Meta: ಇಂದು 8,000 ಮೆಟಾ ಉದ್ಯೋಗಿಗಳಿಗೆ ಗೇಟ್‌ಪಾಸ್! AI ಗಾಗಿ ಭಾರಿ ಉದ್ಯೋಗ ಕಡಿತ!
ಎಐ ಅಳವಡಿಕೆಗೆ ಒತ್ತು ನೀಡಿರುವ ಮೆಟಾ, ಇಂದು ಸುಮಾರು 8 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾಗಿದೆ. ಅಲ್ಲದೆ 6 ಸಾವಿರ ನೇಮಕಾತಿ ಸ್ಥಗಿತಗೊಳಿಸಿ ಉದ್ಯೋಗಿಗಳಿಗೆ ಶಾಕ್ ನೀಡಿದೆ. 7 ಸಾವಿರ ಸಿಬ್ಬಂದಿ ಎಐ ವಿಭಾಗಗಳಿಗೆ ವರ್ಗಾವಣೆ ಸೇರಿದಂತೆ ದೊಡ್ಡ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Meta ಮೆಟಾದಲ್ಲಿ ಮಹಾ ಲೇಆಫ್ ಶಾಕ್!
ಟೆಕ್ ಲೋಕದಲ್ಲಿ ಮತ್ತೆ ಉದ್ಯೋಗ ಕಡಿತದ ವೇವ್ ಶುರುವಾಗಿದೆ. ಸಾಮಾಜಿಕ ಜಾಲತಾಣ ದಿಗ್ಗಜ ಮೆಟಾ, ಇಂದು ಸುಮಾರು 8 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ ಎಂಬ ವರದಿಗಳು ಭಾರೀ ಚರ್ಚೆಗೆ ಕಾರಣವಾಗಿವೆ.

Meta 78 ಸಾವಿರ ಉದ್ಯೋಗಿಗಳಲ್ಲಿ ಶೇ.10ರಷ್ಟು ಹೊರಗೆ!
ಮೆಟಾದ ಒಟ್ಟು 78 ಸಾವಿರ ಸಿಬ್ಬಂದಿಯಲ್ಲಿ ಸುಮಾರು ಶೇ.10ರಷ್ಟು ಜನರಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ. ಕಂಪನಿಯ ಪುನರ್‌ವ್ಯವಸ್ಥೆ ಹಾಗೂ ವೆಚ್ಚ ಕಡಿತದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
AI ಗಾಗಿ ಎಐಗಾಗಿ ಮಾನವ ಉದ್ಯೋಗಗಳಿಗೆ ಮೆಟಾ ಕತ್ತರಿ!
ಕೃತಕ ಬುದ್ಧಿಮತ್ತೆ (AI) ಅಳವಡಿಕೆಗೆ ಮೆಟಾ ಈಗ ಭಾರೀ ಆದ್ಯತೆ ನೀಡುತ್ತಿದೆ. ಇದೇ ಕಾರಣದಿಂದ ಸಾವಿರಾರು ಉದ್ಯೋಗಿಗಳನ್ನು ಕಡಿತಗೊಳಿಸಿ, ಕಂಪನಿಯ ಭವಿಷ್ಯವನ್ನು ಎಐ ಆಧಾರಿತ ವ್ಯವಸ್ಥೆಗಳತ್ತ ತಿರುಗಿಸಲಾಗುತ್ತಿದೆ.
Meta ‘6 ಸಾವಿರ ನೇಮಕಾತಿಗೆ ಬ್ರೇಕ್!
ಇದಲ್ಲದೆ, ಈಗಾಗಲೇ ನಡೆಯಬೇಕಿದ್ದ ಸುಮಾರು 6 ಸಾವಿರ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಲು ಮೆಟಾ ತೀರ್ಮಾನಿಸಿದೆ. ಟೆಕ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಮೇಲೆ ಇದರಿಂದ ದೊಡ್ಡ ಪರಿಣಾಮ ಬೀಳುವ ಸಾಧ್ಯತೆ ಇದೆ.
7 ಸಾವಿರ ಸಿಬ್ಬಂದಿಗೆ ಹೊಸ ಎಐ ಡ್ಯೂಟಿ!
ಕೇವಲ ಉದ್ಯೋಗ ಕಡಿತ ಮಾತ್ರವಲ್ಲ, ಸುಮಾರು 7 ಸಾವಿರ ಉದ್ಯೋಗಿಗಳನ್ನು ಹೊಸದಾಗಿ ರಚಿಸಲಾದ 4 ಎಐ ಆಧಾರಿತ ಸಂಸ್ಥೆಗಳಿಗೆ ವರ್ಗಾವಣೆ ಮಾಡುವ ಯೋಜನೆಯೂ ಮೆಟಾ ಕೈಗೊಂಡಿದೆ. ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ.
14 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಎಐಗೆ ಸಿಂಹಪಾಲು!
2026ರೊಳಗೆ ಮೆಟಾ ಮಾಡಲಿರುವ ಭಾರಿ ಹೂಡಿಕೆಯಲ್ಲಿ ಹೆಚ್ಚಿನ ಮೊತ್ತವನ್ನು ಎಐ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಭವಿಷ್ಯದ ಟೆಕ್ ಯುದ್ಧದಲ್ಲಿ ಮುನ್ನಡೆಯಲು ಕಂಪನಿ ಬೃಹತ್ ಯೋಜನೆ ರೂಪಿಸಿದೆ.
‘ಮನೆಯಿಂದಲೇ ಕೆಲಸ ಮಾಡಿ ಎಂದ ಮೆಟಾ!
ಉದ್ಯೋಗ ಕಡಿತದ ಆತಂಕದ ನಡುವೆಯೇ, ಉತ್ತರ ಅಮೆರಿಕದ ಉದ್ಯೋಗಿಗಳಿಗೆ ಬುಧವಾರ ಮನೆಯಿಂದಲೇ ಕೆಲಸ ಮಾಡುವಂತೆ ಕಂಪನಿ ಸೂಚಿಸಿದೆ. ಇದರಿಂದ ಮೆಟಾದ ಒಳಾಂಗಣ ಬದಲಾವಣೆಗಳು ಇನ್ನಷ್ಟು ವೇಗ ಪಡೆಯುತ್ತಿರುವ ಸೂಚನೆ ಸಿಕ್ಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

