MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಐದು ವರ್ಷಕ್ಕೆ ಬೆಂಗಳೂರಿನ RMZ Star Tech ಕ್ಯಾಂಪಸ್‌ ಸ್ಥಳವನ್ನು ಭಾರೀ ಮೊತ್ತಕ್ಕೆ ಲೀಸ್‌ ಮುಂದುವರಿಸಿದ ಒಲಾ!

ಐದು ವರ್ಷಕ್ಕೆ ಬೆಂಗಳೂರಿನ RMZ Star Tech ಕ್ಯಾಂಪಸ್‌ ಸ್ಥಳವನ್ನು ಭಾರೀ ಮೊತ್ತಕ್ಕೆ ಲೀಸ್‌ ಮುಂದುವರಿಸಿದ ಒಲಾ!

 ಒಲಾ ಬೆಂಗಳೂರಿನಲ್ಲಿ ತನ್ನ ಕಚೇರಿ ಸ್ಥಳವನ್ನು ಖಾಲಿ ಮಾಡುತ್ತಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ. ಒಲಾ ಗ್ರೂಪ್‌ನ ಎರಡು ಅಂಗಸಂಸ್ಥೆಗಳು ಪ್ರೆಸ್ಟೀಜ್ ಆರ್‌ಎಂಜಡ್ ಸ್ಟಾರ್ ಟೆಕ್‌ನಲ್ಲಿ ಒಟ್ಟು ₹281.11 ಕೋಟಿ ಮೌಲ್ಯದ 4,30,000 ಚದರ ಅಡಿ ಕಚೇರಿ ಜಾಗದ ಲೀಸ್ ಅನ್ನು ಮುಂದುವರಿಸಿವೆ.

3 Min read
Author : Santosh Naik
Published : Jul 01 2026, 04:45 PM IST
Share this Photo Gallery
  • FB
  • TW
  • Linkdin
  • Whatsapp
16
ಊಹಾಪೋಹಗಳಿಗೆ ಫುಲ್‌ಸ್ಟಾಪ್‌, ಬೆಂಗಳೂರಿನಲ್ಲೇ ಉಳಿದ ಒಲಾ
Image Credit : X

ಊಹಾಪೋಹಗಳಿಗೆ ಫುಲ್‌ಸ್ಟಾಪ್‌, ಬೆಂಗಳೂರಿನಲ್ಲೇ ಉಳಿದ ಒಲಾ

ಪ್ರಮುಖ ಸಾರಿಗೆ ಮತ್ತು ಇವಿ ವಾಹನ ಸೇವೆಗಳ ಸಂಸ್ಥೆಯಾದ 'ಒಲಾ' (Ola) ಗ್ರೂಪ್‌ನ ಎರಡು ಪ್ರಮುಖ ಅಂಗಸಂಸ್ಥೆಗಳು ಬೆಂಗಳೂರಿನಲ್ಲಿ ಬರೋಬ್ಬರಿ 4,30,000 ಚದರ ಅಡಿ ವಿಸ್ತೀರ್ಣದ ಕಚೇರಿ ಜಾಗದ ಲೀಸ್ (ಬಾಡಿಗೆ ಒಪ್ಪಂದ) ಅನ್ನು ಯಶಸ್ವಿಯಾಗಿ ಮುಂದುವರಿಸಿದೆ. ನಗರದ ಐಷಾರಾಮಿ ‘ಪ್ರೆಸ್ಟೀಜ್ ಆರ್‌ಎಂಜಡ್ ಸ್ಟಾರ್ ಟೆಕ್’ (Prestige RMZ Star Tech) ಕಮರ್ಷಿಯಲ್ ಕ್ಯಾಂಪಸ್‌ನಲ್ಲಿ ಪ್ರತ್ಯೇಕ ಒಪ್ಪಂದಗಳ ಮೂಲಕ ಈ ಜಾಗವನ್ನು ಪಡೆಯಲಾಗಿದ್ದು, ಒಟ್ಟಾರೆ ಬಾಡಿಗೆ ವೆಚ್ಚವು ₹281.11 ಕೋಟಿಗಳಾಗಿವೆ ಎಂದು ರಿಯಲ್ ಎಸ್ಟೇಟ್ ಡೇಟಾ ಪ್ಲಾಟ್‌ಫಾರ್ಮ್ ‘ಪ್ರಾಪ್‌ಸ್ಟಾಕ್’ (Propstack) ಬಹಿರಂಗಪಡಿಸಿದೆ. ನೋಂದಾಯಿತ ದಾಖಲೆಗಳ ಪ್ರಕಾರ, ಈ ಎರಡು ಲೀಸ್ ಒಪ್ಪಂದಗಳು ಅಕ್ಟೋಬರ್ 16, 2025 ರಿಂದಲೇ ಜಾರಿಗೆ ಬಂದಿದ್ದು, ಪ್ರತಿ ಚದರ ಅಡಿಗೆ ಮಾಸಿಕ ₹103.5 ರೇಟ್ ನಿಗದಿಪಡಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಒಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಕೈಗೊಂಡ ₹110.75 ಕೋಟಿಯ ಒಪ್ಪಂದ (Ola Electric Technologies Lease Details)
Image Credit : X

ಒಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಕೈಗೊಂಡ ₹110.75 ಕೋಟಿಯ ಒಪ್ಪಂದ (Ola Electric Technologies Lease Details)

ಒಲಾ ಸಮೂಹದ ಪ್ರಮುಖ ಇವಿ ವಿಭಾಗವಾದ 'ಒಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್' (Ola Electric Technologies) ಒಟ್ಟು 1,68,243 ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳವನ್ನು ಮುಂದಿನ 5 ವರ್ಷಗಳ ಅವಧಿಗೆ ಲೀಸ್ ಪಡೆದುಕೊಂಡಿದೆ.

  • ಒಟ್ಟು ಬಾಡಿಗೆ ಮೊತ್ತ: ಈ 5 ವರ್ಷಗಳ ಅವಧಿಗೆ ಕಂಪನಿಯು ಅಂದಾಜು ₹110.75 ಕೋಟಿ ಬಾಡಿಗೆ ಪಾವತಿಸಲಿದೆ.
  • ಸೆಕ್ಯೂರಿಟಿ ಡೆಪಾಸಿಟ್ ಮತ್ತು ಹೆಚ್ಚಳ: ಒಪ್ಪಂದಕ್ಕಾಗಿ ಕಂಪನಿಯು ಈಗಾಗಲೇ ₹4.45 ಕೋಟಿಗಳನ್ನು ಭದ್ರತಾ ಠೇವಣಿಯಾಗಿ ಇಟ್ಟಿದೆ. ಮಾರ್ಚ್ ತಿಂಗಳಲ್ಲಿ ನೋಂದಣಿಯಾಗಿರುವ ಈ ಪತ್ರಗಳ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಬಾಡಿಗೆ ದರದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗುವ (Escalation) ಶರತ್ತು ವಿಧಿಸಲಾಗಿದೆ.

Related Articles

Related image1
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!
Related image2
Bengaluru: ಉದ್ಯಮಕ್ಕೆಂದು ಜಾಗ ಪಡೆದು 250 ಕೋಟಿಗೆ ರಿಯಲ್‌ ಎಸ್ಟೇಟ್‌ ಕಂಪನಿಗೆ ಮಾರಿದ ಇನ್ಫೋಸಿಸ್‌!
36
ಒಲಾ ಪೇರೆಂಟ್ ಸಂಸ್ಥೆ ‘ಎಎನ್ಐ ಟೆಕ್ನಾಲಜೀಸ್’ ನಿರ್ಧಾರ (ANI Technologies Office Lease Expansion)
Image Credit : X

ಒಲಾ ಪೇರೆಂಟ್ ಸಂಸ್ಥೆ ‘ಎಎನ್ಐ ಟೆಕ್ನಾಲಜೀಸ್’ ನಿರ್ಧಾರ (ANI Technologies Office Lease Expansion)

ಒಲಾ ಕಂಪನಿಯ ಮಾತೃ ಸಂಸ್ಥೆಯಾದ 'ಎಎನ್ಐ ಟೆಕ್ನಾಲಜೀಸ್' (ANI Technologies) ಅದೇ ಕಟ್ಟಡದ ಮತ್ತೊಂದು ಭಾಗದಲ್ಲಿ ಬರೋಬ್ಬರಿ 2,59,238 ಚದರ ಅಡಿ ಕಚೇರಿ ಜಾಗವನ್ನು 5 ವರ್ಷಗಳ ಅವಧಿಗೆ ನವೀಕರಿಸಿದೆ.

  • ಹಣಕಾಸು ವಿವರ: ಈ ಜಾಗದ ಒಟ್ಟು ಬಾಡಿಗೆ ವೆಚ್ಚ ₹170.65 ಕೋಟಿಗಳಾಗಿದ್ದು, ಇದಕ್ಕಾಗಿ ಸಂಸ್ಥೆಯು ₹11.54 ಕೋಟಿಗಳನ್ನು ಸೆಕ್ಯೂರಿಟಿ ಡೆಪಾಸಿಟ್ ರೂಪದಲ್ಲಿ ಜಮೆ ಮಾಡಿದೆ.
  • ಹಳೆಯ ಇತಿಹಾಸ: ಇದೇ 4,27,000 ಚದರ ಅಡಿ ಜಾಗಕ್ಕೆ ಈ ಹಿಂದೆ ಜನವರಿ 2021 ರಲ್ಲಿ 'ಎಎನ್ಐ ಟೆಕ್ನಾಲಜೀಸ್' ಹೆಸರಿನ ಒಂದೇ ಸಂಸ್ಥೆಯಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇತ್ತೀಚೆಗೆ ಒಲಾ ಸಂಸ್ಥೆಯು ಬೆಂಗಳೂರಿನಾದ್ಯಂತ ತನ್ನ ಸುಮಾರು 1,70,000 ಚದರ ಅಡಿ ಕಚೇರಿ ಸ್ಥಳವನ್ನು (ಪ್ರೆಸ್ಟೀಜ್ ಕ್ಯಾಂಪಸ್ ಸೇರಿದಂತೆ) ಬಿಟ್ಟುಕೊಟ್ಟಿದೆ ಎಂಬ ವರದಿಗಳ ಬೆನ್ನಲ್ಲೇ ಈ ಲೀಸ್‌ ಮುಂದುವರಿಸಿರುವುದು ಪ್ರಮುಖವಾಗಿದೆ.
46
ದೇಶದಲ್ಲೇ ಆಫೀಸ್ ಸ್ಪೇಸ್ ಬೇಡಿಕೆಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ (Bengaluru Leading India's Office Space Market)
Image Credit : X

ದೇಶದಲ್ಲೇ ಆಫೀಸ್ ಸ್ಪೇಸ್ ಬೇಡಿಕೆಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ (Bengaluru Leading India's Office Space Market)

ಭಾರತದ ವಾಣಿಜ್ಯ ಕಚೇರಿ ಜಾಗದ ಬೇಡಿಕೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಇಡೀ ದೇಶದಲ್ಲೇ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದೆ. 2026 ರ ಮೊದಲಾರ್ಧದಲ್ಲಿ (H1 2026) ದೇಶಾದ್ಯಂತ ಲೀಸ್ ನೀಡಲಾದ ಒಟ್ಟು 35.7 ಮಿಲಿಯನ್ ಚದರ ಅಡಿ (msf) ಆಫೀಸ್ ಸ್ಪೇಸ್ ಪೈಕಿ ಬರೋಬ್ಬರಿ ಶೇಕಡಾ 29 ರಷ್ಟು ಪಾಲನ್ನು ಬೆಂಗಳೂರು ಒಂದೇ ಪಡೆದುಕೊಂಡಿದೆ. ಪ್ರಖ್ಯಾತ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಸಂಸ್ಥೆ ‘ಕಾಲಿಯರ್ಸ್’ (Colliers) ನೀಡಿರುವ ವರದಿಯ ಪ್ರಕಾರ, ಈ ಆರು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲೆಯ 10.5 ಮಿಲಿಯನ್ ಚದರ ಅಡಿ ಕಚೇರಿ ಸ್ಥಳವು ಲೀಸ್ ಆಗಿದೆ.

56
‘ಟಾರ್ಗೆಟ್ ಕಾರ್ಪೊರೇಷನ್’ ಗಿಟ್ಟಿಸಿಕೊಂಡ ₹1,250 ಕೋಟಿಯ ಮೆಗಾ ಡೀಲ್ (Target Corporation Mega Lease at Manyata)
Image Credit : X

‘ಟಾರ್ಗೆಟ್ ಕಾರ್ಪೊರೇಷನ್’ ಗಿಟ್ಟಿಸಿಕೊಂಡ ₹1,250 ಕೋಟಿಯ ಮೆಗಾ ಡೀಲ್ (Target Corporation Mega Lease at Manyata)

ಬೆಂಗಳೂರಿನ ಕಮರ್ಷಿಯಲ್ ರಿಯಲ್ ಎಸ್ಟೇಟ್ ಬಲಕ್ಕೆ ಸಾಕ್ಷಿ ಎಂಬಂತೆ, ಅಮೆರಿಕಾದ ರಿಟೇಲ್ ದೈತ್ಯ ಸಂಸ್ಥೆ ‘ಟಾರ್ಗೆಟ್ ಕಾರ್ಪೊರೇಷನ್’ (Target Corporation) ಭಾರತೀಯ ವಿಭಾಗವು ಇದೇ ತಿಂಗಳು ಅತ್ಯಂತ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದೆ. ಬೆಂಗಳೂರಿನ ಹೆಮ್ಮೆಯ ‘ಎಂಬೆಸಿ ಮಾನ್ಯತಾ ಬಿಸಿನೆಸ್ ಪಾರ್ಕ್’ನಲ್ಲಿ (Embassy Manyata Business Park) ಟಾರ್ಗೆಟ್‌ ಸಂಸ್ಥೆಯು ಬರೋಬ್ಬರಿ 8,30,000 ಚದರ ಅಡಿ ಕಚೇರಿ ಸ್ಥಳವನ್ನು ಲೀಸ್ ಪಡೆದಿದೆ. ಪ್ರಾಪ್‌ಸ್ಟಾಕ್ ವರದಿಯ ಪ್ರಕಾರ, ಮುಂದಿನ 10 ವರ್ಷಗಳ ಅವಧಿಗೆ ಒಟ್ಟು ₹1,250 ಕೋಟಿ ಬಾಡಿಗೆ ನೀಡುವ ಬೃಹತ್ ಮೊತ್ತಕ್ಕೆ ಈ ಒಪ್ಪಂದ ಮುದ್ರೆ ಬಿದ್ದಿದೆ.

66
ಜಾಗತಿಕ ಟೆಕ್ ದೈತ್ಯ ‘ಹನಿವೆಲ್’ ಸಂಸ್ಥೆಯ ಭಾರಿ ಹೂಡಿಕೆ (Honeywell Technology Solutions Bellandur Lease)
Image Credit : X

ಜಾಗತಿಕ ಟೆಕ್ ದೈತ್ಯ ‘ಹನಿವೆಲ್’ ಸಂಸ್ಥೆಯ ಭಾರಿ ಹೂಡಿಕೆ (Honeywell Technology Solutions Bellandur Lease)

ಕೇವಲ ಒಲಾ ಮತ್ತು ಟಾರ್ಗೆಟ್ ಮಾತ್ರವಲ್ಲದೆ, ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಯಾದ 'ಹನಿವೆಲ್ ಟೆಕ್ನಾಲಜಿ ಸೊಲ್ಯೂಷನ್ಸ್' (Honeywell Technology Solutions) ಸಹ ಬೆಂಗಳೂರಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿದೆ. ಇದೇ ವರ್ಷದ ಜನವರಿ ತಿಂಗಳಲ್ಲಿ ಹನಿವೆಲ್ ಸಂಸ್ಥೆಯು ಬೆಂಗಳೂರಿನ ಪ್ರಮುಖ ಐಟಿ ಹಬ್ ಆದ ಬೆಳ್ಳಂದೂರು (Bellandur) ಪ್ರದೇಶದಲ್ಲಿ ಸುಮಾರು 4,000,000 ಚದರ ಅಡಿ ಕಚೇರಿ ಸ್ಥಳವನ್ನು ಲೀಸ್ ಪಡೆದುಕೊಂಡಿದೆ. ಈ ಒಪ್ಪಂದವು ಮುಂದಿನ 7 ವರ್ಷಗಳ ಅವಧಿಗೆ ಜಾರಿಯಲ್ಲಿರಲಿದ್ದು, ಇದಕ್ಕಾಗಿ ಕಂಪನಿಯು ಒಟ್ಟು ₹429 ಕೋಟಿ ಬಾಡಿಗೆ ಹಣವನ್ನು ಪಾವತಿಸಲಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಓಲಾ ಉಬರ್
ಬೆಂಗಳೂರು
ಬೆಂಗಳೂರು ನಗರ
ರಿಯಲ್ ಎಸ್ಟೇಟ್
ಸುದ್ದಿ

Latest Videos
Recommended Stories
Recommended image1
ಐಫೋನ್ ಪ್ರಿಯರಿಗೆ ಬಿಗ್ ಶಾಕ್!; ಭಾರತದಲ್ಲಿ ಆಪಲ್ iPhone 17 ಬೆಲೆ 35 ಸಾವಿರದವರೆಗೆ ಭಾರಿ ಏರಿಕೆ ಸಾಧ್ಯತೆ
Recommended image2
ಕಾರ್ಪೋರೇಟ್ ಕಿಂಗ್ ಆಗಲು ಹೊರಟ ಕೊಹ್ಲಿ, ಯುವರಾಜ್ ಬೆಂಬಲಿತ ಸ್ಪೋರ್ಟ್ಸ್ ಸ್ಟಾರ್ಟ್‌ಅಪ್ ಖರೀದಿಗೆ ತಯಾರಿ
Recommended image3
ನಯಾರಾದಿಂದ ಪೆಟ್ರೋಲ್, ಡೀಸೆಲ್ ಬೆಲೆ ಕಡಿತ; ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ದರ ಇಳಿಕೆಯಾಗುತ್ತಾ?
Related Stories
Recommended image1
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!
Recommended image2
Bengaluru: ಉದ್ಯಮಕ್ಕೆಂದು ಜಾಗ ಪಡೆದು 250 ಕೋಟಿಗೆ ರಿಯಲ್‌ ಎಸ್ಟೇಟ್‌ ಕಂಪನಿಗೆ ಮಾರಿದ ಇನ್ಫೋಸಿಸ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved