- Home
- Automobile
- Car News
- ಭಾರತದಲ್ಲಿ ಗ್ರೀನ್ SM ಲಿಮೋ 7 ಸೀಟರ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ, ಭರ್ಜರಿ ಡಿಸ್ಕೌಂಟ್
ಭಾರತದಲ್ಲಿ ಗ್ರೀನ್ SM ಲಿಮೋ 7 ಸೀಟರ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ, ಭರ್ಜರಿ ಡಿಸ್ಕೌಂಟ್
ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಗ್ರೀನ್ ಮೊಬಿಲಿಟಿ ಇದೀಗ ಭಾರತದಲ್ಲಿ ಗ್ರೀನ್ ಎಸ್ಎಂ ಲಿಮೋ ಇವಿ ಕಾರು ಬಿಡುಗಡೆ ಮಾಡಿದೆ. 7 ಸೀಟರ್ ಈ ಕಾರು ಜೂನ್ 11ರೊಳಗೆ ಬುಕ್ ಮಾಡಿದರೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.

ಭಾರತದಲ್ಲಿ ಗ್ರೀನ್ ಎಸ್ಎಂ ಲಿಮೋ
ಗ್ರೀನ್ ಮೊಬಿಲಿಟಿ ಸಂಸ್ಥೆಯಾದ ‘ಗ್ರೀನ್ ಎಸ್‌ಎಮ್’ (Green SM) ಭಾರತದಲ್ಲಿ ಇಂದು ತನ್ನ ಸಂಪೂರ್ಣ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯಾದ 'ಗ್ರೀನ್ ಎಸ್‌ಎಮ್ ಲಿಮೋ' (Green SM Limo) ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ವಿಯೆಟ್ನಾಂ, ಲಾವೋಸ್, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ನಂತರ ಭಾರತವು ಈ ಜಾಗತಿಕ ಸಂಸ್ಥೆಯ 5ನೇ ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.
ಆಕರ್ಷಕ ಎಲೆಕ್ಟ್ರಿಕ್ ಕಾರು
ಮೊದಲ ಹಂತದಲ್ಲಿ, ಗ್ರೀನ್ ಎಸ್‌ಎಮ್ ಲಿಮೋ ಸೇವೆಯು ದೆಹಲಿ ರಾಷ್ಟ್ರೀಯ ರಾಜಧಾನಿ ವಲಯದ (Delhi NCR) ಪ್ರಮುಖ ಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಂತ ಹಂತವಾಗಿ ಇತರ ನಗರಗಳಿಗೂ ವಿಸ್ತರಣೆಯಾಗಲಿದೆ. ಈ ಸೇವೆಗಾಗಿ ಕಂಪನಿಯು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ, 7 ಆಸನಗಳ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ 'ವಿನ್‌ಫಾಸ್ಟ್ ಲಿಮೋ ಗ್ರೀನ್' (VinFast Limo Green) ವಾಹನಗಳನ್ನು ರಸ್ತೆಗಿಳಿಸಿದೆ.
ಅತೀ ದೊಡ್ಡ ಕ್ಯಾಬಿನ್
ವಿಶಾಲವಾದ ಕ್ಯಾಬಿನ್ ಹೊಂದಿರುವ ಈ ಪ್ರೀಮಿಯಂ ಇವಿ ಕಾರುಗಳು ದೈನಂದಿನ ಪ್ರಯಾಣ, ಕೌಟುಂಬಿಕ ಪ್ರವಾಸಗಳು, ಕಾರ್ಪೊರೇಟ್ ಸಭೆಗಳು ಮತ್ತು ಏರ್‌ಪೋರ್ಟ್ ವರ್ಗಾವಣೆಗಳಿಗೆ ಶೂನ್ಯ ಮಾಲಿನ್ಯದೊಂದಿಗೆ ಅತ್ಯಂತ ಸುಗಮ ಪ್ರಯಾಣದ ಅನುಭವವನ್ನು ನೀಡಲಿವೆ. ಕ್ಯಾಮೆರಾಗಳು, ಎಐ (AI) ತಂತ್ರಜ್ಞಾನ ಮತ್ತು ಚಾಲಕ ಹಾಗೂ ಪ್ರಯಾಣಿಕರಿಬ್ಬರಿಗೂ ತುರ್ತು ಸಂದರ್ಭದಲ್ಲಿ ನೆರವಾಗುವ ಎಮರ್ಜೆನ್ಸಿ ಬಟನ್‌ಗಳನ್ನು ಒಳಗೊಂಡಿದೆ. ಇವಿ ಕಾರು ಚಾಲನೆ, ರಸ್ತೆ ಸುರಕ್ಷತೆ ಆದ್ಯತೆ ನೀಡಿದೆ.
ಜೂನ್ 11ರೊಳಗೆ ಬುಕ್ ಮಾಡಿದೆ ಆಫರ್
ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ 'Green SM' ಆಪ್ ಡೌನ್‌ಲೋಡ್ ಮಾಡಿ, ಹಾಟ್‌ಲೈನ್ ಮೂಲಕ ಅಥವಾ ನೇರವಾಗಿ ರಸ್ತೆಯಲ್ಲಿ ವಾಹನವನ್ನು ಬುಕ್ ಮಾಡಬಹುದು. ಭಾರತೀಯ ಮಾರುಕಟ್ಟೆ ಪ್ರವೇಶದ ಸಂಭ್ರಮಕ್ಕಾಗಿ ಜೂನ್ 5 ರಿಂದ ಜೂನ್ 11 ರವರೆಗೆ ಆಪ್ ಮೂಲಕ ಬುಕ್ ಮಾಡುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಸಿಗಲಿದೆ.

