ಅಂಬಾನಿ ಫ್ಯಾಮಿಲಿಯಲ್ಲಿ ಲವ್ ಸ್ಟೋರಿ..! ಮದುವೆಗೆ ಭಾರೀ ವಿರೋಧ
ಅನಿಲ್ ಅಂಬಾನಿಯ ಪತ್ನಿ, ಅಂಬಾನಿ ಕುಟುಂಬದ ಕಿರಿಯ ಸೊಸೆ ಟೀನಾ ಅಂಬಾನಿ ಬಗ್ಗೆ ಯಾರಿಗೆ ತಿಳಿದಿಲ್ಲ. 80 ರ ದಶಕದ ಬಾಲಿವುಡ್‌ನ ಪ್ರಸಿದ್ಧ ನಟಿ. ಧೀರೂಭಾಯಿ ಅಂಬಾನಿಯ ಕಿರಿಯ ಮಗ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರೊಂದಿಗೆ ದೀರ್ಘ ಸಂಬಂಧ ಹೊಂದಿದ್ದರು. ಅವರ ಮದುವೆಗೆ ಮಾತ್ರ ಬಹಳಷ್ಟು ಅಡೆತಡೆಗಳು ಎದುರಾಯ್ತು. ಕೊನೆಗೆ 1991 ರಲ್ಲಿ ಇಬ್ಬರು ಮದುವೆಯಾದರು. ಹೇಗಿತ್ತು ಅವರ ಲವ್ ಸ್ಟೋರಿ..? ಇಲ್ಲಿ ಓದಿ
ನಟಿಯಾಗಿ ಬಹಳ ಯಶಸ್ವಿಯಾಗಿದ್ದ ಟೀನಾ ಮುನಿಮ್ ಚಲನಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ಅಫೇರ್‌ಗಳಿಂದ ಸುದ್ದಿಯಾಗಿದ್ದರು. ಒಂದು ಕಾಲದಲ್ಲಿ ನಟ ಸಂಜಯ್ ದತ್ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರು.
1981ರ ರಾಕಿ ಸಿನಿಮಾದಲ್ಲಿ, ಟೀನಾ ಮುನಿಮ್ ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡಿದರು. ಇದು ಸಂಜಯ್ ದತ್ ಮೊದಲ ಚಿತ್ರ. ಶೂಟಿಂಗ್ ಸಮಯದಲ್ಲಿ ಇಬ್ಬರೂ ಹತ್ತಿರವಾದರು. ಟೀನಾ ಸಂಜಯ್ ದತ್ ಅವರನ್ನು ಹುಚ್ಚರಂತೆ ಪ್ರೀತಿಸುತ್ತಿದ್ದರು. ಆದರೆ ಸಂಜಯ್ ಮಾದಕ ವ್ಯಸನದಿಂದಾಗಿ ನಂತರ ಅವರಿಂದ ದೂರವಾದರು.
ಸಂಜಯ್ ದತ್ ನಂತರ ಟೀನಾ ಮುನಿಮ್ ರಾಜೇಶ್ ಖನ್ನಾ ಜೊತೆ ಸಂಬಂಧ ಹೊಂದಿದ್ದರು. ವಯಸ್ಸಿನಲ್ಲಿ ತುಂಬಾ ಹಿರಿಯ ನಟ ರಾಜೇಶ್ ಖನ್ನಾರೊಂದಿಗೆ ದೀರ್ಘಕಾಲ ಲೀವ್-ಇನ್ ರಿಲೇನ್‌ಶಿಪ್‌ನಲ್ಲಿದ್ದರೂ ಮದುವೆಯಾಗಲಿಲ್ಲ. ರಾಜೇಶ್ ಖನ್ನಾ ಡಿಂಪಲ್ ಕಪಾಡಿಯಾರಿಗೆ ವಿಚ್ಚೇದನ ನೀಡಲು ತಯಾರಿರಲಿಲ್ಲ.
ಅನಿಲ್ ಅಂಬಾನಿ ಟೀನಾರನ್ನು ಮೊದಲು ಒಂದು ಮದುವೆಯಲ್ಲಿ ನೋಡಿದರು. ಕಪ್ಪು ಸೀರೆಯಲ್ಲಿದ್ದ ಟೀನಾ ಅಂಬಾನಿಗೆ ಆಕರ್ಷಕವಾಗಿ ಕಂಡರು. ಆದರೆ ಅವರ ನಡುವೆ ಯಾವುದೇ ಮಾತು ಸಾಧ್ಯವಾಗಿರಲಿಲ್ಲ.
ಸ್ವಲ್ಪ ಸಮಯದ ನಂತರ, ಅನಿಲ್ ಅಂಬಾನಿ ಮತ್ತು ಟೀನಾ ಮುನಿಮ್ ಅಮೆರಿಕದ ಫಿಲಡೆಲ್ಫಿಯಾದಲ್ಲಿ ಭೇಟಿಯಾದರು. ಕಾಮನ್ ಫ್ರೆಂಡ್ ಮೂಲಕ ಇಬ್ಬರ ಪರಿಚಯವಾಯಿತು. ನಂತರ ಅನಿಲ್ ಟೀನಾರನ್ನು ಔಟಿಂಗ್‌ಗೆ ಕರೆದರು. ಆ ಸಮಯದಲ್ಲಿ ದೊಡ್ಡ ಸ್ಟಾರ್ ಆಗಿದ್ದ ಟೀನಾ ಪ್ರಸ್ತಾಪವನ್ನು ತಿರಸ್ಕರಿಸಿದರು.
ಮತ್ತೆ ಟೀನಾ ಮುನಿಮ್ ಅನಿಲ್ ಅಂಬಾನಿಯನ್ನು ಭೇಟಿಯಾದರು. 1986 ರಲ್ಲಿ ಟೀನಾ ಮುನಿಮ್ ಸೋದರ ಸೊಸೆ ಇಬ್ಬರನ್ನೂ ಭೇಟಿ ಮಾಡಿಸಿದರು. ಆ ಸಮಯದಲ್ಲಿ ಇಬ್ಬರೂ ಗುಜರಾತಿ ಭಾಷೆಯಲ್ಲಿ ಮಾತನಾಡಿದರು. ಈ ಭೇಟಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಟೀನಾ ಮುನಿಮ್, ಅನಿಲ್ ಅಂಬಾನಿಯ ಸರಳತೆ ಮತ್ತು ಸ್ವಚ್ಛತೆಯಿಂದ ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಟೀನಾ ಮುನಿಮ್ ಹೆಚ್ಚಾಗಿ ಚಲನಚಿತ್ರ ಹಿನ್ನೆಲೆಯ ಜನರನ್ನು ಭೇಟಿ ಮಾಡಿದ್ದರು. ನಂತರ ಈ ಸಂಬಂಧ ಪ್ರಾರಂಭವಾಯಿತು.
ಅನಿಲ್ ಮತ್ತು ಟೀನಾ ಮದುವೆಯಾಗಲು ಬಯಸಿದಾಗ ಅಂಬಾನಿ ಕುಟುಂಬ ಸಿದ್ಧವಾಗಿರಲಿಲ್ಲ. ಸಾಂಪ್ರದಾಯಿಕ ಹಿನ್ನಲೆ ಹೊಂದಿದ್ದ ಧೀರೂಭಾಯಿ ಅಂಬಾನಿಯ ಕುಟುಂಬ ಚಲನಚಿತ್ರ ಹಿನ್ನೆಲೆ ಹೊಂದಿರುವ ಹುಡುಗಿ ಮಗನಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಂಬಿದ್ದರು. ಅನಿಲ್ ಮನೆಯವರ ಮನವೊಲಿಸಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ.
ನಂತರ, ಟೀನಾ ಮುನಿಮ್ ತಮ್ಮ ಚಿತ್ರಗಳ ಉಳಿದ ಕೆಲಸವನ್ನು ಪೂರ್ಣಗೊಳಿಸಿದ ನಂತರ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡಲು ಅಮೆರಿಕಕ್ಕೆ ಹೋದರು. ಸುಮಾರು 4 ವರ್ಷಗಳಿಂದ ಇವರಿಬ್ಬರ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ಆದರೆ ಈ ಬ್ರೇಕಪ್‌ನಿಂದದ ಟೀನಾ ಮುನಿಮ್ ತುಂಬಾ ದುಃಖಿತರಾಗಿದ್ದರು.
ಅಂಬಾನಿ ಕುಟುಂಬ ಅನಿಲ್ ಅಂಬಾನಿಗೆ ಮದುವೆ ಮಾಡಲು ಬಯಸಿತು ಮತ್ತು ಅನೇಕ ಸಂಬಂಧಗಳು ಬರುತ್ತಿದ್ದವು. ಆದರೆ ಅನಿಲ್ ಬೇರೆ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದರು. ಅನಿಲ್ ಟೀನಾಳನ್ನೇ ಮದುವೆಯಾಗುವುದು ಎಂದು ಕುಟುಂಬ ಸದಸ್ಯರು ಅರ್ಥಮಾಡಿಕೊಂಡು ಸಂಬಂಧಕ್ಕೆ ಒಪ್ಪಿದರು. ನಂತರ ಅನಿಲ್ ಟೀನಾ ಮುನಿಮ್‌ರನ್ನು ಕರೆದು ಭಾರತಕ್ಕೆ ಮರಳಲು ಹೇಳಿದರು.
ಟೀನಾ ಮುನಿಮ್ ಭಾರತಕ್ಕೆ ಮರಳಿದಾಗ, ಅನಿಲ್ ಅಂಬಾನಿ ತನ್ನ ಹೆತ್ತವರಿಗೆ ಪರಿಚಯಿಸಿದ ನಂತರ, ಇಬ್ಬರ ಕುಟುಂಬಗಳು ಭೇಟಿಯಾದರು ಮತ್ತು ಮದುವೆಗೆ ಒಪ್ಪಿದರು. ನಿಶ್ಚಿತಾರ್ಥದ ನಂತರ 1991ರಲ್ಲಿ ಗುಜರಾತಿ ಸ್ಟೈಲ್‌ನಲ್ಲಿ
ತುಂಬಾ ಆಡಂಬರದಿಂದ ಮದುವೆ ನಡೆಯಿತು. ಈ ಮದುವೆಯಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು.
ಈ ಜೋಡಿಗೆ ಅನ್ಮೋಲ್ ಅಂಬಾನಿ ಮತ್ತು ಜೈ ಅನ್ಶುಲ್ ಅಂಬಾನಿ ಎಂಬ ಇಬ್ಬರು ಪುತ್ರರಿದ್ದು ಅವರು ತಂದೆಯ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಟೀನಾ ಅಂಬಾನಿ ಈಗ ಗ್ಲಾಮರ್ ಪ್ರಪಂಚದಿಂದ ದೂರ ಉಳಿದಿದ್ದಾರೆ.
ಫೆಬ್ರವರಿ 11, 1955 ರಂದು ಸಾಂಪ್ರದಾಯಿಕ ಗುಜರಾತಿ ಕುಟುಂಬದಲ್ಲಿ ಜನಿಸಿದ ಟೀನಾ ಮುನಿಮ್ ಚಿಕ್ಕ ವಯಸ್ಸಿನಿಂದಲೇ ಬಾಲಿವುಡ್‌ಗೆ ಹೋಗುವ ಕನಸು ಕಾಣುತ್ತಿದ್ದಳು.1975 ರಲ್ಲಿ 'ಫೆಮಿನಾ ಟೀನ್ ಪ್ರಿನ್ಸೆಸ್' ಕಿರೀಟವನ್ನು ಪಡೆದಿದ್ದರು.
1978 ರಲ್ಲಿ ದೇವ್‌ಆನಂದ್ ಜೊತೆ ಪಾದಾರ್ಪಣೆ ಮಾಡಿದ ನಂತರ, 'ಲೂಟ್ಮಾರ್', 'ಮನ್ಪಸಂದ್', 'ರಾಕಿ', 'ಸೌತನ್', 'ಕಾರ್ಜ್', 'ಮನ್ಪಾಂಡ್', 'ಬಾತ್-ಬಾತ್ ಮೇ', 'ಬೇಡೆ ದಿಲ್ ವಾಲಾ', 'ಮುಜತ್' ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ
ಮಾಡಿದ್ದಾರೆ.