ದಿನಕ್ಕೆ ಕೇವಲ ₹330 ಉಳಿಸಿದ್ರೆ ₹13 ಲಕ್ಷ ಗಳಿಸಬಹುದು..! PPF ಯೋಜನೆಯಿಂದ ಇದು ನಿಜಕ್ಕೂ ಸಾಧ್ಯ!
ನೀವು ಎಷ್ಟು ಸಂಪಾದಿಸ್ತೀರಿ ಅನ್ನೋದಕ್ಕಿಂತ, ಅದರಲ್ಲಿ ಎಷ್ಟು ಉಳಿತಾಯ ಮಾಡ್ತೀರಿ ಅನ್ನೋದು ಮುಖ್ಯ ಅಂತಾರೆ ಆರ್ಥಿಕ ತಜ್ಞರು. ಸಣ್ಣ ಮೊತ್ತವನ್ನು ದೀರ್ಘಕಾಲ ಹೂಡಿಕೆ ಮಾಡಿದ್ರೆ ದೊಡ್ಡ ನಿಧಿ ಸೃಷ್ಟಿಸಬಹುದು. ಇದಕ್ಕಾಗಿ ಹಲವು ಯೋಜನೆಗಳಿವೆ, ಅದ್ರಲ್ಲೊಂದು ಪಿಪಿಎಫ್.
15

Image Credit : Getty
ಸಣ್ಣ ಉಳಿತಾಯ ದೊಡ್ಡ ಗಳಿಕೆಗೆ ದಾರಿ
ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಸ್ವಲ್ಪ ಸ್ವಲ್ಪವೇ ಉಳಿತಾಯ ಮಾಡಿ ಭವಿಷ್ಯದಲ್ಲಿ ದೊಡ್ಡ ಮೊತ್ತ ಗಳಿಸಲು ಬಯಸುತ್ತಾರೆ. ಆದರೆ, ಷೇರು ಮಾರುಕಟ್ಟೆಯ ರಿಸ್ಕ್‌ನಿಂದಾಗಿ ಅನೇಕರು ಹೂಡಿಕೆಗೆ ಹಿಂಜರಿಯುತ್ತಾರೆ. ಅಂತಹವರಿಗೆ ಸರ್ಕಾರಿ ಯೋಜನೆಗಳು ಉತ್ತಮ ಆಯ್ಕೆ. ಅದರಲ್ಲೂ ಪಿಪಿಎಫ್ ಉತ್ತಮ ಆಯ್ಕೆಯಾಗಿದೆ.
25
Image Credit : Getty
ಪಬ್ಲಿಕ್ ಪ್ರಾವಿಡೆಂಟ್ ಫಂಡ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಅನ್ನೋದು ಸರ್ಕಾರ ನಡೆಸುವ ಸುರಕ್ಷಿತ ಉಳಿತಾಯ ಯೋಜನೆ. ಇದರಲ್ಲಿ ಹೂಡಿದ ಹಣಕ್ಕೆ ಸಂಪೂರ್ಣ ಭದ್ರತೆ ಇರುತ್ತದೆ. ಬಡ್ಡಿಗೂ ತೆರಿಗೆ ವಿನಾಯಿತಿ ಇದೆ. ಹೂಡಿಕೆ ಮಾಡಿದ ಮೊತ್ತಕ್ಕೂ ತೆರಿಗೆ ವಿನಾಯಿತಿ ಸಿಗುತ್ತದೆ. ಹೀಗಾಗಿ ಇದು ಉಳಿತಾಯ ಮತ್ತು ತೆರಿಗೆ ಉಳಿತಾಯ ಎರಡಕ್ಕೂ ಬೆಸ್ಟ್.
35
Image Credit : Getty
PPF ಸ್ಕೀಮ್ ಬಗ್ಗೆ
ಪಿಪಿಎಫ್ ಖಾತೆಗೆ ಸಾಮಾನ್ಯವಾಗಿ 15 ವರ್ಷಗಳ ಅವಧಿ ಇರುತ್ತದೆ. ವರ್ಷಕ್ಕೆ ಕನಿಷ್ಠ ₹500 ರಿಂದ ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಹಣವನ್ನು ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ಕಟ್ಟಬಹುದು. ಸದ್ಯ ಈ ಯೋಜನೆಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತಿದೆ. ಇದು ಚಕ್ರಬಡ್ಡಿ ಮಾದರಿಯಲ್ಲಿ ಬೆಳೆಯುತ್ತದೆ.
45
Image Credit : social media
ಪ್ರತಿ ತಿಂಗಳು ಕೇವಲ 4000 ರುಪಾಯಿ ಉಳಿತಾಯ ಮಾಡಿದರೆ?
ನೀವು ಪ್ರತಿ ತಿಂಗಳು ₹4000, ಅಂದರೆ ವರ್ಷಕ್ಕೆ ₹48,000 ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ₹7.20 ಲಕ್ಷ ಆಗುತ್ತದೆ. ಬಡ್ಡಿ ಸೇರಿ ಸುಮಾರು ₹13 ಲಕ್ಷದಷ್ಟು ನಿಧಿ ಸಿದ್ಧವಾಗುತ್ತದೆ. ಅಂದರೆ, ನಿಮಗೆ ಸುಮಾರು ₹5.8 ಲಕ್ಷ ಲಾಭ ಸಿಗುತ್ತದೆ.
55
Image Credit : adobe stock
15 ವರ್ಷಗಳ ಉಳಿತಾಯವನ್ನು 25 ವರ್ಷದವರೆಗೂ ಮುಂದುವರೆಸಿದರೆ?
15 ವರ್ಷಗಳ ನಂತರವೂ ನೀವು ಈ ಹೂಡಿಕೆಯನ್ನು ಮುಂದುವರಿಸಿದರೆ, ಚಕ್ರಬಡ್ಡಿಯ ಪರಿಣಾಮ ಇನ್ನಷ್ಟು ಹೆಚ್ಚಾಗುತ್ತದೆ. 25 ವರ್ಷಗಳವರೆಗೆ ಮುಂದುವರಿಸಿದರೆ ಸುಮಾರು ₹32 ಲಕ್ಷಕ್ಕೂ ಹೆಚ್ಚು ನಿಧಿ ಸಿದ್ಧವಾಗುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಬಡ್ಡಿಯಿಂದಲೇ ಬರುತ್ತದೆ. ಇದು ನಿವೃತ್ತಿ ಅಥವಾ ಮಕ್ಕಳ ಭವಿಷ್ಯಕ್ಕೆ ಉತ್ತಮ ಯೋಜನೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.
Latest Videos

