ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ, ದಿಢೀರ್ ಸೆನ್ಸೆಕ್ಸ್, ನಿಫ್ಟಿ ಕುಸಿತಕ್ಕೆ ಕಾರಣವೇನು?
ಹೊರ್ಮುಜ್ ಜಲಸಂಧಿ ಮೂಲಕ ಸರಕು ಸಾಗಾಣೆ ಹಡುಗು ಸಾಗುತ್ತಿದ್ದಂತೆ ಮಾರುಕಟ್ಟೆಗಳು ಚೇತರಿಸಿಕೊಂಡಿತ್ತು. ಭಾರತದ ಸ್ಟಾಕ್ ಮಾರ್ಕೆಟ್ ಸುಧಾರಣೆ ಕಂಡಿತ್ತು. ಆದರೆ ಇಂದು ದಿಢೀರ್ ಕುಸಿತ ತಂಡಿದೆ. ಇದಕ್ಕೆ ಕಾರಣವೇನು? ಕುಸಿತ ಮುಂದುವರಿಯುತ್ತಾ?

ತಲ್ಲಣಿಸಿದ ಭಾರತದ ಸ್ಟಾಕ್ ಮಾರುಕಟ್ಟೆ
ಪಾಶ್ಚಿಮಾತ್ಯ ಯುದ್ಧಗಳಿಂದ ಭಾರತ ಸೇರಿದಂತೆ ವಿಶ್ವದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಯುದ್ಧ ಶಾಂತಗೊಳ್ಳುತ್ತಿದ್ದಂತೆ ಭಾರತದ ಸ್ಟಾಕ್ ಮಾರ್ಕೆಟ್ ಚೇತರಿಕೆ ಕಂಡಿತ್ತು. ಆದರೆ ಎಲ್ಲವು ಶಾಂತವಾಯಿತು ಅನ್ನೋವಷ್ಟರಲ್ಲೇ ಭಾರತದ ಸ್ಟಾಕ್ ಮಾರ್ಕೆಟ್ ದಿಢೀರ್ ಕುಸಿತ ಕಂಡಿದೆ. ಸೆನ್ಸೆಕ್ಸ್, ನಿಫ್ಟಿ ತಲ್ಲಣಿಸಿದೆ.
ಟ್ರಂಪ್ ಒಂದೇ ಮಾತಿಗೆ ಎಲ್ಲಾ ಮಾರುಕಟ್ಟೆ ಪತನ
ಎಲ್ಲವೂ ಒಕೆ ಎಂದು ಮುಂದೆ ಸಾಗುತ್ತಿದ್ದಂತೆ ಡೋನಾಲ್ಡ್ ಟ್ರಂಪ್ ಮಾಡಿದ ಘೋಷಣೆ ಆತಂಕ ತರಿಸಿದೆ. ಇರಾನ್ ಜೊತೆಗಿನ ಕದನ ವಿರಾಮ ಅಂತ್ಯ ಎಂದು ಟ್ರಂಪ್ ಹೇಳಿದ್ದಾರೆ. ಹೀಗಾಗಿ ಮತ್ತೆ ಯುದ್ಧ ತೀವ್ರಗೊಳ್ಳುವ ಭೀತಿ ಎದುರಾಗಿದೆ. ಟ್ರಂಪ್ ಘೋಷಣೆಯಿಂದ ಇದೀಗ ಹಲವು ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಕಚ್ಚಾ ತೈಲ ಬೆಲೆ ಶೇಕಡಾ 6ರಷ್ಟು ಏರಿಕೆಯಾಗಿದೆ. ನಾಗರೀಕ ಹಡಗುಗಳ ಮೇಲೆ ಇರಾನ್ ದಾಳಿಗೆ ಪ್ರತಿಯಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ವೈಮಾನಿಕ ದಾಳಿ ನಡೆಸಿದೆ.
ಭಾರತದ ಮಾರುಕಟ್ಟೆ ಕುಸಿತ
ಇಂದು ಭಾರತದ ಷೇರು ಮಾರುಕಟ್ಟೆ ವಬಹಿವಾಟು ಆರಂಭಿಸಿದ ಕೆಲ ಹೊತ್ತಲ್ಲೇ ಟ್ರಂಪ್ ಘೋಷಣೆ ಪ್ರಭಾವ ಬೀರಿದೆ. ಸೆನ್ಸೆಕ್ಸ್ 550ಕ್ಕೂ ಹೆಚ್ಚು ಅಂಕ ಕುಸಿತ ಕಂಡಿದೆ. ಇತ್ತ ನಿಫ್ಠಿ 24,250 ಸೂಚ್ಯಂಕಕ್ಕಿಂತ ಕೆಳಕ್ಕೆ ಜಾರಿದೆ. ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 5ರಷ್ಟು ನಷ್ಟ ಅನುಭವಿಸಿದೆ.
ರೂಪಾಯಿ ಮೌಲ್ಯ ಕುಸಿತ
ಟ್ರಂಪ್ ಕದನ ವಿರಾಮ ಅಂತ್ಯ ಎಂದು ಘೋಷಣೆ ಮಾಡುತ್ತಿದ್ದಂತೆ ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ಎದರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 76 ಡಾಲರ್ ಗಡಿ ದಾಟಿದೆ. ಭಾರತ ತೈಲದ ಮೇಲೆ ಅವಲಂಬಿತವಾಗಿರುವ ಕಾರಣ ಇತ್ತ ರೂಪಾಯಿ ಮೌಲ್ಯ ಶೇಕಡಾ 0.2ರಷ್ಟು ಕುಸಿತ ಕಂಡಿದೆ.
ಭಾರತದ ಮಾರುಕಟ್ಟೆ ಚೇತರಿಕೆ
ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆಗಾರರು ಭಾರತೀಯ ಮಾರುಕಟ್ಟೆಯಲ್ಲಿ ಉಳಿದಿದ್ದಾರೆ. ಹೀಗಾಗಿ ಭಾರತದ ಮಾರುಕಟ್ಟೆ ನಿಧಾನವಾಗಿ ಚೇತರಿಕೆ ಕಾಣಲಿದೆ. ಆದರೆ ಜಾಗತಿಕ ಮಟ್ಟದಲ್ಲಿನ ಮಹತ್ತರ ಬದಲಾವಣೆ, ಯುದ್ಧದ ಕಾರ್ಮೋಡಗಳಿಂದ ಪರಿಸ್ಥಿತಿ ಬದಲಾಗಬಗುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

