Elon Musk Space X : ಸ್ಪೇಸ್ ಎಕ್ಸ್ ಐಪಿಒನಿಂದ ಬರೀ ಎಲಾನ್ ಮಸ್ಕ್ ಅದೃಷ್ಟ ಮಾತ್ರವಲ್ಲ ಉದ್ಯೋಗಿಗಳ ಹಣೆಬರಹ ಕೂಡ ಬದಲಾಗಲಿದೆ. ಅವರು ಕೋಟ್ಯಾಧಿಪತಿಗಳಾಗಲಿದ್ದಾರೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. 

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಅವರ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ SpaceX ಜೂನ್ 12 ರಂದು ತನ್ನ ಬಹು ನಿರೀಕ್ಷಿತ IPO ಅನ್ನು ಬಿಡುಗಡೆ ಮಾಡುತ್ತಿದೆ. ವರದಿಗಳ ಪ್ರಕಾರ, ಇದು ಇತಿಹಾಸದ ಅತಿದೊಡ್ಡ IPO ಆಗಲಿದೆ. ಮಾಹಿತಿ ಪ್ರಕಾರ, ಸ್ಪೇಸ್ಎಕ್ಸ್ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ತಕ್ಷಣ ಕಂಪನಿಯ 4,400 ಕ್ಕೂ ಹೆಚ್ಚು ಉದ್ಯೋಗಿಗಳು ಮಿಲಿಯನೇರ್ ಆಗುವ ಸಾಧ್ಯತೆ ಇದೆ.

ಸ್ಪೇಸ್ ಎಕ್ಸ್ ಐಪಿಒ ಬೆಲೆ

ಎಲಾನ್ ಮಸ್ಕ್ ಕಂಪನಿ ಸ್ಪೇಸ್ಎಕ್ಸ್, ತನ್ನ ಐಪಿಒನ ಪ್ರತಿ ಷೇರಿನ ಬೆಲೆಯನ್ನು 135 ಡಾಲರ್ ಎಂದು ನಿಗದಿಪಡಿಸಿದೆ. ಮಸ್ಕ್ ಕಂಪನಿಯ ಅಂದಾಜು ಮೌಲ್ಯ ಸುಮಾರು 1.77 ಟ್ರಿಲಿಯನ್ ಡಾಲರ್ ಆಗಲಿದೆ. ವಿಶ್ವದ ಅತಿದೊಡ್ಡ ಐಪಿಒಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಂಪನಿಯು ಐಪಿಒ ಮೂಲಕ 75 ಬಿಲಿಯನ್ ಡಾಲರ್ ಸಂಗ್ರಹಿಸುವ ಗುರಿ ಹೊಂದಿದೆ.

ಇತಿಹಾಸ ರಚಿಸಲಿದ್ದಾರೆ ಎಲಾನ್‌ ಮಸ್ಕ್, ವಿಶ್ವದ ಮೊದಲ ಟ್ರಿಲಿಯನೇರ್‌ ಪಟ್ಟ?

ಸ್ಪೇಸ್ಎಕ್ಸ್ ಉದ್ಯೋಗಿಗಳಿಗೆ ಬಂಪರ್

ವರದಿ ಪ್ರಕಾರ, ಸ್ಪೇಸ್ ಎಕ್ಸ್ ಅಂದಾಜಿನ ಮೌಲ್ಯದಲ್ಲಿ ಮಾರುಕಟ್ಟೆಗೆ ಬಂದ್ರೆ ಅಲ್ಲಿನ 4400 ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ. ಇದರಲ್ಲಿ ಹಾಲಿ ಮತ್ತು ಮಾಜಿ ಉದ್ಯೋಗಿಗಳು ಸೇರಿದ್ದಾರೆ. ಅಂದಾಜಿನ ಪ್ರಕಾರ, ಕಂಪನಿಯ ಮಾಜಿ ಉದ್ಯೋಗಿಗಳು ಕನಿಷ್ಠ 1 ಮಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಸುಮಾರು 400 ಉದ್ಯೋಗಿಗಳು 100 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

Currency Notes: ನಮ್ಮ ದೇಶದಲ್ಲಿ ಹತ್ತು ರೂಪಾಯಿಯಿಂದ 500 ರೂಪಾಯಿ ನೋಟು ಎಲ್ಲಿ ಮುದ್ರಿಸುತ್ತಾರೆ ಗೊತ್ತಾ?

ಸಂಬಳದ ಜೊತೆ ಕಂಪನಿ ಪಾಲು

ಸ್ಪೇಸ್ ಎಕ್ಸ್ ಕಂಪನಿ ತನ್ನ ಉದ್ಯೋಗಿಗಳಿಗೆ ಬರೀ ಸಂಬಳ ನೀಡ್ತಿಲ್ಲ. ಅದು ಕಂಪನಿ ಪಾಲನ್ನು ಕೂಡ ನೀಡ್ತಾ ಬಂದಿದೆ. ಕಂಪನಿಯ ಮೌಲ್ಯಮಾಪನವು ವರ್ಷಗಳಲ್ಲಿ ಏರಿದಂತೆ, ಅವರ ಷೇರುಗಳ ಮೌಲ್ಯವು ವೇಗವಾಗಿ ಹೆಚ್ಚಾಗಿದೆ. ಆರಂಭದಲ್ಲಿ ಸ್ಪೇಸ್ಎಕ್ಸ್ಗೆ ಸೇರಿದ ಉದ್ಯೋಗಿಗಳಿಗೆ ಇದು ಜೀವನವನ್ನು ಬದಲಾಯಿಸ್ತಿದೆ. 2011 ರಲ್ಲಿ ಸ್ಪೇಸ್ಎಕ್ಸ್ಗೆ ಸೇರಿದ ಟ್ರೆವರ್ ಹೈಸ್ ಎಂಬುವವರಿಗೆ ಕಂಪನಿ 100,000 ಕ್ಕೂ ಹೆಚ್ಚು ಷೇರುಗಳನ್ನು ನೀಡಿತ್ತು. ಈಗ, ಪ್ರತಿ ಷೇರಿಗೆ 135 ಡಾಲರ್ ಎಂದು ಲೆಕ್ಕ ಹಾಕಿದ್ರೆ ಅವರ ಷೇರುಗಳು ಕನಿಷ್ಠ 13.5 ಮಿಲಿಯನ್ ಡಾಲರ್ ಅಂದ್ರೆ 115 ಕೋಟಿ ತಲುಪಲಿದೆ.