MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಒಂದು ವರ್ಷ ಭಾರತ ಚಿನ್ನ ಖರೀದಿ ನಿಲ್ಲಿಸಿದರೆ ಕಂಗಾಲಾಗುತ್ತೆ ನಾಲ್ಕು ದೇಶ, ಭಾರತಕ್ಕೇನು ಲಾಭ?

ಒಂದು ವರ್ಷ ಭಾರತ ಚಿನ್ನ ಖರೀದಿ ನಿಲ್ಲಿಸಿದರೆ ಕಂಗಾಲಾಗುತ್ತೆ ನಾಲ್ಕು ದೇಶ, ಭಾರತಕ್ಕೇನು ಲಾಭ?

ಪ್ರಧಾನಿ ಮೋದಿ ಕರೆ ನೀಡಿದಂತೆ ಭಾರತ ಕನಿಷ್ಠ ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸಿದರೆ ಕನಿಷ್ಠ ನಾಲ್ಕು ರಾಷ್ಟ್ರಗಳು ಕಂಗಾಲಾಗಲಿದೆ. ಇದೇ ವೇಳೆ ಭಾರತ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಏನಿದು ಚಿನ್ನದ ಹಿಂದಿನ ಸೀಕ್ರೆಟ್. 

1 Min read
Author : Chethan Kumar
Published : May 13 2026, 03:15 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತ 2ನೇ ಅತೀ ದೊಡ್ಡ ಚಿನ್ನ ಖರೀದಿ ರಾಷ್ಟ್ರ
Image Credit : stockPhoto

ಭಾರತ 2ನೇ ಅತೀ ದೊಡ್ಡ ಚಿನ್ನ ಖರೀದಿ ರಾಷ್ಟ್ರ

ಭಾರತ ವಿಶ್ವದಲ್ಲೇ ಚಿನ್ನ ಖರೀದಿ, ಬಳಕೆ ಮಾಡುವ ರಾಷ್ಟ್ರಗಳ ಪೈಕಿ 2ನೇ ಸ್ಥಾನದಲ್ಲಿದೆ. ಪ್ರತಿ ವರ್ಷ 700 ರಿಂದ 800 ಟನ್ ಚಿನ್ನ ಭಾರತ ಖರೀದಿ ಮಾಡಿಕೊಳ್ಳುತ್ತದೆ. ಈ ಪೈಕಿ ಶೇಕಡಾ 90ರಷ್ಟು ಚಿನ್ನವನ್ನು ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದಕ್ಕಾಗಿ ಭಾರತ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಬಳಸಿಕೊಳ್ಳುತ್ತದೆ. ಇದೇ ಸಮಸ್ಯೆ ಉಲ್ಭಣಿಸುತ್ತಿದೆ.

Add Asianetnews Kannada as a Preferred SourcegooglePreferred
25
ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸಿದರೆ
Image Credit : Getty

ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸಿದರೆ

ಅನಿವಾರ್ಯತೆ ಹೊರತು ಪಡಿಸಿ ಚಿನ್ನ ಖರೀದಿಯನ್ನು ಒಂದು ವರ್ಷ ಮಾಡಬೇಡಿ ಎಂದು ಮೋದಿ ಹೇಳಿದ್ದಾರೆ. ಒಂದು ವರ್ಷ ಭಾರತ ಚಿನ್ನ ಆಮದು ಶೇಕಡಾ 50ರಷ್ಟು ಕಡಿಮೆ ಮಾಡಿದರೆ, ಭಾರತದ 30 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ ಉಳಿತಾಯವಾಗಲಿದೆ. ಶೇಕಡಾ 75ರಷ್ಟು ಚಿನ್ನ ಆಮದು ಕಡಿತಗೊಂಡರೆ ಭಾರತದ 44 ಬಿಲಿಯನ್ ಅಮೆರಿಕನ್ ಎಕ್ಸ್‌ಚೇಂಜ್ ಉಳಿತಾಯವಾಗಲಿದೆ.

Related Articles

Related image1
Do Not Buy Gold: ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?
Related image2
ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ
35
ಯಾವ ದೇಶಕ್ಕೆ ಬೀಳಲಿದೆ ಹೊಡೆತ
Image Credit : X

ಯಾವ ದೇಶಕ್ಕೆ ಬೀಳಲಿದೆ ಹೊಡೆತ

ಭಾರತ ಗರಿಷ್ಠ ಚಿನ್ನವನ್ನು ಸ್ವಿಟ್ಜರ್‌ಲೆಂಡ್, ಯುಎಇ, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಿಂದ ಮಾಡುತ್ತದೆ. ಭಾರತ ಚಿನ್ನ ಖರೀದಿ ಗಣನೀಯವಾಗಿ ಇಳಿಕೆ ಮಾಡಿದರೆ ಈ ನಾಲ್ಕು ರಾಷ್ಟ್ರಗಳು ಕಂಗಾಲಾಗಲಿದೆ. ಕಾರಣ ಈ ನಾಲ್ಕು ದೇಶಗಳು ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪಾಲು ಹೊಂದಿದೆ. ಖರೀದಿ ಇಳಿಕೆಯಾದರೆ ಈ ದೇಶಗಳು ಆರ್ಥಿಕತೆ ಸಮಸ್ಯೆ ಎದುರಾಗಲಿದೆ.

45
ಮೋದಿ ಕರೆಗೆ ಪರ ವಿರೋಧ
Image Credit : X

ಮೋದಿ ಕರೆಗೆ ಪರ ವಿರೋಧ

ಪ್ರಧಾನಿ ನರೇಂದ್ರ ಮೋದಿ ಕರೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ದೇಶದ ಹಿತಕ್ಕಾಗಿ ಅನಗತ್ಯ ಖರೀದಿ ಬೇಡ. ಇದು ಉತ್ತಮ ನಿರ್ಧಾರ. ಜನರು ಈ ಕರೆಗೆ ಸ್ಪಂದಿಸಬೇಕು ಎಂದು ಹಲವು ಆರ್ಥಿಕ ತಜ್ಞರು ಮನವಿ ಮಾಡಿದ್ದಾರೆ.ಇದೇ ವೇಳೆ ಚಿನ್ನ ವ್ಯಾಪಾರಿಗಳು ಸೇರಿದಂತೆ ಇತರರು ಇದರಿಂದ ಚಿನ್ನದ ಮೇಲೆ ಅವಲಂಬಿತರಾಗಿ ಕೆಲಸ ಮಾಡುತ್ತಿರು ವ್ಯಾಪಾರಸ್ಥರು, ಕುಟುಂಬಸ್ಥರು ಬೀದಿಗೆ ಬರುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

55
ಮೋದಿ ಸೂತ್ರ
Image Credit : ANI

ಮೋದಿ ಸೂತ್ರ

ಆರ್ಥಿಕತೆ, ಹಣದುಬ್ಬರ, ವಿದೇಶಿ ವಿನಿಮಯ ಉಳಿತಾಯ ಮಾಡಲು ಪ್ರಧಾನಿ ಮೋದಿ 7 ಸೂತ್ರಗಳನ್ನು ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ಬಳಕೆ, ಪೆಟ್ರೋಲ್ ಡೀಸೆಲ್ ಕಡಿಮೆ ಖರ್ಚು, ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡುವುದು ಸೇರಿದಂತೆ ಹಲವು ಸೂತ್ರಗಳನ್ನು ಮೋದಿ ನೀಡಿದ್ದಾರೆ.

ಮೋದಿ ಸೂತ್ರ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಿನ್ನದ ಬೆಲೆ
ಚಿನ್ನ
ನರೇಂದ್ರ ಮೋದಿ

Latest Videos
Recommended Stories
Recommended image1
Vantara Ice Cream: ಅಂಬಾನಿ ಮಗನ ಹೊಸ ಬ್ಯುಸಿನೆಸ್! ಫಿಲ್ಟರ್ ಕಾಫಿ, ಮಲೈ ಕುಲ್ಫಿ ಐಸ್‌ಕ್ರೀಂಗೆ ಜನ ಏನಂದ್ರು?
Recommended image2
ಅಮೆಜಾನ್ ಸಮ್ಮರ್ ಸೇಲ್ ಧಮಾಕಾ, Vivo, iQOO ಫೋನ್‌ಗಳ ಮೇಲೆ ರೂ. 40,000 ವರೆಗೆ ರಿಯಾಯಿತಿ!
Recommended image3
ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ
Related Stories
Recommended image1
Do Not Buy Gold: ನರೇಂದ್ರ ಮೋದಿ ಹೇಳಿದಂತೆ ಯಾಕೆ 1 ವರ್ಷ ಬಂಗಾರ ಖರೀದಿ ಮಾಡಬಾರದು? ಏನಾಗುತ್ತೆ?
Recommended image2
ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved