MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ

ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ

ಚಿನ್ನ ಖರೀದಿಸಬೇಡಿ ಎಂದು ಮೋದಿ ಕರೆಕೊಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ನೀಡಿದೆ. ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಶೇಕಡಾ 6 ರಿಂದ 15ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಚಿನ್ನದ ಬೆಲೆ ಬಲು ದುಬಾರಿಯಾಗಿದೆ.

1 Min read
Author : Chethan Kumar
Published : May 13 2026, 08:43 AM IST
Share this Photo Gallery
  • FB
  • TW
  • Linkdin
  • Whatsapp
15
ಕೇಂದ್ರದಿಂದ ಚಿನ್ನ ಶಾಕ್
Image Credit : Getty

ಕೇಂದ್ರದಿಂದ ಚಿನ್ನ ಶಾಕ್

ವಿದೇಶಿ ವಿನಿಮಯ ಉಳಿತಾಯ ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ. ಅನಗತ್ಯ ಖರೀದಿಗಳು ಬೇಡ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಚಿನ್ನ ಹಾಗೂ ಬೆಳ್ಳಿ ಆಮದು ಸುಂಕ ಹೆಚ್ಚಳ ಮಾಡಿದೆ.

Add Asianetnews Kannada as a Preferred SourcegooglePreferred
25
ಶೇಕಡಾ 9ರಷ್ಟು ಆಮದು ಸುಂಕ ಏರಿಕೆ
Image Credit : Getty

ಶೇಕಡಾ 9ರಷ್ಟು ಆಮದು ಸುಂಕ ಏರಿಕೆ

ಸದ್ಯ ಚಿನ್ನದ ಮೇಲಿನ ಆಮದು ಸುಂಕ ಶೇಕಡಾ 6ರಷ್ಟಿತ್ತು. ವಿದೇಶಿ ವಿನಿಮಯ ಸಮಸ್ಯೆ, ಹಣದುಬ್ಬರ, ಆರ್ಥಿಕ ಹಿನ್ನಡೆಗಳಿಂದ ಇದೀಗ ಕೇಂದ್ರ ಸರ್ಕಾರ ಸಮಸ್ಯೆಗಳನ್ನು ಸರಿದೂಗಿಸಲು ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇಕಡಾ 6 ರಿಂದ 15ಕ್ಕೆ ಏರಿಕೆ ಮಾಡಿದೆ. ಒಂದೇ ಬಾರಿ ಶೇಕಡಾ 9ರಷ್ಟು ದುಬಾರಿ ಮಾಡಿದೆ.

Related Articles

Related image1
ಒಂದು ವರ್ಷ ಚಿನ್ನ ಖರೀದಿ ಬೇಡ, ಮೋದಿ ಕರೆಕೊಟ್ಟ ಬೆನ್ನಲ್ಲೇ ಇಂದು ಬಂಗಾರದ ಬೆಲೆ ಎಷ್ಟಾಗಿದೆ?
Related image2
ಪೆಟ್ರೋಲ್‌ ಕಡಿಮೆ ಬಳಸಿ, 1 ವರ್ಷ ಚಿನ್ನ ಬಿಡಿ: ಬೆಲೆ ಏರಿಕೆ ನಡುವೆಯೇ ಪ್ರಧಾನಿ ಎಚ್ಚರಿಕೆ
35
ಇಂದಿನಿಂದಲೇ ಹೊಸ ಸುಂಕ ದರ ಜಾರಿ
Image Credit : Getty

ಇಂದಿನಿಂದಲೇ ಹೊಸ ಸುಂಕ ದರ ಜಾರಿ

ಕೇಂದ್ರ ಸರ್ಕಾರದ ಹೊಸ ಸುಂಕ ಇಂದಿನಿಂದಲೇ ಜಾರಿಯಾಗಿದೆ. ಹೀಗಾಗಿ ಒಂದೇ ಬಾರಿ ಚಿನ್ನದ ಬೆಲೆ ಏರಿಕೆಯಾಗಲಿದೆ. ಭಾರತದಲ್ಲಿ ಮೇ ತಿಂಗಳಲ್ಲಿ ಹೆಚ್ಚಿನ ಮದುವೆ ಕಾರ್ಯಕ್ರಮಗಳು ನಡೆಯುತ್ತದೆ. ಹೀಗಾಗಿ ಇದರ ಬೆನ್ನಲ್ಲೇ ಬೆಲೆ ಏರಿಕೆ ಬಿಸಿ ಜನ ಸಾಮಾನ್ಯರ ಕುಟುಂಬಳಿಗೆ ತಟ್ಟಲಿದೆ. ವ್ಯಾಪಾರಿಗಳ ಮೇಲಿ ಬೀಳುವ ಸುಂಕದ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ.

45
ಕರೆಂಟ್ ಅಕೌಂಟ್ ಡಿಫಿಸಿಟ್
Image Credit : X

ಕರೆಂಟ್ ಅಕೌಂಟ್ ಡಿಫಿಸಿಟ್

ಭಾರತ ಅತೀ ಹೆಚು ಚಿನ್ನ ಆಮದು ಮಾಡಿಕೊಳ್ಳುವ ದೇಶ. ಈಗಾಗಲೇ ಕಚ್ಚಾ ತೈಲ ಬೆಲೆ ಗಗನಕ್ಕೇರಿದೆ. ಇದರ ಪರಿಣಾಮ ಭಾರತದ ವಿದೇಶಿ ವಿನಿಮಯ ಅತೀ ವೇಗವಾಗಿ ಕರಗುತ್ತಿದೆ. ಇದರ ನಡುವೆ ಚಿನ್ನದ ಆಮದು ಏರಿಕೆಯಾಗುತ್ತಿದೆ. ಹೀಗಾಗಿ ಕರೆಂಟ್ ಅಕೌಂಟ್ ಡಿಫಿಸಿಟ್ ನಿಯಂತ್ರಣದಲ್ಲಿಡಲು ಭಾರತ ಚಿನ್ನದ ಬೇಡಿಕೆ ತಗ್ಗಿಸಲು ಪ್ರಯತ್ನಿಸುತ್ತಿದೆ.

55
ಗೋಲ್ಡ್ ಸ್ಮಗ್ಲಿಂಗ್ ಸಾಧ್ಯತೆ
Image Credit : Google

ಗೋಲ್ಡ್ ಸ್ಮಗ್ಲಿಂಗ್ ಸಾಧ್ಯತೆ

ಒಂದೇ ಬಾರಿ ಚಿನ್ನದ ಮೇಲಿನ ಸುಂಕ ಸರಿಸುಮಾರು 9ರಷ್ಟು ಹೆಚ್ಚಳವಾಗಿದೆ. ಇದರಿಂದ ಚಿನ್ನದ ಬೆಲೆ ಬಲು ದುಬಾರಿಯಾಗಲಿದೆ. ಇದರ ಪರಿಣಾಮ ಚಿನ್ನದ ಕಳ್ಳ ಸಾಗಾಣೆ ಹೆಚ್ಚಾಗಲಿದೆ ಎಂಬ ಆತಂಕವನ್ನು ಆರ್ಥಿಕ ತಜ್ಞರು ನೀಡಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ಸಾಧ್ಯತೆ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಿನ್ನದ ಬೆಲೆ
ಬೆಳ್ಳಿ ದರ
ಆಮದು ಮತ್ತು ರಫ್ತು
ಭಾರತ ಸುದ್ದಿ

Latest Videos
Recommended Stories
Recommended image1
Gig Workers: 90,000 ಡೆಲಿವರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಘೋಷಿಸಿದ ಅಮೆಜಾನ್ ಇಂಡಿಯಾ
Recommended image2
ಮಿತವ್ಯಯ ಸೂತ್ರ ಪಾಲನೆ ಜಾರಿಗೊಳಿಸಲು ಮುಂದಾದ ಕೇಂದ್ರ, ಯೋಜನೆ ಸಲ್ಲಿಸಲು ಸಚಿವಾಲಯಗಳಿಗೆ ಆದೇಶ, ಎಲ್ಲವೂ ಬದಲಾಗಲಿದೆ!
Recommended image3
ಷೇರು ಮಾರುಕಟ್ಟೆ ಕುಸಿತಕ್ಕೆ 4 ದಿನದಲ್ಲಿ ₹16.77 ಲಕ್ಷ ಕೋಟಿ ಧೂಳೀಪಟ! ಹೂಡಿಕೆದಾರರಿಗೆ ತಜ್ಞರ ಸಲಹೆ ಇಲ್ಲಿವೆ!
Related Stories
Recommended image1
ಒಂದು ವರ್ಷ ಚಿನ್ನ ಖರೀದಿ ಬೇಡ, ಮೋದಿ ಕರೆಕೊಟ್ಟ ಬೆನ್ನಲ್ಲೇ ಇಂದು ಬಂಗಾರದ ಬೆಲೆ ಎಷ್ಟಾಗಿದೆ?
Recommended image2
ಪೆಟ್ರೋಲ್‌ ಕಡಿಮೆ ಬಳಸಿ, 1 ವರ್ಷ ಚಿನ್ನ ಬಿಡಿ: ಬೆಲೆ ಏರಿಕೆ ನಡುವೆಯೇ ಪ್ರಧಾನಿ ಎಚ್ಚರಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved