ಚಹಾ, ಜ್ಯೂಸ್, ಬಿಲ್ ಪಾವತಿ, ರೀಚಾರ್ಜ್, ಕಿರಾಣಿ ಅಂಗಡಿಯಲ್ಲಿ ಪಾವತಿ ಸೇರಿದಂತೆ ಪೇಟಿಎಂ ಮೂಲಕ ಮಾಡುವ ಯುಪಿಐ ಪಾವತಿಗೆ ಇದೀಗ ಚಿನ್ನದ ನಾಣ್ಯದ ಆಫರ್ ನೀಡಲಾಗಿದೆ. ಪ್ರತಿಯೊಬ್ಬ ಗ್ರಾಹಕ ತನ್ನ ಪಾವತಿ ಮೇಲೆ ಗೋಲ್ಡ್ ಕಾಯಿನ್ ಪಡೆಯುಲು ಸಾಧ್ಯವಿದೆ. 

ಬೆಂಗಳೂರು (ಜು.08) ಭಾರತದಲ್ಲಿ ಸದ್ಯ ಯುಪಿಐ ಮೂಲಕ ಪಾವತಿಯನ್ನೇ ಬಹುತೇಕರು ನೆಚ್ಚಿಕೊಂಡಿದ್ದಾರೆ. ಹಲವರು ನಗದು ಹಣ ಇಟ್ಟುಕೊಳ್ಳು ಪದ್ಧತಿಯಿಂದ ಹೊರಬಂದು ಎಲ್ಲವೂ ಡಿಜಿಟಲ್ ಪೇಮೆಂಟ್ ಆಗಿ ಬದಲಾಗಿದೆ. ಕೆಲಸಕ್ಕೆ ಹೋಗುವಾಗ ಕುಡಿಯುವ ಫಿಲ್ಟರ್ ಕಾಫಿ, ಹಿಂದಿರುವಾಗ ಕಿರಾಣಿ ಅಂಗಡಿಯಲ್ಲಿ ಖರೀದಿ, ಮೊಬೈಲ್ ರೀಚಾರ್ಜ್, ಆಟೋ ಪ್ರಯಾಣ, ಬಿಲ್ ಪಾವತಿ ಸೇರಿದಂತೆ ಸಣ್ಣ ಸಣ್ಣ ಪಾವತಿಯಿಂದ ಹಿಡಿದು ದೊಡ್ಡ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತಿದೆ. ಇದೀಗ ಪೇಟಿಎಂ ಇದೇ ಹಣದ ವಹಿವಾಟಿಗೆ ಚಿನ್ನದ ನಾಣ್ಯ ನೀಡುತ್ತಿದೆ. ಕರ್ನಾಟಕ ಜನತೆಗೆ ಇದೀಗ ಪೇಟಿಎಂ ಪ್ರತಿ ಪಾವತಿಯನ್ನು ಚಿನ್ನದ ನಾಣ್ಯವಾಗಿ ಪರಿವರ್ತಿಸುವ ಅವಕಾಶ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೇಟಿಎಂ ಚಿನ್ನದ ನಾಣ್ಯ ಪಡೆಯುವುದು ಹೇಗೆ?

ಪೇಟಿಎಂ ಆ್ಯಪ್‌ನಲ್ಲಿ ನಡೆಯುವ ಪ್ರತಿಯೊಂದು ಅರ್ಹ ವಹಿವಾಟಿಗೂ ಗ್ರಾಹಕರು ಚಿನ್ನದ ನಾಣ್ಯದ ಆಫರ್ ನೀಡಲಾಗುತ್ತದೆ. ಅಂದರೆ ವಹಿವಾಟಿನ ಮೌಲ್ಯದ 1% ರಷ್ಟು Gold Coins ದೊರೆಯುತ್ತವೆ. ಇವು ನೆರೆಹೊರೆಯ ಅಂಗಡಿಗಳಲ್ಲಿ Scan & Pay, ಬಿಲ್ ಪಾವತಿಗಳು, ಮೊಬೈಲ್ ರೀಚಾರ್ಜ್‌ಗಳು, ಆನ್‌ಲೈನ್ ಶಾಪಿಂಗ್ ಮತ್ತು ಹಣ ವರ್ಗಾವಣೆಗಳ ಮೇಲೆ ಲಭ್ಯವಿರುತ್ತವೆ. ಪ್ರತಿ 100 Gold Coins ಅನ್ನು ₹1 ಮೌಲ್ಯದ Digital Gold ಆಗಿ ಪರಿವರ್ತಿಸಬಹುದು. Gold Coins ಸಂಖ್ಯೆ 1,500 ತಲುಪಿದಾಗ, ಆ್ಯಪ್‌ನಲ್ಲಿ ‘Convert to Real Gold’ ಆಯ್ಕೆ ಲಭ್ಯವಾಗುತ್ತದೆ. ಇದರಿಂದ ಸಂಗ್ರಹಿಸಿದ ಬಹುಮಾನಗಳನ್ನು 24K ಚಿನ್ನವಾಗಿ ಪರಿವರ್ತಿಸಬಹುದು. Paytm UPI ಮೂಲಕ RuPay Credit Card ಬಳಸಿ ಪಾವತಿ ಮಾಡಿದರೆ Gold Coins ದ್ವಿಗುಣವಾಗುತ್ತವೆ.

40 ಸಾವಿರ ರೂ ವಹಿವಾಟು ಮಾಡಿದರೆ ಎಷ್ಟು ರೂ ಗೋಲ್ಡ್ ಕಾಯಿನ್ ಸಿಗುತ್ತೆ

ಈ ಬಹುಮಾನಗಳು ನಿಧಾನವಾಗಿ ಸಂಗ್ರಹವಾಗುತ್ತವೆ. 1% ದರದಲ್ಲಿ ಲೆಕ್ಕ ಹಾಕಿದರೆ, ತಿಂಗಳಿಗೆ ಸುಮಾರು 40,000 ರೂಪಾಯಿ ಮೌಲ್ಯದ ಅರ್ಹ Paytm ಪಾವತಿಗಳ ಮೇಲೆ ಒಂದು ವರ್ಷದಲ್ಲಿ ಸುಮಾರು 4,800 ರೂಪಾಯಿ ಮೌಲ್ಯದ Gold Coins ಗಳಿಸಬಹುದು. ಇದು ಅಲ್ಪಾವಧಿಯಲ್ಲಿ ದೊಡ್ಡ ಮೊತ್ತದ ಚಿನ್ನವನ್ನು ನೀಡುವುದಿಲ್ಲ, ಆದರೆ ಕ್ರಮೇಣ ಚಿನ್ನದ ಉಳಿತಾಯ ನಿರ್ಮಿಸಲು ಸಹಾಯ ಮಾಡುತ್ತದೆ.

ಕರ್ನಾಟಕದಲ್ಲಿ ಈ ಅಭ್ಯಾಸ ಹೊಸದೇನಲ್ಲ. ಚಿನ್ನದ ಬೆಲೆಗಳು ದಾಖಲೆಯ ಮಟ್ಟದ ಸಮೀಪದಲ್ಲಿದ್ದು, ಈ ವರ್ಷ ಬೆಂಗಳೂರಿನಲ್ಲಿ 24K ಚಿನ್ನದ 10 ಗ್ರಾಂ ಬೆಲೆ ₹1 ಲಕ್ಷಕ್ಕಿಂತ ಹೆಚ್ಚಾಗಿದೆ. ಚಿನ್ನವು ಇನ್ನೂ ದೀರ್ಘಾವಧಿಯ ಉಳಿತಾಯದ ಪ್ರಮುಖ ಆಯ್ಕೆಯಾಗಿದೆ. ಇದೀಗ ಪೇಟಿಎಂ ಗ್ರಾಹಕರಿಗೆ ಚಿನ್ನದ ನಾಣ್ಯದ ಆಫರ್ ನೀಡಿದ್ದು, ತಮ್ಮ ದೈನಂದಿನ ವಹಿವಾಟಿನಿಂದಲೇ ಚಿನ್ನ ಉಳಿತಾಯ ಮಾಡಬಹುದು.

24ಕೆ ಶುದ್ಧ ಚಿನ್ನ

ಪೇಟಿಎಂನಲ್ಲಿ ನೀವು ಉಳಿತಾಯ ಮಾಡುವ ಡಿಜಿಟಲ್ ಚಿನ್ನ 24ಕೆ ಚಿನ್ನವಾಗಿದೆ. ಅದು ಭೌತಿಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. Paytm Gold ಅನ್ನು MMTC-PAMP ಬೆಂಬಲಿಸುತ್ತದೆ. ಇದು ಭಾರತ ಸರ್ಕಾರದ MMTC Ltd ಮತ್ತು ಸ್ವಿಟ್ಜರ್‌ಲ್ಯಾಂಡ್‌ನ MKS PAMP SA ನಡುವಿನ ಜಂಟಿ ಉದ್ಯಮವಾಗಿದೆ. 24K ಚಿನ್ನವನ್ನು ವಿಮೆ ಹೊಂದಿರುವ, ಬ್ಯಾಂಕ್-ಮಟ್ಟದ ಭದ್ರತೆಯ ವಾಲ್ಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಯಾವುದೇ ಸಂಗ್ರಹಣಾ ಶುಲ್ಕವಿಲ್ಲ. ಬಳಕೆದಾರರು ಪ್ರಚಲಿತ ಮಾರುಕಟ್ಟೆ ಬೆಲೆಗೆ ಅದನ್ನು ಮಾರಾಟ ಮಾಡಬಹುದು. ಹಣವನ್ನು ತಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಅಥವಾ UPI ಮೂಲಕ ಪಡೆಯಬಹುದು.

Gold Coins ಮೂಲಕ ದೊರೆಯುವ ಉಳಿತಾಯದ ಹೊರತಾಗಿ, Paytm ಆ್ಯಪ್‌ನಲ್ಲಿ 51ರೂಪಾಯಿಯಿಂದ 24K Digital Gold ಖರೀದಿಸಲು ಅವಕಾಶವಿದೆ. ಇದು ನೈಜ ಮಾರುಕಟ್ಟೆ ಬೆಲೆಗಳ ಆಧಾರದ ಮೇಲೆ ಲಭ್ಯವಿರುತ್ತದೆ. ಬಳಕೆದಾರರು ಸಣ್ಣ ಮೊತ್ತಗಳಿಂದ ಚಿನ್ನ ಖರೀದಿಸಬಹುದು ಅಥವಾ ನಿಯಮಿತ ಹೂಡಿಕೆಗಾಗಿ Daily Gold SIP ಆಯ್ಕೆ ಮಾಡಬಹುದು