Inspirational Story: ಮಧ್ಯಪ್ರದೇಶದ ಕತ್ರಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ರಾಹುಲ್ ತನೇಜಾ ಅವರ ಬಾಲ್ಯವು ಹೋರಾಟಗಳಿಂದಲೇ ಕೂಡಿತ್ತು. ಜೈಪುರದಲ್ಲಿ ರಸ್ತೆಬದಿಯ ಉಪಾಹಾರ ಗೃಹದಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದರು. ತಿಂಗಳ ಕೊನೆಯಲ್ಲಿ ಕೇವಲ 150 ರೂಪಾಯಿ ಗಳಿಸುತ್ತಿದ್ದರು.
ನರಸಿಂಹ ಚಿತ್ರದಲ್ಲಿ 'ಎಕ್ಕು ತೋಳಿಮೆಟ್ಟು .. ಕೊಂಡನು ಕೊಟ್ಟು ಡಿಕೊಟ್ಟು' ಎಂಬ ಒಂದು ಹಾಡಿದೆ. ಆ ಹಾಡು ಮುಗಿಯುವ ಹೊತ್ತಿಗೆ ರಜನಿಕಾಂತ್ ಕೋಟ್ಯಾಧಿಪತಿಯಾಗುತ್ತಾರೆ. ಇದು ನಿಜ ಜೀವನದಲ್ಲಿ ಸಾಧ್ಯನಾ?. ಖಂಡಿತ. ಇದಕ್ಕೆ ಉದಾಹರಣೆ ರಾಹುಲ್ ತನೇಜಾ. ಆದರೆ ಈ ಮಟ್ಟಕ್ಕೆ ತಲುಪಲು ಅವರು ಬಹಳ ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟರು. ನೀವು ಚೆನ್ನಾಗಿ ದುಡಿದರೆ ಹೋಟೆಲ್‌ನಲ್ಲಿರುವ ಸರ್ವರ್ ಕೂಡ ಕೋಟ್ಯಧಿಪತಿಯಾಗಬಹುದು.
ಜೈಪುರದ ಉದ್ಯಮಿ ರಾಹುಲ್ ತನೇಜಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಒಂದು ಕಾಲದಲ್ಲಿ ಆಟೋ ಚಾಲಕರಾಗಿದ್ದ ಇವರು, ಇತ್ತೀಚೆಗೆ 18 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ತಮ್ಮ ಮಗನಿಗೆ ಆಡಿ ಆರ್‌ಎಸ್ ಕ್ಯೂ 8 ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ 32 ಲಕ್ಷ ಮೌಲ್ಯದ ವಿಐಪಿ ನಂಬರ್ ಪ್ಲೇಟ್ ಅನ್ನು ಸಹ ಖರೀದಿಸಿದ್ದಾರೆ. ಇದು ಇಲ್ಲಿಯವರೆಗಿನ ರಾಜಸ್ಥಾನದ ಅತ್ಯಂತ ದುಬಾರಿ ನೋಂದಣಿ ಪ್ಲೇಟ್ ಆಗಿದೆ - ಆರ್‌ಜೆ 60 ಸಿಎಂ 0001.
ರಾಹುಲ್ ತನೇಜಾ ತಮ್ಮ ಜೀವನದುದ್ದಕ್ಕೂ ತೀವ್ರ ಹೋರಾಟ ನಡೆಸಿದವರು. ಈಗ ಯಶಸ್ಸನ್ನು ಸಾಧಿಸುವ ಮೂಲಕ ಜಗತ್ತಿಗೆ ಮಾದರಿಯಾಗಿ ನಿಂತಿದ್ದಾರೆ. ಮಧ್ಯಪ್ರದೇಶದ ಕತ್ರಾ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ರಾಹುಲ್ ತನೇಜಾ ಅವರ ಬಾಲ್ಯವು ಹೋರಾಟಗಳಿಂದಲೇ ಕೂಡಿತ್ತು. ಜೈಪುರದಲ್ಲಿ ಇವರು ರಸ್ತೆಬದಿಯ ಉಪಾಹಾರ ಗೃಹದಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದರು. ತಿಂಗಳ ಕೊನೆಯಲ್ಲಿ ಕೇವಲ 150 ರೂಪಾಯಿ ಗಳಿಸುತ್ತಿದ್ದರು. ಇವರ ತಂದೆ ಸೈಕಲ್ ಪಂಕ್ಚರ್‌ಗಳನ್ನು ರಿಪೇರಿ ಮಾಡುತ್ತಿದ್ದರು ಮತ್ತು ಅವರ ತಾಯಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಕಠಿಣ ಪರಿಸ್ಥಿತಿಗಳ ನಡುವೆಯೂ ರಾಹುಲ್ ತನ್ನ ಅಧ್ಯಯನವನ್ನು ಬಿಡಲಿಲ್ಲ. ರಾಜಪಾರ್ಕ್‌ನಲ್ಲಿರುವ ಆದರ್ಶ ವಿದ್ಯಾ ಮಂದಿರಕ್ಕೆ ಹಾಜರಾದರು. ಸ್ನೇಹಿತರಿಂದ ಪುಸ್ತಕಗಳನ್ನು ಎರವಲು ಪಡೆದು 92% ಅಂಕಗಳನ್ನು ಗಳಿಸಿದರು.
ಹೊಸ ತಿರುವು ನೀಡಿತು ಮಾಡೆಲಿಂಗ್
ತನ್ನ ಕುಟುಂಬವನ್ನು ಪೋಷಿಸಲು, ರಾಹುಲ್ ಚಹಾ ಮತ್ತು ತಿಂಡಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಹಬ್ಬಗಳ ಸಮಯದಲ್ಲಿ ಪಟಾಕಿಗಳು, ಬಣ್ಣಗಳು ಮತ್ತು ಗಾಳಿಪಟಗಳನ್ನು ಸಹ ಮಾರಾಟ ಮಾಡಿದರು. 16 ನೇ ವಯಸ್ಸಿಗೆ ದುರ್ಗಾಪುರ ರೈಲ್ವೆ ನಿಲ್ದಾಣದಲ್ಲಿ ಆಟೋ ಓಡಿಸಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರ ಸ್ನೇಹಿತರು ಮಾಡೆಲಿಂಗ್ ಮಾಡಲು ಸಲಹೆ ನೀಡಿದರು. ಅವರ ಎತ್ತರದ ನಿಲುವು ಮತ್ತು ಆತ್ಮವಿಶ್ವಾಸದಿಂದ ಮಿಸ್ಟರ್ ಜೈಪುರ, ಮಿಸ್ಟರ್ ರಾಜಸ್ಥಾನ ಮತ್ತು ವರ್ಷದ ಪುರುಷ ಪ್ರಶಸ್ತಿಗಳನ್ನು ಗೆದ್ದರು. ಫ್ಯಾಷನ್ ಶೋಗಳನ್ನು ಮಾಡುವಾಗ ಅವರು ಈವೆಂಟ್ ನಿರ್ವಹಣೆಯ ಕಲ್ಪನೆಯನ್ನು ಪಡೆದರು. ಅದು ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು.
ಐಷಾರಾಮಿ ಕಾರುಗಳು ಮತ್ತು ದಾಖಲೆ ಮುರಿದ ನಂಬರ್ ಪ್ಲೇಟ್‌ಗಳು
ರಾಹುಲ್ ತನೇಜಾ 2000 ದಲ್ಲಿ ಲೈವ್ ಕ್ರಿಯೇಷನ್ಸ್ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಪ್ರಾರಂಭಿಸಿದರು. ಇದರ ನಂತರ, 2005 ರಲ್ಲಿ ಅವರು IndianArtist.com ಅನ್ನು ಪ್ರಾರಂಭಿಸಿದರು. ನಂತರ ಪ್ರೀಮಿಯಂ ವೆಡ್ಡಿಂಗ್ಸ್ ಎಂಬ ಐಷಾರಾಮಿ ವೆಡ್ಡಿಂಗ್ ಪ್ಲಾನಿಂಗ್ ಬ್ಯುಸಿನೆಸ್ ಪ್ರಾರಂಭಿಸಿದರು. 2011 ರಲ್ಲಿ 10 ಲಕ್ಷ ರೂ. ಮೌಲ್ಯದ RJ 14 CP 0001 ನಂಬರ್ ಪ್ಲೇಟ್ ಅನ್ನು ಖರೀದಿಸುವ ಮೂಲಕ ಅವರು ಬೆಳಕಿಗೆ ಬಂದರು. ನಂತರ 2018 ರಲ್ಲಿ 16 ಲಕ್ಷ ರೂ. ಮೌಲ್ಯದ RJ 45 CG 0001 ಪ್ಲೇಟ್ ಅನ್ನು ಖರೀದಿಸಿದರು. ಈಗ ಅವರು ಮತ್ತೊಮ್ಮೆ 31 ಲಕ್ಷ ರೂ. ಮೌಲ್ಯದ ನಂಬರ್ ಪ್ಲೇಟ್ ಖರೀದಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
