Success Story: ಮೀಡಿಯಾ ಬಿಟ್ಟು ಹಿಟ್ಟಿನ ವ್ಯಾಪಾರ ಪ್ರಾರಂಭಿಸಿ ಕೋಟ್ಯಾಧಿಪತಿಯಾದರು
Mumbai Youth Business: ಲಾಕ್‌ಡೌನ್.. ಎಲ್ಲರೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ರಸ್ತೆಗಳು ನಿರ್ಜನವಾಗಿದ್ದ, ಜನರು ಉದ್ಯೋಗವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುತ್ತಿದ್ದ ಸಮಯವದು. ಆಗ ಇಬ್ಬರು ವಿಭಿನ್ನವಾಗಿ ಏನನ್ನಾದರೂ ಮಾಡಲು ನಿರ್ಧರಿಸಿ ಇಂದು ಕೋಟ್ಯಾಧಿಪತಿಯಾಗಿದ್ದಾರೆ.

ಅವಕಾಶವನ್ನಾಗಿ ಪರಿವರ್ತಿಸಿಕೊಂಡರು
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಆಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈ ಹಿಂದೆ ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಸ್ಥಗಿತಗೊಂಡಾಗ ಇಬ್ಬರು ವ್ಯಕ್ತಿಗಳು ಮಾತ್ರ ಇದೇ ಸಮಯವನ್ನ ಅವಕಾಶವನ್ನಾಗಿ ಪರಿವರ್ತಿಸಿಕೊಂಡರು. ಇದೇ ಇಂದು ಅವರ ಗಳಿಕೆಗೆ ಹೊಸ ಕಿಟಕಿ ತೆರೆದಿದೆ.
ಹಿಟ್ಟಿನ ಗಿರಣಿ ಸ್ಥಾಪನೆ
ಹೌದು. ಕೊರೊನಾ ಬಂದಾಗ ಲಾಕ್‌ಡೌನ್ ಸಮಯದಲ್ಲಿ ಮಂಗೇಶ್ ಮತ್ತು ಪ್ರಶಾಂತ್ ಎಂಬುವವರು "ಶುದ್ಧಮಯ್" ಎಂಬ ಹಿಟ್ಟಿನ ಗಿರಣಿಯನ್ನು ಸ್ಥಾಪಿಸಿದರು. ಅಂದಹಾಗೆ ಇದಕ್ಕೂ ಮೊದಲು ಮಂಗೇಶ್ ಮತ್ತು ಪ್ರಶಾಂತ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಈ ಹಿಟ್ಟಿನ ವ್ಯವಹಾರವು ಲಕ್ಷಾಂತರ ರೂಪಾಯಿಗಳನ್ನು ತಲುಪಿದೆ. ಈ ಬ್ರ್ಯಾಂಡ್ ಮುಂಬೈ ಮಾರುಕಟ್ಟೆಯಲ್ಲಿ ಬಲವಾದ ಹಿಡಿತವನ್ನು ಸ್ಥಾಪಿಸಿದೆ.
ವೇಗವಾಗಿ ಬೆಳೆಯುತ್ತಿದೆ ಬ್ಯುಸಿನೆಸ್
"ಶುದ್ಧಮಯ್" ಹಿಟ್ಟಿನ ಗಿರಣಿಯು ಮುಂಬೈನ ಕಂಡಿವಲಿ ನಿಲ್ದಾಣದಿಂದ ಕೇವಲ 15 ನಿಮಿಷಗಳ ದೂರದಲ್ಲಿದೆ. ಇವರು ಸಾಂಪ್ರದಾಯಿಕ ಗೋಧಿ ಮತ್ತು ಅಕ್ಕಿ ಹಿಟ್ಟನ್ನು ಹಾಗೂ ಮಲ್ಟಿಗ್ರೇನ್ 7.4 ನಂತಹ ವಿಶೇಷ ಹಿಟ್ಟನ್ನು ನೀಡುತ್ತಾರೆ. ಅವರ ಸೇವೆಯ ವಿಶಿಷ್ಟ ಅಂಶವೆಂದರೆ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಐದು ಕಿಲೋಗ್ರಾಂಗಳಿಗಿಂತ ಹೆಚ್ಚಿನ ಹಿಟ್ಟನ್ನು ಉಚಿತವಾಗಿ ತಲುಪಿಸುವುದು. ಇದು ಗ್ರಾಹಕರಿಗೆ ಅನುಕೂಲವನ್ನು ಒದಗಿಸುತ್ತದೆ ಮತ್ತು ಅವರ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ.
ಸಾಮಾನ್ಯ ಜನರಿಗೆ ಸ್ಫೂರ್ತಿ
ಪ್ರಶಾಂತ್ ಮತ್ತು ಮಂಗೇಶ್ ಅವರ ಕಥೆ ಸಾಮಾನ್ಯ ಜನರಿಗೆ ಸ್ಫೂರ್ತಿಯಾಗುವುದು ಖಂಡಿತ. ಇಬ್ಬರೂ ಈ ಹಿಂದೆ ಉತ್ತಮ ಸಂಬಳದ ಉದ್ಯೋಗಗಳನ್ನು ಹೊಂದಿದ್ದರು. ಮಂಗೇಶ್ ಮಾಧ್ಯಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಸಿಕ ಸುಮಾರು 35,000 ರೂಪಾಯಿಗಳ ಸಂಬಳವನ್ನು ಗಳಿಸುತ್ತಿದ್ದರು. ಪ್ರಶಾಂತ್ ಕೂಡ ಇದೇ ರೀತಿಯ ಸಂಬಳವನ್ನು ಗಳಿಸುತ್ತಿದ್ದರು. ಆದರೆ ಲಾಕ್‌ಡೌನ್ ಅವರ ಚಿಂತನೆ ಮತ್ತು ಜೀವನವನ್ನು ಬದಲಾಯಿಸಿತು (ಲಾಕ್‌ಡೌನ್ ಸಮಯದಲ್ಲಿ ಎಲ್ಲರೂ ಮನೆಯೊಳಗೆ ಇರಲು ಒತ್ತಾಯಿಸಲ್ಪಟ್ಟಾಗ)
ಶುದ್ಧ ಹಿಟ್ಟು ಬೇಕಿದೆ
ಆ ಸಮಯದಲ್ಲಿ ಜನರಿಗೆ ತಾಜಾ ಆಹಾರವೇ ಹೆಚ್ಚು ಬೇಕು ಎಂದು ಪ್ರಶಾಂತ್ ಮತ್ತು ಮಂಗೇಶ್ ಅರಿತುಕೊಂಡರು. ಆ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಹಿಟ್ಟಿನ ವ್ಯವಹಾರವನ್ನು ಪ್ರಾರಂಭಿಸಿದರು. ಇಂದು ಮಂಗೇಶ್ ಮತ್ತು ಪ್ರಶಾಂತ್ ವಾರ್ಷಿಕವಾಗಿ ಸುಮಾರು 16 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಮುಂಬೈನ ಜನರು ತಮ್ಮ ಬ್ರ್ಯಾಂಡ್ ಅನ್ನು ತುಂಬಾ ಇಷ್ಟಪಡುತ್ತಾರೆ ಎಂದು ಅವರು ಹೇಳುತ್ತಾರೆ. ಅನೇಕ ಗ್ರಾಹಕರು ಈ ವ್ಯವಹಾರವನ್ನು ಮೊದಲೇ ಪ್ರಾರಂಭಿಸಬೇಕಿತ್ತು ಎಂದು ಹೇಳುತ್ತಾರೆ. ಏಕೆಂದರೆ ಜನರಿಗೆ ಶುದ್ಧ ಮತ್ತು ವಿಶ್ವಾಸಾರ್ಹ ಹಿಟ್ಟು ಬೇಕಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

