ಸೌದಿಯಲ್ಲಿ 6 ಕೆಟಗರಿಯ ವಿದೇಶಿಯರಿಗೆ ಆಸ್ತಿ ಖರೀದಿಗೆ ಹೊಸ ನಿಯಮ ಪ್ರಕಟ
ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರವು ವಿದೇಶಿಯರಿಗೆ ಆಸ್ತಿ ಖರೀದಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆರು ವಿಭಾಗದ ವಿದೇಶಿಯರಿಗೆ ರಿಯಾದ್, ಜಿದ್ದಾ ಮುಂತಾದ ನಗರಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಆಸ್ತಿ ಖರೀದಿಸಲು ಅವಕಾಶ ನೀಡಲಾಗಿದೆ.

ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರ
ವಿದೇಶಿಯರಿಗೆ ರಿಯಲ್ ಎಸ್ಟೇಟ್‌ನಲ್ಲಿ ನೇರವಾಗಿ ಆಸ್ತಿ ಖರೀದಿಸಲು ಅವಕಾಶ ನೀಡುವ ಹೊಸ ನಿಯಮಗಳನ್ನು ಸೌದಿ ರಿಯಲ್ ಎಸ್ಟೇಟ್ ಪ್ರಾಧಿಕಾರ ಪ್ರಕಟಿಸಿದೆ. ಆರು ವಿಭಾಗದ ವಿದೇಶಿಯರಿಗೆ ಭೂಮಿ ಮತ್ತು ಕಟ್ಟಡಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
ಆರು ವಿಭಾಗದ ವಿದೇಶಿಯರು ಯಾರು?
ಸೌದಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಬಲಪಡಿಸುವುದು, ಹೂಡಿಕೆಯನ್ನು ಹೆಚ್ಚಿಸುವುದು ಮತ್ತು 'ವಿಷನ್ 2030' ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಆರು ವಿಭಾಗದ ವಿದೇಶಿಯರು ಅಂದ್ರೆ ಯಾರು ಎಂದು ನೋಡೋಣ ಬನ್ನಿ.
ಯಾರೆಲ್ಲಾ ಅರ್ಹರು?
ವಿದೇಶಿ ವ್ಯಕ್ತಿಗಳು, ವಿದೇಶಿ ಕಂಪನಿಗಳು (ಸೌದಿಯಲ್ಲಿ ಕಾರ್ಯನಿರ್ವಹಿಸದವರು ಸೇರಿದಂತೆ), ಲಾಭರಹಿತ ವಿದೇಶಿ ಸಂಸ್ಥೆಗಳು, ಅಂತರರಾಷ್ಟ್ರೀಯ ಪ್ರತಿನಿಧಿ ಸಂಸ್ಥೆಗಳು ಮತ್ತು ಏಜೆನ್ಸಿಗಳು (ಸೌದಿ ವಿದೇಶಾಂಗ ಸಚಿವಾಲಯದ ಅನುಮತಿಯೊಂದಿಗೆ), ವಿದೇಶಿ ಜಂಟಿ ಒಡೆತನದ ಸೌದಿ ಕಂಪನಿಗಳು, ವಿದೇಶಿ ಜಂಟಿ ಒಡೆತನದ ಕಂಪನಿಗಳು, ನಿಧಿಗಳು ಅಥವಾ ನಿರ್ದಿಷ್ಟ ಉದ್ದೇಶದ ಸಂಸ್ಥೆಗಳು ಸೌದಿಯಲ್ಲಿ ರಿಯಲ್ ಎಸ್ಟೇಟ್ ಖರೀದಿಸಲು ಅರ್ಹರಿರುತ್ತಾರೆ.
ಎಲ್ಲಿ ಆಸ್ತಿ ಖರೀದಿಸಬಹುದು?
ಈ ಆರು ಕೆಟೆಗರಿಯ ರಿಯಾದ್, ಜಿದ್ದಾ ನಗರಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಆಸ್ತಿ ಖರೀದಿಸಬಹುದು. ಮಕ್ಕಾ, ಮದೀನಾಗಳಲ್ಲಿ ಮತಾಧಾರಿತ ನಿಯಮಗಳಿಗೆ ಒಳಪಟ್ಟಿರುತ್ತದೆ. ಮಕ್ಕಾ ಮತ್ತು ಮದೀನಾದಲ್ಲಿ ಮುಸ್ಲಿಮರಿಗೆ ಮಾತ್ರ ಭೂಮಿ ಮತ್ತು ಆಸ್ತಿ ಖರೀದಿಸಲು ಅವಕಾಶವಿದೆ.
ನಿಯಮ ಉಲ್ಲಂಘಿಸಿ ಆಸ್ತಿ ಖರೀದಿಗೆ 1 ಕೋಟಿ ರಿಯಾಲ್ ದಂಡ
ಪ್ರಾಧಿಕಾರದ ರಿಯಲ್ ಎಸ್ಟೇಟ್ ನೋಂದಣಿಯಲ್ಲಿ ನೋಂದಾಯಿತ ಆಸ್ತಿಗಳನ್ನು ಮಾತ್ರ ಖರೀದಿಸಬಹುದು. ಖರೀದಿದಾರರು ತೆರಿಗೆ ಮತ್ತು ಶುಲ್ಕ ಸೇರಿದಂತೆ ಶೇ.10 ರಷ್ಟು ಮೊತ್ತವನ್ನು ಪಾವತಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ ಒಂದು ಕೋಟಿ ರಿಯಾಲ್ ದಂಡ ವಿಧಿಸಲಾಗುತ್ತದೆ.