ಹಣ ನೋಡಿ ಮದುವೆಯಾಗೋ ಹುಡುಗಿಯರೇ ಹುಷಾರ್; ಕಣ್ಣಿಗೆ ಕಾಣದ ಸತ್ಯ ಬಿಚ್ಚಿಟ್ಟ ಕಂಪೆನಿಯ CEO
ಇತ್ತೀಚೆಗೆ ಗುರ್ಗಾಂವ್ ಮೂಲದ ಒಬ್ಬ CEO ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಯಲ್ಲಿ ಹಣ ಮತ್ತು ಅಧಿಕಾರದ ಬಗ್ಗೆ ಅವರ ಅಭಿಪ್ರಾಯಗಳು ಈಗ ವೈರಲ್ ಆಗಿವೆ.

ಶ್ರೀಮಂತ ಹುಡುಗನನ್ನು ಮದುವೆಯಾಗುವ ಕನಸು
ಹೆಚ್ಚಿನ ಮಹಿಳೆಯರು ಶ್ರೀಮಂತ ಹುಡುಗನನ್ನು ಮದುವೆಯಾಗುವ ಕನಸು ಕಾಣುತ್ತಾರೆ. ಆದರೆ ಆ ಕನಸು ಕೆಲವೊಮ್ಮೆ ಸುಂದರ ಪಂಜರದಂತಿರಬಹುದು ಎಂದು ಅವರು ತಮ್ಮ X ಖಾತೆಯಲ್ಲಿ ಬರೆದಿದ್ದಾರೆ.
ಅವರ ಪ್ರಕಾರ, ಗಂಡ-ಹೆಂಡತಿಯ ಆದಾಯದ ಅಂತರ ಹೆಚ್ಚಾದಂತೆ ಸಂಬಂಧದಲ್ಲಿ ಸಮಾನತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಒಬ್ಬರು ವರ್ಷಕ್ಕೆ ₹1 ಕೋಟಿ ಗಳಿಸುತ್ತಿದ್ದರೆ, ಇನ್ನೊಬ್ಬರು ₹10 ಲಕ್ಷ ಗಳಿಸುತ್ತಿದ್ದರೆ, ಒಂದು ಹಂತದಲ್ಲಿ ಹೆಚ್ಚು ಗಳಿಸುತ್ತಿರುವ ಗಂಡನಿಗೆ ತಾನೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಮೂಡಬಹುದು ಎಂದು ಹೇಳಿದ್ದಾರೆ.
ಒಂದು ರೀತಿಯ ಅಧಿಕಾರ
CEO ಅಭಿಪ್ರಾಯದಲ್ಲಿ, ಹಣವು ಕೇವಲ ನಮ್ಮ ಅಗತ್ಯತೆ ಅಲ್ಲ, ಅದು ಒಂದು ರೀತಿಯ ಅಧಿಕಾರವೂ ಹೌದು. ಹೆಚ್ಚು ಹಣ ಹೊಂದಿರುವ ವ್ಯಕ್ತಿಯೇ ಅನೇಕ ಸಂದರ್ಭಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿರಬಹುದು ಎಂದು ಅವರು ಹೇಳಿದ್ದಾರೆ.
ತಮ್ಮನ್ನು ತಾವು ಒಂದು ಪ್ರಶ್ನೆ ಕೇಳಿಕೊಳ್ಳಬೇಕು
ಮದುವೆಗೂ ಮುನ್ನ ಮಹಿಳೆಯರು ತಮ್ಮನ್ನು ತಾವು ಒಂದು ಪ್ರಶ್ನೆ ಕೇಳಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮದುವೆಯಾಗುವವನು ನಿಮ್ಮನ್ನು ನಿಜವಾಗಿಯೂ ತನ್ನವಳೆಂದು ಭಾವಿಸುತ್ತಾನೆಯೇ, ಅಥವಾ ಕೇವಲ ಇಷ್ಟಪಡುತ್ತಾನೆಯೇ? ಎಂಬ ಪ್ರಶ್ನೆಯನ್ನು ಯೋಚಿಸುವಂತೆ ಹೇಳಿದ್ದಾರೆ.
ಆದಾಯದ ಅಂತರ
ಅಲ್ಲದೆ ಗಂಡ-ಹೆಂಡತಿಯ ಆದಾಯದ ಅಂತರವು ತುಂಬಾ ಹೆಚ್ಚಾಗಬಾರದು. ಆದಾಯದ ಅಂತರ ಹೆಚ್ಚಾದಂತೆ ಸಂಬಂಧದಲ್ಲಿ ಒಬ್ಬರ ಪ್ರಭಾವ ಮತ್ತೊಬ್ಬರಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Most women dream of marrying a rich man. That dream is a cage with good interiors.
The larger the income gap, the less equal the marriage becomes.
If he earns 1 crore and you earn 10 lakh, sooner or later one thought enters the room: I'm doing everything. I'm paying for…— Jasveer Singh (@jasveer10) June 5, 2026
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.