MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ

Zomato: ಹಳೆ ಉದ್ಯೋಗಿಗಳಿಗೆ ಬಂಪರ್ ಆಫರ್ ಕೊಟ್ಟ CEO! ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ

ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಮಾಡಿದ ಒಂದೇ ಒಂದು ಘೋಷಣೆಗೆ ಬರೋಬ್ಬರಿ 8000 ಇಮೇಲ್‌ಗಳು ಬಂದಿವೆ. ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಿದ್ದವರಿಗೆ ಮತ್ತೆ ಉದ್ಯೋಗಾವಕಾಶ ನೀಡುವುದಾಗಿ ಅವರು ಹೇಳಿದ್ದರು. ಇದಕ್ಕೆ ಸಾವಿರಾರು ಮಂದಿ ಸ್ಪಂದಿಸಿದ್ದಾರೆ.

2 Min read
Author : Naveen Kodase
Published : Feb 13 2026, 10:22 AM IST
Share this Photo Gallery
  • FB
  • TW
  • Linkdin
  • Whatsapp
16
ಝೊಮ್ಯಾಟೋ ಮಾಲೀಕ ದೀಪಿಂದರ್ ಗೋಯಲ್ ಆಫರ್
Image Credit : Getty

ಝೊಮ್ಯಾಟೋ ಮಾಲೀಕ ದೀಪಿಂದರ್ ಗೋಯಲ್ ಆಫರ್

ಝೊಮ್ಯಾಟೋ ಮಾಲೀಕ ದೀಪಿಂದರ್ ಗೋಯಲ್ ಮಾಡಿದ ಒಂದು ಕೆಲಸಕ್ಕೆ ಅವರಿಗೆ ಅನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿದೆ. ಈ ಘೋಷಣೆ ಉದ್ಯಮ ಜಗತ್ತಿನಲ್ಲಿ, ವಿಶೇಷವಾಗಿ ಸ್ಟಾರ್ಟ್‌ಅಪ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. 

26
ಆಶ್ಚರ್ಯಚಕಿತರಾದ ದೀಪಿಂದರ್ ಗೋಯಲ್
Image Credit : Getty

ಆಶ್ಚರ್ಯಚಕಿತರಾದ ದೀಪಿಂದರ್ ಗೋಯಲ್

ಹಿಂದೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಿದ ಪ್ರತಿಭಾವಂತ ಉದ್ಯೋಗಿಗಳು ಹಿಂತಿರುಗಬೇಕೆಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಕರೆ ನೀಡಿದ್ದರು. ಇದಕ್ಕಾಗಿ ವಿಶೇಷ ಇಮೇಲ್ ಐಡಿಯನ್ನೂ ಹಂಚಿಕೊಂಡಿದ್ದರು. ಕೆಲವೇ ದಿನಗಳಲ್ಲಿ, ಸುಮಾರು 8,000 ಇಮೇಲ್‌ಗಳು ಬಂದಿವೆ. ಇದನ್ನು ನೋಡಿ ತಾವೇ ಆಶ್ಚರ್ಯಚಕಿತರಾಗಿದ್ದಾಗಿ ದೀಪಿಂದರ್ ಗೋಯಲ್ ಹೇಳಿದ್ದಾರೆ.

Related Articles

Related image1
ಝೊಮ್ಯಾಟೋ ಶುದ್ಧ ಸಸ್ಯಾಹಾರಿ ಮೋಡ್ ಆರಂಭಿಸಿದ್ದೇಕೆ? ಟೀಕೆಗಳ ನಡುವೆ ಕಾರಣ ಬಿಚ್ಚಿಟ್ಟ ಸಿಇಒ ದೀಪಿಂದರ್ ಗೋಯಲ್
Related image2
ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!
36
ಬಂದ ಇಮೇಲ್ ಪೈಕಿ 4,000 ಮಾಜಿ ಉದ್ಯೋಗಿಗಳವು
Image Credit : Getty

ಬಂದ ಇಮೇಲ್ ಪೈಕಿ 4,000 ಮಾಜಿ ಉದ್ಯೋಗಿಗಳವು

ಬಂದ ಇಮೇಲ್‌ಗಳಲ್ಲಿ ಸುಮಾರು 4,000 ಮಾಜಿ ಉದ್ಯೋಗಿಗಳಿಂದ ಬಂದಿದ್ದವು. ಉಳಿದ 4,000 ಇಮೇಲ್‌ಗಳು ಹೊಸದಾಗಿ ಕಂಪನಿ ಸೇರಲು ಆಸಕ್ತಿ ತೋರಿದವರಿಂದ ಬಂದಿವೆ ಎಂದು ದೀಪಿಂದರ್ ಗೋಯಲ್ ತಿಳಿಸಿದ್ದಾರೆ. 

46
ಭಾವುಕರಾದ ಝೊಮ್ಯಾಟೋ ಸಿಇಒ
Image Credit : social media

ಭಾವುಕರಾದ ಝೊಮ್ಯಾಟೋ ಸಿಇಒ

ಹಳೆಯ ಉದ್ಯೋಗಿಗಳು ಕಳುಹಿಸಿದ ಇಮೇಲ್‌ಗಳನ್ನು ಓದುವಾಗ ತುಂಬಾ ಭಾವುಕನಾದೆ ಎಂದಿದ್ದಾರೆ. ಕಂಪನಿಯ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳು, ಒಟ್ಟಿಗೆ ಕೆಲಸ ಮಾಡಿದ ಅನುಭವಗಳು ಮತ್ತು ಆ ದಿನಗಳ ನೆನಪುಗಳನ್ನು ಅವರು ವಿವರಿಸಿದ್ದಾರೆ. ಇವುಗಳನ್ನು ಓದುವಾಗ ಹೆಮ್ಮೆಯೆನಿಸಿತು ಎಂದು ಗೋಯಲ್ ಹೇಳಿದ್ದಾರೆ.

56
ತಾವೇ ಖುದ್ದಾಗಿ ಮೇಲ್ ಓದುತ್ತಿರುವ ಝೊಮ್ಯಾಟೋ ಸಿಇಒ
Image Credit : Getty

ತಾವೇ ಖುದ್ದಾಗಿ ಮೇಲ್ ಓದುತ್ತಿರುವ ಝೊಮ್ಯಾಟೋ ಸಿಇಒ

ಇಷ್ಟೊಂದು ಇಮೇಲ್‌ಗಳು ಬಂದಿರುವುದರಿಂದ ಎಲ್ಲವನ್ನೂ ಓದುವುದು ಕಷ್ಟವಾಗಿದೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ. ಕೆಲವು ಇಮೇಲ್‌ಗಳಲ್ಲಿನ ವಿಷಯಗಳನ್ನು ತಮ್ಮ ಎಚ್‌ಆರ್ ತಂಡಕ್ಕೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ತಾವೇ ಖುದ್ದಾಗಿ ಹಲವು ಇಮೇಲ್‌ಗಳನ್ನು ಓದುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಹಿಂದೆ ನೇರವಾಗಿ ತನ್ನೊಂದಿಗೆ ಕೆಲಸ ಮಾಡಿದವರು ಇಮೇಲ್ ರಿಪ್ಲೈಗಾಗಿ ಕಾಯಬೇಡಿ, ನನ್ನ ಫೋನ್ ನಂಬರ್ ಹುಡುಕಿ ನೇರವಾಗಿ ವಾಟ್ಸಾಪ್ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ. ದೊಡ್ಡ ಕಂಪನಿಯ ಸಂಸ್ಥಾಪಕರೊಬ್ಬರು ಹೀಗೆ ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
66
ಗೋಯಲ್ ನಿರ್ಧಾರ ಸ್ವಾಗತಿಸಿದ ನೆಟ್ಟಿಗರು
Image Credit : Getty

ಗೋಯಲ್ ನಿರ್ಧಾರ ಸ್ವಾಗತಿಸಿದ ನೆಟ್ಟಿಗರು

ದೀಪಿಂದರ್ ಗೋಯಲ್ ಅವರ ಈ ಘೋಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಗೋಯಲ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಸ್ಟಾರ್ಟ್‌ಅಪ್ ವಲಯದಲ್ಲಿ ಲೇ-ಆಫ್‌ಗಳು ನಡೆಯುತ್ತಿರುವ ಈ ಸಮಯದಲ್ಲಿ, ಹಳೆಯ ಉದ್ಯೋಗಿಗಳನ್ನು ಮರಳಿ ಆಹ್ವಾನಿಸುವುದು ಉತ್ತಮ ಬೆಳವಣಿಗೆ ಎಂದು ಹೇಳುತ್ತಿದ್ದಾರೆ. ಕಂಪನಿಯೊಂದಿಗೆ ಸಂಬಂಧ ಹೊಂದಿದ್ದವರನ್ನು ಗೌರವಿಸುವುದು ಮತ್ತು ಅವರ ಅನುಭವವನ್ನು ಮರುಬಳಕೆ ಮಾಡಿಕೊಳ್ಳುವುದು ಒಳ್ಳೆಯ ನಿರ್ಧಾರ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಮೇಲ್ ಕಳುಹಿಸಿದವರಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಜೊಮಾಟೊ
ಆಹಾರ
ಸ್ಟಾರ್ಟ್ ಅಪ್
ಉದ್ಯೋಗಗಳು

Latest Videos
Recommended Stories
Recommended image1
ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ ಎಂದು ಬಣ್ಣಿಸಿದ ಟ್ರಂಪ್: ನಮ್ಮ ದೇಶದ ಮೇಲೆ ಬೀರುವ ಪರಿಣಾಮವೇನು?
Recommended image2
ಭಾರತದ ಶೇ.62ರಷ್ಟು ಜೆನ್‌ಝಿ, ಮಿಲೇನಿಯಲ್ಸ್‌ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ
Recommended image3
ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ
Related Stories
Recommended image1
ಝೊಮ್ಯಾಟೋ ಶುದ್ಧ ಸಸ್ಯಾಹಾರಿ ಮೋಡ್ ಆರಂಭಿಸಿದ್ದೇಕೆ? ಟೀಕೆಗಳ ನಡುವೆ ಕಾರಣ ಬಿಚ್ಚಿಟ್ಟ ಸಿಇಒ ದೀಪಿಂದರ್ ಗೋಯಲ್
Recommended image2
ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved