ಯುದ್ಧಕ್ಕೆ ಬಿತ್ತು ಫುಲ್‌ಸ್ಟಾಪ್; ಇಂದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಆಗಿರೋ ವ್ಯತ್ಯಾಸ ಎಷ್ಟು?
108 ದಿನಗಳ ಇರಾನ್-ಅಮೆರಿಕ ಯುದ್ಧವು ಶಾಂತಿ ಒಪ್ಪಂದದೊಂದಿಗೆ ಕೊನೆಗೊಂಡಿದ್ದು, ಕಚ್ಚಾತೈಲದ ಬೆಲೆ ಇಳಿದಿದೆ. ಈ ಲೇಖನವು ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ಒದಗಿಸುತ್ತದೆ.

ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧಕ್ಕೆ ಫುಲ್ ಸ್ಟಾಪ್
108 ದಿನಗಳ ಬಳಿಕ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಶಾಂತಿ ಒಪ್ಪಂದ ಘೋಷಣೆ ಬೆನ್ನಲ್ಲೇ ಕಚ್ಚಾತೈಲದ ಬೆಲೆಯಲ್ಲಿ ಸುಮಾರು ಶೇ.4ರಷ್ಟು ಕುಸಿತಗೊಂಡಿದೆ. ತೈಲ ಸಾಗಣೆಯ ಪ್ರಮುಖ ಮಾರ್ಗ ಹರ್ಮೋಜ್ ಜಲಸಂಧಿ ಮುಕ್ತವಾಗಲಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ. ಈ ಶಾಂತಿ ಒಪ್ಪಂದ ಬೆನ್ನಲ್ಲೇ ಜಾಗತೀಕ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.
ಚಿನ್ನ ಮತ್ತು ಬೆಳ್ಳಿ ಬೆಲೆ
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗಿದೆ ಎಂಬ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಹಾಗೆಯೇ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯ ಮಾಹಿತಿಯ ವಿವರ ಇಲ್ಲಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,890 ರೂಪಾಯಿ
8 ಗ್ರಾಂ: 1,11,120 ರೂಪಾಯಿ
10 ಗ್ರಾಂ: 1,38,900 ರೂಪಾಯಿ
100 ಗ್ರಾಂ: 13,89,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,153 ರೂಪಾಯಿ
8 ಗ್ರಾಂ: 1,21,224 ರೂಪಾಯಿ
10 ಗ್ರಾಂ: 1,51,530 ರೂಪಾಯಿ
100 ಗ್ರಾಂ: 15,15,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,40,700 ರೂಪಾಯಿ, ಮುಂಬೈ: 1,38,900 ರೂಪಾಯಿ, ದೆಹಲಿ: 1,38,950 ರೂಪಾಯಿ, ಕೋಲ್ಕತ್ತಾ: 1,38,900 ರೂಪಾಯಿ ಬೆಂಗಳೂರು: 1,38,900 ರೂಪಾಯಿ, ಪುಣೆ: 1,38,900 ರೂಪಾಯಿ, ಹೈದರಾಬಾದ್: 1,38,900 ರೂಪಾಯಿ, ವಡೋದರ: 1,38,950 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 225 ರೂ.ಗಳಷ್ಟು ಏರಿಕೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 5 ಸಾವಿರ ರೂ. ಏರಿಕೆ ಕಂಡು ಬಂದಿದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ
10 ಗ್ರಾಂ: 2,650 ರೂಪಾಯಿ
100 ಗ್ರಾಂ: 26,500 ರೂಪಾಯಿ
1000 ಗ್ರಾಂ: 2,65,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

