ಬೆಳ್ಳಿ-ರೇಷ್ಮೆ ಲೆಹೆಂಗಾ, ವಜ್ರ, ಪಚ್ಚೆ ಆಭರಣದಲ್ಲಿ ಮಿಂಚಿದ ಅನಿಲ್ ಅಂಬಾನಿ ಸೊಸೆ!
ರಿಲಯನ್ಸ್ ಗ್ರೂಪ್ (Reliance Group) ಅಧ್ಯಕ್ಷ ಅನಿಲ್ ಅಂಬಾನಿ (Anil Ambani) ಮತ್ತು ಟೀನಾ ಅಂಬಾನಿ (Tina Ambani) ಅವರ ಹಿರಿಯ ಪುತ್ರ ಜೈ ಅನ್ಮೋಲ್ ಅಂಬಾನಿ (Jai Anmol Ambani) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನ್ಮೋಲ್ ತನ್ನ ದೀರ್ಘ ಕಾಲದ ಗೆಳತಿ ಕ್ರಿಶಾ ಶಾ (Khrisha Shah) ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕ್ರಿಶಾಳನ್ನು ಮದುವೆಯಾಗುವ ಮೂಲಕ ಅನ್ಮೋಲ್ ಅಂಬಾನಿ ಕುಟುಂಬದ ಸೊಸೆಯಾಗಿದ್ದಾರೆ. ಮದುವೆಯಲ್ಲಿ ಅಂಬಾನಿ ಕುಟುಂಬದ ಸದಸ್ಯರಲ್ಲದೇ, ಅನೇಕ ಬಾಲಿವುಡ್ (Bollywood) ಗಣ್ಯರು ಮತ್ತು ರಾಜಕಾರಣಿಗಳು ಸಹ ಭಾಗವಹಿಸಿದ್ದರು. ಅನ್ಮೋಲ್-ಕ್ರಿಶಾ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿವೆ. ವಧುವಾಗಿ ಮಾರ್ಪಟ್ಟಿರುವ ಕ್ರಿಶಾ ಮದುವೆಯಲ್ಲಿ ಕೆಂಪು ಲೆಹೆಂಗಾ ಮತ್ತು ಭಾರೀ ಆಭರಣವನ್ನು ಧರಿಸಿದ್ದರು.
ನವ ವಧು ಕ್ರಿಶಾ ಶಾ ಅವರು ಡಿಸೈನರ್ ಅನಾಮಿಕಾ ಖನ್ನಾ (Designer Anamika Khanna) ಅವರ ಸಂಗ್ರಹದಿಂದ ಮದುವೆಗೆ ಕೆಂಪು ಲೆಹೆಂಗಾವನ್ನು ಆಯ್ಕೆ ಮಾಡಿದರು. ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಟೀನಾ ಮುನಿಮ್ (Tina Munim) ಮತ್ತು ಅನಿಲ್ ಅಂಬಾನಿ (Anil Ambani) ಸೊಸೆ ಕ್ರಿಶಾ ಶಾ (Krisha Shah) ಅವರ ಲೆಹೆಂಗಾವನ್ನು ಬೆಳ್ಳಿ ಮತ್ತು ರೇಷ್ಮೆಯಿಂದ ಮಾಡಲಾಗಿತ್ತು. ಇದು ಹೂವಿನ ಡಿಸೈನ್‌ಗಳೊಂದಿಗೆ ಹರಳುಗಳಲ್ಲಿ ಕಸೂತಿ ಮಾಡಲ್ಪಟ್ಟಿದೆ. ಅವರು ಲೆಹೆಂಗಾದೊಂದಿಗೆ ಕಸೂತಿ ದುಪಟ್ಟಾವನ್ನು ಧರಿಸಿದ್ದರು.
ಕ್ರಿಶಾ ಅವರ ಆಭರಣಗಳನ್ನು ವಜ್ರಗಳು (Diamond) ಮತ್ತು ಪಚ್ಚೆಗಳನ್ನು (Emerald) ಹೊದಿಸಲಾಗಿದೆ. ಅವರು ಚೋಕರ್ ನೆಕ್‌ಪೀಸ್, ಕಿವಿಯೋಲೆಗಳು ಮತ್ತು ಸರಳವಾದ ಮಾಂಗ್ ಟಿಕಾವನ್ನು ಧರಿಸಿದ್ದರು. ಅವರು ಕೆಂಪು ಮತ್ತು ಬಿಳಿ ಚೂಡಾದೊಂದಿಗೆ ತನ್ನ ಲುಕ್‌ಅನ್ನು ಪೂರ್ಣಗೊಳಿಸಿದರು.
ಅವರ ಕೈಗೆ ಧರಿಸಿದ್ದ ಮೂರು ಲೇಯರ್‌ನ ಬೆಳ್ಳಿಯ ಕಲೀರೆ ಪ್ರಮುಖವಾಗಿ ಎಲ್ಲರ ಗಮನ ಸೆಳೆಯಿತು. ಅಂಬಾನಿ ಸೊಸೆ ತನ್ನ ಲುಕ್ ಸಿಂಪಲ್ ಆಗಿ, ತುಂಬಾ ಸುಂದರವಾಗಿರಿಸಿದ್ದರು. ಕ್ರಿಶಾ ತನ್ನ ಲುಕ್‌ಅನ್ನು ಗ್ಲಾಮ್ ಮೇಕ್ಅಪ್ ಮತ್ತು ರೆಡ್ ಲಿಪ್‌ಸ್ಟಿಕ್‌ನಿಂದ ಪೂರ್ಣಗೊಳಿಸಿದರು.
ಕಳೆದ 3-4 ದಿನಗಳಿಂದ ಅಂಬಾನಿ ಕುಟುಂಬದ ಅನ್ಮೋಲ್ ಅಂಬಾನಿ ಅವರ ಮದುವೆಯ ಸಂಭ್ರಮಾಚರಣೆ ನಡೆಯುತ್ತಿದೆ. ಅವರ ಹಲ್ದಿ, ಮೆಹಂದಿ ಮತ್ತು ಸಂಗೀತ್ (Sangeeth) ಸಮಾರಂಭದ ಅನೇಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ನೋಡಬಹುದು.
ಅನ್ಮೋಲ್ ಅಂಬಾನಿ (Anmol Ambani) ಅವರ ಮದುವೆಯಲ್ಲಿ ದೊಡ್ಡಮ್ಮ ನೀತಾ ಅಂಬಾನಿ (Nita Ambani) ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನೀತಾ ಸುಂದರವಾದ ಗುಲಾಬಿ (Pink) ಬಣ್ಣದ ಲೆಹೆಂಗಾವನ್ನು ಧರಿಸಿದ್ದರು ಅವರೊಂದಿಗೆ ಪುತ್ರಿ ಇಶಾ ಸಹ ಉಪಸ್ಥಿತರಿದ್ದರು.
ಮದುವೆಯ (Wedding) ನಂತರ ನವ ವಧು-ವರರು ಅತಿಥಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಅನಿಲ್ ಅಂಬಾನಿ ಮತ್ತು ಟೀನಾ ಟೀನಾ ಮುನಿಮ್ ಮಗ ಜೈ ಅನ್ಮೋಲ್ ಅಂಬಾನಿ ಮದುವೆಯಲ್ಲಿ ಅದ್ಧೂರಿಯಾಗಿ ಅಲಂಕಾರ ಮಾಡಿದ್ದರು.
ಇಡೀ ಮದುವೆಯ ಮಂಟಪವನ್ನು ಹೂವುಗಳು, ಕಂಬಗಳು ಮತ್ತು ಬಣ್ಣ ಬಣ್ಣದ ಅಂಚುಗಳಿಂದ ಅಲಂಕರಿಸಲಾಗಿತ್ತು. ಮದುವೆ ಸ್ಥಳದಲ್ಲಿ ದೊಡ್ಡ ಗಣಪತಿ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿತ್ತು.