೊಸ ಎಸ್‌ಯುವಿ ಕಾರು ಅನಾವರಣ ಮಾಡಿದೆ. ಈ ಕಾರಿನ ಬೆಲೆ, ಫೀಚರ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ

ಶಓಮಿಯಿಂದ ಕಾರು ಅನಾವರಣ
ಚೀನಾ ಮೂಲಕ ಶಓಮಿ ಭಾರತದಲ್ಲೂ ಹೆಚ್ಚು ಜನಪ್ರಿಯ. ಭಾರತದಲ್ಲಿ ಮೊಬೈಲ್ ಕ್ರಾಂತಿ ಮಾಡಿದ ಬ್ರ್ಯಾಂಡ್‌ಗಳಲ್ಲಿ ಶಓಮಿ ಕೂಡ ಒಂದು. ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದ್ದು ಮಾತ್ರವಲ್ಲ, ಎಲ್ಲಾ ಫೀಚರ್, ಸ್ಟೋರೇಜ್, ಕ್ಯಾಮೆರಾ ಸೇರಿದಂತೆ ದಿಗ್ಗಜ ಫೋನ್‌ಗಳಿಗೆ ಪೈಪೋಟಿ ನೀಡಿತ್ತು. ಅತೀ ಕಡಿಮೆ ಬೆಲೆಯಲ್ಲಿ ಫೋನ್ ಬಿಡುಗಡೆ ಮಾಡಿ ಕ್ರಾಂತಿ ಮಾಡಿದೆ. ಇದೀಗ ಶಓಮಿ ಹೊಚ್ಚ ಹೊಸ ಎಸ್‌ಯುವಿ ಕಾರಿನ ಫೋಟೋ ಅನಾವರಣ ಮಾಡಿದೆ.
ಹೊಸ ಕಾರಿಗೆ ಸ್ಕೈನೊಮಡ್ ಹೆಸರು
ಶಓಮಿ ಅನಾವರಣ ಮಾಡಿದ ಹೊಸ ಎಸ್‌ಯುವಿ ಕಾರಿಗೆ ಸ್ಕೈನೊಮಡ್ ಎಂದು ಹೆಸರಿಡಲಾಗಿದೆ. ಇದು ಐಷಾರಾಮಿ ಹಾಗೂ ಹೆಚ್ಚಿನ ಸ್ಥಳವಕಾಶದ ಕಾರು. 7 ಸೀಟರ್ ಕಾರು ಇದಾಗಿದೆ. ಆದರೆ ಲಕ್ಷುರಿ, ಕಂಫರ್ಟ್, ಫೀಚರ್ಸ್, ಟೆಕ್ನಾಲಜಿ ವಿಚಾರದಲ್ಲಿ ಶಓಮಿ ದಿಗ್ಗಜರನ್ನೇ ಹಿಂದಿಕ್ಕುವ ಸೂಚನೆ ನೀಡಿದೆ. ಇಷ್ಟೇ ಕಡಿಮೆ ಬೆಲೆಗೆ ಈ ಕಾರು ಬಿಡುಗಡೆಯಾಗಲಿದೆ.
ಕೆಫೆ ರೀತಿ ಬದಲಾಗುತ್ತೆ ಸೀಟು
ಸ್ಕೈನೊಮಡ್ ಟೀಸರ್ ಫೋಟೋಗಳು ತೀವ್ರ ಕುತೂಹಲ ಕೆರಳಿಸಿದೆ. ದೊಡ್ಡ ಗಾತ್ರದ ಐಷಾರಾಮಿ ಎಸ್‌ಯುವಿ ಕಾರಿದು. ಕ್ಯಾಬಿನ್, ಸೀಟು, ಸ್ಟೋರೇಜ್ ಸ್ಪೇಸ್ ಸೇರಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಡಿಸೈನ್ ಮಾಡಲಾಗಿದೆ. ವಿಶೇಷ ಅಂದರೆ ಈ ಕಾರಿನ ಸೀಟುಗಳನ್ನು ಕೆಫೆ ರೀತಿ ಬದಲಾಯಿಸಲು ಸಾಧ್ಯವಿದೆ. ಅಗತ್ಯಕ್ಕೆ ತಕ್ಕಂತೆ ಸೀಟುಗಳನ್ನು ಅರೇಂಜ್‌ಮೆಂಟ್ ಮಾಡಲು ಸಾಧ್ಯವಿದೆ.
ಹಲವು ಅರಾಮದಾಯಕ ಫೀಚರ್
ದೂರ ಪ್ರಯಾಣದ ವೇಳೆ ಸೀಟು ಸಂಪೂರ್ಣ ಬೆಡ್ ರೀತಿ ಮಡಚಿ ಮಲಗಲು ಸಾಧ್ಯವಿದೆ. ಮೀಟಿಂಗ್, ಸಣ್ಣ ಮಾತುಕತೆಗಳು, ಚಹಾ ಹಾಗೂ ಮಾತುಕತೆ ಹೀಗೆ ಎಲ್ಲಾ ರೀತಿಯಲ್ಲಿ ಬಳಕೆ ಮಾಡಲು ಸಾಧ್ಯವಾಗುವಂತೆ ಕಾರಿನ ಒಳಾಂಗಣ ಹಾಗೂ ಸೀಟುಗಳ್ನು ಡಿಸೈನ್ ಮಾಡಲಾಗಿದೆ. ಇದರ ಪರಿಣಾಮ ಈ ಕಾರು ಹೊಸ ಸಂಚಲನ ಸೃಷ್ಟಿಸುವಲ್ಲಿ ಅನುಮಾನವಿಲ್ಲ.
ಯಾವಾಗ ಕಾರು ಬಿಡುಗಜೆ
ಹೊಸ ಶಓಮಿ ಕಾರು ಚೀನಾದಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ವಿದೇಶಗಳಲ್ಲಿ 2027ರಲ್ಲಿ ಬಿಡುಗಡೆಯಾಗಲಿದೆ. ಭಾರತದ ಮಾರುಕಟ್ಟೆಗೂ ಈ ಕಾರು ಪ್ರವೇಶಿಸುವ ಸಾಧ್ಯತೆ ಇದೆ. ಭಾರತದಲ್ಲಿ ಮೊಬೈಲ್ ಕ್ರಾಂತಿ ಮಾಡಿದ ರೀತಿ ಆಟೋಮೊಬೈಲ್ ಕ್ರಾಂತಿ ಮಾಡಲು ಶಓಮಿ ಪ್ಲಾನ್ ಮಾಡಿಕೊಂಡಿದೆ.
ಕಾರಿನ ಬೆಲೆ
ಶಓಮಿಯ ಹೊಚ್ಚ ಹೊಸ ಸ್ಕೈನೊಮಡ್ ಕಾರಿನ ಬೆಲೆ ಸದ್ಯಕ್ಕೆ ಬಹಿರಂಗವಾಗಿಲ್ಲ. ಇಂಟಲಿಜೆಂಟ್ ಕಾರು ಎಂದೇ ಕಂಪನಿ ಹೇಳಿಕೊಂಡಿದೆ. ಹೆಚ್ಚುವರಿ ಫೀಚರ್, ಸುರಕ್ಷತಾ ಫೀಚರ್ಸ್ ಸೇರಿದಂತೆ ಇತರ ಮಾಹಿತಿಗಳು ಸದ್ಯಕ್ಕೆ ಬಹಿರಂಗವಾಗಲಿದೆ.

