ಉತ್ತಮ ಮೈಲೇಜ್, ನಿರ್ವಹಣಾ ವೆಚ್ಚ ಕಡಿಮೆ. ಇನ್ನು ಕಾರಿನ ಬೆಲೆಯೂ ಕಡಿಮೆ. ಇದು ಹೊಸ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು. ಈ ಕಾರು ಬಿಡುಗಡೆ ಯಾವಾಗ? ಕಾರು ಖರೀದಿಸುವ ಮಂದೆ ಹೊಸ ಕಾರಿಗೆ ಎಷ್ಟು ದಿನ ಕಾಯಬೇಕು?

ನವದೆಹಲಿ (ಜು.29) ಮಾರುತಿ ಸುಜುಕಿ ಹೊಸ ಬ್ರೇಜಾ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿ ಬಾರಿ ಸಂಚಲನ ಸೃಷ್ಟಿಸಿದೆ. ಕೇವಲ 7.39 ಲಕ್ಷ ರೂ ಆರಂಭಿಕ ಬೆಲೆಯಲ್ಲಿ ಬ್ರೆಜಾ ಫೇಸ್‌ಲಿಫ್ಟ್ ಬಿಡುಗಡೆಯಾಗಿದೆ. ಇದರಿಂದ ಅತೀ ಕಡಿಮೆ ಬೆಲೆಗೆ ಎಸ್‌ಯುವಿ ಕಾರು ಲಭ್ಯವಾಗಿದೆ. ಇದೀಗ ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಮುಂದಾಗಿದೆ. ಕೈಗೆಟುಕುವ ದರ, ಕಡಿಮೆ ನಿರ್ವಹಣಾ ವೆಚ್ಚ, ಗರಿಷ್ಠ ಮೈಲೇಜ್, ಫೀಚರ್ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿದೆ.

ಮಾರುತಿ ಸುಜುಕಿ ಬಲೆನೋ ಫೇಸ್‌ಲಿಫ್ಟ್ ಅತೀ ಹೆಚ್ಚು ಜನಪ್ರಿಯತೆ, ಅತೀ ಹೆಚ್ಚು ಮಾರಾಟವಾಗುತ್ತಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು. ಹೊಸ ಬಲೆನೋ ಫೇಸ್‌ಲಿಫ್ಟ್ ಕಾರಿನಲ್ಲಿ ಹಲವು ಬದಲಾವಣೆಗಳಿವೆ. ಪವರ್, ಎಂಜಿನ್ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಆದರೆ ಫೀಚರ್, ತಂತ್ರಜ್ಞಾನಗಳು ಹೊಸದು. ಜೊತೆಗೆ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಟೈಲ್ ಲೈಟ್ಸ್ ಸೇರಿದಂತೆ ಹಲವು ಹೊಸತನಗಳು ಇದರಲ್ಲಿದೆ.

ಹೊಸ ಬಲೆನೋ ಬೆಲೆ ಎಷ್ಟು?

ಮಾರುತಿ ಸುಜುಕಿ ಫೇಸ್‌ಲಿಫ್ಟ್ ಬೆಲೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬಲೆನೋ ಬೆಲೆ5.99 ಲಕ್ಷ ರೂಪಾಯಿಯಿಂದ 9.17 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ವರೆಗಿದೆ. ಹೊಸ ಬಲೆನೋ ಫೇಸ್‌ಲಿಫ್ಟ್ ಬೆಲೆ ಇನ್ನು ಬಹಿರಂಗವಾಗಲಿದೆ. ಹೊಸ ಬಲೆನೋ ಬೆಲೆಯಲ್ಲಿ ಕೊಂಚ ಏರಿಕೆಯಾಗಲಿದೆ ಅನ್ನೋ ಮಾತಗಳು ಕೇಳಿಬರುತ್ತಿದೆ.

ಇನ್ಫೊಟೈನ್ಮೆಂಟ್ ಟಚ್‌ಸ್ಕ್ರೀನ್, ಹೆಡ್ ಅಪ್ ಡಿಸ್‌ಫ್ಲೇ, ಕ್ಲಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಕೆಲ ಫೀಚರ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಹೊಸ ಕಾರು 1.3 ಲೀಟರ್, 4 ಸಿಲಿಂಡರ್, ಪೆಟ್ರೋಲ್ ಎಂಜಿನ್ ಹೊಂದಿದ್ದು 90ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಹೊಂದಿದೆ. ಇನ್ನು ಮಾನ್ಯುಯೆಲ್ ಗೇರ್‌ಬಾಕ್ಸ್ ಹಾಗೂ 5 ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಶನ್ ಹೊಂದಿದೆ.

ಬಲೆನೋ ಜೊತೆಗೆ ಮಾರುತಿ ಸುಜುಕಿ ಫ್ರಾಂಕ್ಸ್ ಫೇಸ್‌ಲಿಫ್ಟ್ ಕೂಡ ಬಿಡುಗಡೆಯಾಗುತ್ತಿದೆ. 1.0 ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಮೂಲಕ ಫೇಸ್‌ಲಿಫ್ಟ್ ಫ್ರಾಂಕ್ಸ್ ಬಿಡುಗಡೆಯಾಗಲಿದೆ. ವಿಶೇಷ ಅಂದರೆ ಹೊಸ ಹೈಬ್ರಿಡ್ ಸಿಸ್ಟಮ್ ಎಂಜಿನ್ ಆಯ್ಕೆಯೂ ಲಭ್ಯವಾಗಲಿದೆ.