ವಿಶ್ವದ ಮೊದಲ ಟ್ರಿಲೇನಿಯರ್ ಶ್ರೀಮಂತ ಪಟ್ಟ, ಭಾರತೀಯ ರೂಪಾಯಿಗಳಲ್ಲಿ ಎಲನ್ ಮಸ್ಕ್ ಸಂಪತ್ತು
ವಿಶ್ವದ ಶ್ರೀಮಂತ ಎಲನ್ ಮಸ್ಕ್ ಸಂಪತ್ತು ಎಷ್ಟಿದೆ? ಈ ಸಂಖ್ಯೆ ಎಣಿಸಲು ಸಾಧ್ಯವೆ? ಹಲಲು ರಾಷ್ಟ್ರಗಳ ಆರ್ಥಿಕತೆಗಿಂತ ದುಪ್ಪಟ್ಟು ಸಂಪತ್ತು ಹೊಂದಿರುವ ಮಸ್ಕ್ ಆಸ್ತಿ ಲೆಕ್ಕ ಬಹಿರಂಗವಾಗಿದೆ. ಆದರೆ ಎಣಿಸಲು ಪರದಾಡುವಂತಾಗಿದೆ.

ಎಲನ್ ಮಸ್ಕ್ ಸಂಪತ್ತು
ಎಲನ್ ಮಸ್ಕ್ ಶ್ರೀಘ್ರದಲ್ಲೇ ವಿಶ್ವದ ಮೊದಲ ಟ್ರಿಲೇನಿಯರ್ ಶ್ರೀಮಂತ ಪಟ್ಟ ಮುಡಿಗೇರಿಸಿಕೊಳ್ಳಲಿದ್ದಾರೆ. ಕಾರಣ ಮಸ್ಕ್ ಸಂಪತ್ತು 1 ಟ್ರಿಲಿಯನ್ ಅಮೆರಿಕನ್ ಡಾಲರ್. ಎಲೆಕ್ಟ್ರಿಕ್ ಕಾರು, ಸ್ಪೇಸ್ ಎಕ್ಸ್, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಲಾನ್ ಮಸ್ಕ್ ಹೂಡಿಕೆ ಮಾಡಿದ್ದಾರೆ. ಕೋಟಿ ಕೋಟಿ ಆದಾಯಗಳಿಸುತ್ತಿದ್ದಾರೆ. ಇದೀಗ ಮಸ್ಕ್ ಸಂಪತ್ತನ್ನು ಭಾರತೀಯ ರೂಪಾಯಿಗಳಲ್ಲಿ ಹೇಳಲು ಕಷ್ಟವಾಗುತ್ತಿದೆ. ಕಾರಣ ಈ ಸಂಖ್ಯೆ ಎಷ್ಟು ಅನ್ನೋದು ಒಮ್ಮೆ ಎಣಿಸಿ ನೋಡಿ.
ಭಾರತೀಯ ರೂಪಾಯಿಗಳಲ್ಲಿ ಮಸ್ಕ್ ಸಂಪತ್ತು
ದಿನದಿಂದ ದಿನಕ್ಕೆ ಎಲನ್ ಮಸ್ಕ್ ಆದಾಯ ಡಬಲ್ ಆಗುತ್ತಿದೆ. ಸದ್ಯ ಮಸ್ಕ್ ಸಂಪತ್ತನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಮೌಲ್ಯ ಸರಿಸುಮಾರು, 9,49,50,50,00,00,000. ಈ ಪೈಕಿ ಗರಿಷ್ಠ ಸಂಪತ್ತು ಟೆಸ್ಲಾ ಕಂಪನಿಯಿಂದ ಬರುತ್ತಿದೆ. ಹಲವು ಕ್ಷೇತ್ರಗಳಲ್ಲಿ ಮಸ್ಕ್ ಹೂಡಿಕೆ ಮಾಡಿದ್ದಾರೆ.
ಮಸ್ಕ್ ಉದ್ಯಮಗಳ ಮೌಲ್ಯ
ಟೆಸ್ಲಾ ಷೇರು ಮೌಲ್ಯ $273 ಬಿಲಿಯನ್, ಸ್ಪೇಸ್ ಎಕ್ಸ್ ಮೌಲ್ಯ $841 ಬಿಲಿಯನ್ ಎರಡು ಒಟ್ಟುಗೂಡಿಸಿದರೆ ಸಾವಿರ ಬಿಲಿಯನ್ ದಾಟಲಿದೆ. ಇಷ್ಟೇ ಅಲ್ಲ ಇತರ ಹಲವು ಮೂಲಗಳಿಂದಲೂ ಮಸ್ಕ್ ಇನ್‌ಕಮ್ ಪಡೆಯುತ್ತಿದ್ದಾರೆ. ಇದು ಹಲವು ರಾಷ್ಟ್ರಗಳ ಆರ್ಥಿಕತೆಗಿಂತ ದುಪ್ಪಟ್ಟಾಗಿದೆ.
ಮಸ್ಕ್‌ಗೆ ಸರಿರಾಟಿ ಯಾರು ಇಲ್ಲ
ಎಲನ್ ಮಸ್ಕ್ ಆಸ್ತಿ ಒಟ್ಟು ಲೆಕ್ಕ ಹಾಕಿದರೆ ಕೆಲ ರಾಷ್ಟ್ರಗಳ ಆರ್ಥಿಕತೆಗಿಂತ ಹೆಚ್ಚಿದೆ. ತೈವಾನ ಆರ್ಥಿಕತೆ $977 ಬಿಲಿಯನ್, ಐರ್ಲೆಂಡ್ $779 ಬಿಲಿಯನ್, ಸ್ವೀಡನ್ $760 ಬಿಲಿಯನ್, ಸಿಂಗಾಪುರ $660 ಬಿಲಿಯನ್. ಈ ದೇಶಗಳ ಆರ್ಥಿಕತೆಗಿಂತ ಮಸ್ಕ್ ಸಂಪತ್ತು ಹೆಚ್ಚಿದೆ.
ಹಲವು ಶ್ರೀಮಂತರ ಒಟ್ಟು ಸಂಪತ್ತಿಗಿಂತ ಹೆಚ್ಚು
ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಒರಾಕಲ್‌ನ ಲ್ಯ.ಾರಿ ಎಲ್ಲಿಸನ್, ಗಗೂಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್, ಸರ್ಗೇ ಬ್ರಿನ್ ಎಲ್ಲರ ಸಂಪತ್ತು ಒಟ್ಟುಗೂಡಿಸಿದೆ 1.09 ಟ್ರಿಲಿಯನ್ ಅಮೆರಿಕನ್ ಡಾಲರ್. ಆದರೆ ಎಲಾನ್ ಮಸ್ಕ್ ಸಂಪತ್ತು ಇದಕ್ಕಿಂತ ಹೆಚ್ಚಿದೆ.
ವಿಶ್ವದ 50 ಮೌಲ್ಯಯುತ ಕ್ರೀಡಾ ಫ್ರಾಂಚೈಸಿ ಖರೀದಿಸಿದರೂ ಉಳಿಯುತ್ತೆ ಹಣ
ಎಲನ್ ಮಸ್ಕ್ ವಿಶ್ವದ ಅತ್ಯಂತ ಗರಿಷ್ಠ ಮೌಲ್ಯಯುಳ್ಳ ಕ್ರೀಡಾ ಫ್ರಾಂಚೈಸಿಗಳನ್ನು ಖರೀದಿಸಿದರೂ ಎಸ್ಕ್ ಬಳಿ ಹಣ ಖಾಲಿಯಾಗುವುದಿಲ್ಲ. ಕಾರಣ 50 ಅತೀ ಮೌಲ್ಯದ ಕ್ರೀಡಾ ತಂಡಗಳ ಒಟ್ಟು ಮೌಲ್ಯ ಸರಿಸುಮಾರು 353 ಬಿಲಿಯನ್ ಅಮೆರಿಕನ್ ಡಾಲರ್. ಮಸ್ಕ್ ಸಂಪತ್ತು 1 ಟ್ರಿಲಿಯನ್ ಅಮೆರಿಕನ್ ಡಾಲರ್ ದಾಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

