ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಅಲ್ಪ ಮೊತ್ತ ಹೂಡಿಕೆ ಮಾಡಿ ಗಳಿಸಿ 25 ಲಕ್ಷ ರೂ ರಿಟರ್ನ್ಸ್
ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಅಲ್ಪ ಮೊತ್ತ ಹೂಡಿಕೆ ಮಾಡಿ ಗಳಿಸಿ 25 ಲಕ್ಷ ರೂ ರಿಟರ್ನ್ಸ್, ಕೇಂದ್ರ ಸರ್ಕಾರ ಬೆಂಬಲಿತ ಸ್ಕೀಮ್ ಇದಾಗಿದ್ದು, ಸುರಕ್ಷಿತ ಹೂಡಿಕೆ ಪ್ಲಾನ್ ಆಗಿದೆ. ಮಾರುಕಟ್ಟೆಗಳ ಏರಿಳಿತ ಈ ಸ್ಕೀಮ್‌ಗೆ ಯಾವುದೇ ಸಮಸ್ಯೆ ಸೃಷ್ಟಿಸುವುದಿಲ್ಲ.

ಪೋಸ್ಟ್ ಆಫೀಸ್ ಸ್ಕೀಮ್
ಪೋಸ್ಟ್ ಆಫೀಸ್ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಣ್ಣ ಸಣ್ಣ ಹೂಡಿಕೆಗಳ ಮೂಲಕ ಉತ್ತಮ ರಿಟರ್ನ್ಸ್ ಪಡೆಯಲು ಸಾಧ್ಯವಿದೆ. ಇಷ್ಟೇ ಅಲ್ಲ ಹೂಡಿಕೆಯಲ್ಲಿ ಶಿಸ್ತು, ಸುರಕ್ಷತೆ, ಮಾರುಕಟ್ಟೆ ಏರಿಳಿತಗಳಿಂದ ದೂರವಿರಲು ಪೋಸ್ಟ್ ಆಫೀಸ್ ಯೋಜನೆಗಳ ಮೇಲೆ ಹೂಡಿಕೆ ಉತ್ತಮ. ಇದೀಗ ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್ ಮೇಲೆ ಹೂಡಿಕೆ ಮಾಡಿದರೆ 25 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯಲು ಸಾಧ್ಯವಿದೆ.
ಪೋಸ್ಟ್ ಆಫೀಸ್ ಆರ್‌ಡಿ ಸ್ಕೀಮ್
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿ ಹೂಡಿಕೆ ಅತ್ಯಂತ ಸುರಕ್ಷಿತ. ವಾರ್ಷಿಕ ಶೇಕಡಾ 6.7 ಬಡ್ಡಿದರ ನೀಡುತ್ತದೆ. ಉತ್ತಮ ರಿಟರ್ನ್ಸ್ ಬಯಸುವ ಮಂದಿಗೆ ಇದು ಉತ್ತಮ ಪ್ಲಾನ್. 10 ವರ್ಷ ಹೂಡಿಕೆ ಮಾಡಿದರೆ ಸಾಕು. 25 ಲಕ್ಷ ರೂಪಾಯಿ ರಿಟರ್ನ್ಸ್ ಸಿಗಲಿದೆ. 25 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯಲು ತಿಂಗಳು ಎಷ್ಟು ಹೂಡಿಕೆ ಮಾಡಬೇಕು.
ಎಷ್ಟು ಹೂಡಿಕೆ ಮಾಡಬೇಕು
25 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯಲು ಪ್ರತಿ ತಿಂಗಳು 15,000 ರೂಪಾಯಿ ಹೂಡಿಕೆ ಮಾಡಬೇಕು. ಹೀಗೆ 10 ವರ್ಷ ಹೂಡಿಕೆ ಮಾಡಿದರೆ ಬಡ್ಡಿ ಸಮೇತ 25,68,107 ರೂಪಾಯಿ ರಿಟರ್ನ್ಸ್ ಪಡೆಯಲಿದೆ. ಒಟ್ಟು 120 ತಿಂಗಳು ಹೂಡಿಕೆ ಮಾಡಿದರೆ ಸಾಕು. ಈ ಪೈಕಿ ಹೂಡಿಕೆ ಮಾಡುವ ಮೊತ್ತ 18,00,000 ರೂಪಾಯಿ. 7,8,107 ರೂಪಾಯಿ ಬಡ್ಡಿ ರೂಪದಲ್ಲಿ ಸಿಗಲಿದೆ.
5 ವರ್ಷ ವಿಸ್ತರಣೆಯಿಂದ ಲಾಭ ಹೆಚ್ಚು
ಆರ್‌ಡಿ ಸ್ಕೀಮ್ ಹೂಡಿಕೆ ಕಾಲಾವದಿ 5 ವರ್ಷ. ಆದರೆ 5 ವರ್ಷ ಪೂರ್ಣಗೊಂಡ ಬೆನ್ನಲ್ಲೇ ಮತ್ತೆ 5 ವರ್ಷಕ್ಕೆ ವಿಸ್ತರಣೆ ಮಾಡುವ ಅವಕಾಶವಿದೆ. ಹೀಗೆ ಮಾಡಿದಲ್ಲಿ ಬಡ್ಡಿ ಲಾಭ ಹೆಚ್ಚು ಸಿಗಲಿದೆ. ಇದರಿಂದ ಉತ್ತಮ ರಿಟನ್ಸ್ ಪಡೆಯುವುದು ಮಾತ್ರವಲ್ಲ, ಯಾವುದೇ ಅಡೆ ತಡೆ ಇಲ್ಲದೆ ಸುರಕ್ಷಿತ ಹೂಡಿಕೆ ಸಾಧ್ಯವಿದೆ.
100 ರೂಪಾಯಿಂದ ಆರ್‌ಡಿ ಸ್ಕೀಮ್
ಪೋಸ್ಟ್ ಆಫೀಸ್ ಆರ್‌ಡಿ ಸ್ಕೀಮ್ ಅತ್ಯಂತ ಅಗ್ಗದಲ್ಲಿ ಹೂಡಿಕೆ ಸಾಧ್ಯವಿದೆ. ಕೇವಲ 100 ರೂಪಾಯಿಯಿಂದ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. 12 ತಿಂಗಳ ಹೂಡಿಕೆ ಬಳಿಕ ಶೇಕಡಾ 50 ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಸಾಧ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

