MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಟಾಟಾ, ಮಹೀಂದ್ರಾ ಕಾರುಗಳಿಗೆ ಠಕ್ಕರ್, ಬಿವೈಡಿ Atto 2 ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್

ಟಾಟಾ, ಮಹೀಂದ್ರಾ ಕಾರುಗಳಿಗೆ ಠಕ್ಕರ್, ಬಿವೈಡಿ Atto 2 ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್

ಟಾಟಾ ಮೋಟಾರ್ಸ್ , ಎಂಜಿ ಮೋಟಾರ್ಸ್, ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳಿಗೆ ಚೀನಾದ ಬಿವೈಡಿ ಶಾಕ್ ನೀಡಿದೆ. ಈಗಾಗಲೇ ಟೆಸ್ಟಿಂಗ್ ಮುಗಿಸಿರುವ ಬಿವೈಡಿ ಅಟ್ಟೋ 2 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುತತ್ತಿದೆ. ಇದರ ಬೆಲೆ, ಫೀಚರ್ ,ವಿಶೇಷತೆ ಏನು?

2 Min read
Author : Chethan Kumar
Published : Jul 31 2026, 06:31 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದಲ್ಲಿ ಬಿವೈಡಿ ಅಟ್ಟೋ 2 ಕಾರು
Image Credit : BYD Global

ಭಾರತದಲ್ಲಿ ಬಿವೈಡಿ ಅಟ್ಟೋ 2 ಕಾರು

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಇದರ ಜೊತೆಗೆ ಎಂಜಿ ಮೋಟಾರ್ಸ್, ಹ್ಯುಂಡೈ, ಮಾರುತಿ, ಮಹೀಂದ್ರ ಸೇರಿದಂತೆ ಹಲವು ಕಾರುಗಳಿಗೆ ತೀವ್ರ ಸ್ಪರ್ಧೆ ಎದುರಾಗಿದೆ. ಭಾರತದಲ್ಲಿ ಈಗಾಗಲೇ ಬಿವೈಡಿ ಕಾರುಗಳು ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆಕರ್ಷಕ ಲುಕ್, ಗರಿಷ್ಠ ಮೈಲೇಜ್ , ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಬಿವೈಡಿ ಇದೀಗ ಭಾರತದಲ್ಲಲಿ ಅಟ್ಟೋ 2 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಯಾವ ಕಾರಿಗೆ ಪ್ರತಿಸ್ಪರ್ಧಿ
Image Credit : BYD Atto 2

ಯಾವ ಕಾರಿಗೆ ಪ್ರತಿಸ್ಪರ್ಧಿ

ಬಿವೈಡಿ ಆಟ್ಟೋ 2 ಎಲೆಕ್ಟ್ರಿಕ್ ಎಸ್‌ಯುವಿ ಕಾರು. ನೇರವಾಗಿ ಟಾಟಾ ನೆಕ್ಸಾನ್, ಮಹೀಂದ್ರ ಬಿಇ, ಎಂಜಿ ಝೆಡ್ ಎಸ್, ಹ್ಯುಂಡ್ರೆ ಕ್ರೆಟಾ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಭಾರತದಲ್ಲಿ ಬಿವೈಡಿ ಅಟ್ಟೋ 2 ಕಾರು ಭಾರತದ ರಸ್ತೆಗಳಲ್ಲಿ ಟೆಸ್ಟಿಂಗ್ ಮುಗಿಸಿದೆ. ಶೀಘ್ರದಲ್ಲೇ ಬಿವೈಡಿ ಅಟ್ಟೋ 2 ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

Related Articles

Related image1
ಮಾರುತಿ ಸುಜುಕಿಗೆ ಶುರುವಾಯ್ತು ನಡುಕ, ಶೀಘ್ರದಲ್ಲೇ ಟಾಟಾ ಮೋಟಾರ್ಸ್‌ನಿಂದ 3 ಹೈಬ್ರಿಡ್ ಕಾರು ಲಾಂಚ್
Related image2
ಒಬ್ಬರಿಗೆ ಒಂದು ಕಾರು ಮಾತ್ರ, ಹೆಚ್ಚುವರಿ ವಾಹನ ಬಳಕೆಗೆ ಬ್ರೇಕ್, ಕೇಂದ್ರದಿಂದ ಹೊಸ ನೀತಿ ಜಾರಿ
36
ಬಿವೈಡಿ ಅಟ್ಟೋ 2 ಕಾರು ಮೈಲೇಜ್
Image Credit : BYD Atto 2

ಬಿವೈಡಿ ಅಟ್ಟೋ 2 ಕಾರು ಮೈಲೇಜ್

ಬಿವೈಡಿ ಅಟ್ಟೋ 2 ಕಾರು 45.1 kWh ಹಾಗೂ 51.1 kWh ಬ್ಯಾಟರಿ ಪ್ಯಾಕ್‌ನಲ್ಲಿ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 310 ಕಿಲೋಮೀಟರ್ ಹಾಗೂ 410 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. 7.9 ಸೆಕೆಂಡ್‌ನಲ್ಲಿ 0-100 ಕಿ.ಮಿ ವೇಗ ಪಡೆದುಕೊಳ್ಳಲಿದೆ. ಗರಿಷ್ಠ ವೇಗ 160 ಕಿಲೋಮೀಟರ್.

46
ಬಿವೈಡಿ ಅಟ್ಟೋ 2 ಕಾರಿನ ಬೆಲೆ
Image Credit : BYD Atto 2

ಬಿವೈಡಿ ಅಟ್ಟೋ 2 ಕಾರಿನ ಬೆಲೆ

ಬಿವೈಡಿ ಅಟ್ಟೋ 2 ಕಾರಿನ ಬೆಲೆ 20 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಶೇಷ ಅಂದರೆ ಪ್ಯೂರ್ ಎಲೆಕ್ಟ್ರಿಕ್ ಹಾಗೂ ಡಿಎಂ ಪ್ಲಗ್ ಇನ್ ಹೈಬ್ರಿಡ್ ವರ್ಶನ್ ಮೂಲಕ ಕಾರು ಬಿಡುಗಡೆಯಾಗಲಿದೆ. ಚೀನಾದಲ್ಲಿ ಆಟ್ಟೋ 2 ಯಶಸ್ವಿ ಕಾರಾಗಿದೆ. ಇದೀಗ ಭಾರತದಲ್ಲಿ ಹೊಸ ಅಧ್ಯಾಯ ಬರೆಯುವ ಸಾಧ್ಯತೆ ಇದೆ.

56
ಹೊಸ ಆಟ್ಟೋ 2 ಕಾರಿನ ಫೀಚರ್
Image Credit : BYD Atto 2

ಹೊಸ ಆಟ್ಟೋ 2 ಕಾರಿನ ಫೀಚರ್

ಅಟ್ಟೋ 2 ಕಾರಿನ ಇಂಟಿರಿಯರ್ ಬ್ಲಾಕ್ ಥೀಮ್ ಇರಲಿದೆ. 12.8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್, ಆ್ಯಂಬಿಯೆಂಟ್ ಲೈಟಿಂಗ್, ಚಾರ್ಚಿಂಗ್ ಪೋರ್ಟ್ಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 8.8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆವೆಲ್ 2 ಅಡಾಸ್ ಫೀಚರ್, 360 ಡಿಗ್ರಿ ಕ್ಯಾಮೆರಾ, 50W ವೈಯರ್‌ಲೆಸ್ ಚಾರ್ಜರ್, ಪನರೋಮಿಕ್ ಸನ್‌ರೂಫ್, ಕೀ ಲೆಸ್ ಎಂಟ್ರಿ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

66
ಕುತೂಹಲ ಕೆರಳಿಸಿದ ಆಟ್ಟೋ 2
Image Credit : BYD Atto 2

ಕುತೂಹಲ ಕೆರಳಿಸಿದ ಆಟ್ಟೋ 2

ಅಟ್ಟೋ 2 ಕಾರು ಎಲ್ಇಡಿ ಹೆಡ್‌ಲ್ಯಾಂಪ್ಸ್, ಡ್ಯುಯೆಲ್ ಫಂಕ್ಷನ್ ಎಲ್ಇಡಿ ಡಿಆರ್‌ಎಲ್, 17 ಇಂಚಿನ ಅಲೋಯ್ ವ್ಹೀಲ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಫಾಕ್ಸ್ ಸ್ಕಿಡ್ ಪ್ಲೇಟ್, ಬಾಡಿ ಕ್ಲಾಡಿಂಗ್, ರೆಫ್ಲೆಕ್ಟರ್, ರೂಫ್ ಸ್ಪಾಯ್ಲರ್, ಶಾರ್ಕ್ ಫಿನ್ ಆ್ಯಂಟೆನಾ ಇದರಲ್ಲಿದೆ. ಭಾರತದಲ್ಲಿ ಬಿವೈಡಿ ಅಟ್ಟೋ 3 ಕಾರು ಈಗಾಗಲೇ ಮಾರುಕಟ್ಟೆಯಲ್ಲಿದೆ. ಇದೀಗ ಅಟ್ಟೋ 2 ಭಾರಿ ಕುತೂಹಲ ಕೆರಳಿಸಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಟೋಮೊಬೈಲ್
ಕಾರುಗಳು
ಭಾರತ ಸುದ್ದಿ
Latest Videos
Recommended Stories
Recommended image1
ಕ್ರೆಟಾ, ಥಾರ್‌, ಫಾರ್ಚೂನರ್‌ಗೆ ಟಕ್ಕರ್‌ ನೀಡಲು ಐದು ಹೊಸ SUV ಜೊತೆ ಮಾರುಕಟ್ಟೆಗೆ JSW Motors ಎಂಟ್ರಿ!
Recommended image2
ಐಷಾರಾಮಿ ಕಾರು ಕಂಪನಿ BMW, ಪೋರ್ಷೆಯಲ್ಲೂ ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳ ಲೇಆಫ್‌!
Recommended image3
ಮೈಲೇಜ್, ಮೆಂಟೇನೆನ್ಸ್ ಚಿಂತೆ ಇಲ್ಲ, ಮಾರುತಿ ಬ್ರೆಜಾ ರೀತಿ ಕೈಗೆಟುಕುವ ದರದಲ್ಲಿ ಹೊಸ ಬಲೆನೋ ಫೇಸ್‌ಲಿಫ್ಟ್
Related Stories
Recommended image1
ಮಾರುತಿ ಸುಜುಕಿಗೆ ಶುರುವಾಯ್ತು ನಡುಕ, ಶೀಘ್ರದಲ್ಲೇ ಟಾಟಾ ಮೋಟಾರ್ಸ್‌ನಿಂದ 3 ಹೈಬ್ರಿಡ್ ಕಾರು ಲಾಂಚ್
Recommended image2
ಒಬ್ಬರಿಗೆ ಒಂದು ಕಾರು ಮಾತ್ರ, ಹೆಚ್ಚುವರಿ ವಾಹನ ಬಳಕೆಗೆ ಬ್ರೇಕ್, ಕೇಂದ್ರದಿಂದ ಹೊಸ ನೀತಿ ಜಾರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved