ಹಣವೋ ಹಣ, 2 ವರ್ಷದಲ್ಲಿ 700% ರಿಟರ್ನ್; ಕುಸಿತದಲ್ಲೂ ಜಿಗಿತ ಕಂಡ ಮಲ್ಟಿಬ್ಯಾಗರ್ ಸ್ಟಾಕ್
ಕೃತಕ ಬುದ್ಧಿಮತ್ತೆ ಆಧಾರಿತ ಸ್ಟಾಕ್, ಮಾರುಕಟ್ಟೆಯ ಕುಸಿತದ ನಡುವೆಯೂ ಶೇ.4ಕ್ಕಿಂತ ಹೆಚ್ಚು ಏರಿಕೆ ಕಂಡು ಹೂಡಿಕೆದಾರರ ಗಮನ ಸೆಳೆದಿದೆ. ಕಂಪನಿಯು ತನ್ನ ಮೂರನೇ ತ್ರೈಮಾಸಿಕದಲ್ಲಿ ₹718 ಕೋಟಿ ಆದಾಯ ಮತ್ತು ₹119 ಕೋಟಿ ಲಾಭ ಗಳಿಸಿದ್ದು, ಇದು ಮಲ್ಟಿಬ್ಯಾಗರ್ ಆಗುವ ಸಾಮರ್ಥ್ಯವನ್ನು ತೋರಿಸುತ್ತದೆ.

ಮಲ್ಟಿಬ್ಯಾಗರ್ ಸ್ಟಾಕ್
ಮಲ್ಟಿಬ್ಯಾಗರ್ ಸ್ಟಾಕ್‌ಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸುವ ಸಾಮರ್ಥ್ಯವನ್ನು ಹೊಂದಿವೆ. ಮಲ್ಟಿ ಬ್ಯಾಗರ್ ಸ್ಟಾಕ್‌ಗಳು ಸಣ್ಣ ಕಂಪನಿಗಳ ಷೇರುಗಳಾಗಿದ್ದು, ದೊಡ್ಡ ಪ್ರಮಾಣದ ಹೂಡಿಕೆದಾರರ ಗಮನವನ್ನು ಸೆಳೆದಿರಲ್ಲ. ಇಂದು ನಾವು ನಿಮಗೆ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿರುವ ಮಲ್ಟಿಬ್ಯಾಗರ್ ಸ್ಟಾಕ್ ಕುರಿತ ಮಾಹಿತಿಯನ್ನು ನೀಡುತ್ತಿದ್ದೇವೆ.
Affle 3i ಹೆಸರಿನ AI ಸ್ಟಾಕ್
Affle 3i ಹೆಸರಿನ AI ಸ್ಟಾಕ್ ಶುಕ್ರವಾರ ತೀವ್ರ ಕುಸಿತದ ನಡುವೆಯೂ ಶೇ.4ಕ್ಕಿಂತಲೂ ಅಧಿಕ ಏರಿಕೆ ಕಂಡಿದೆ. 2026 ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ Affle 3i ಉತ್ತಮ ಪ್ರದರ್ಶನ ಕಾಣುವ ಮೂಲಕ ಹೂಡಿಕೆದಾರರನ್ನು ಸೆಳೆದಿತ್ತು. EBITDA ಯಲ್ಲಿ ಸತತ 11 ನೇ ತ್ರೈಮಾಸಿಕ ಹೆಚ್ಚಳ ಮತ್ತು Q3 ರಲ್ಲಿ EBITDA ಮಾರ್ಜಿನ್‌ನಲ್ಲಿ ಸತತ ಏಳನೇ ತ್ರೈಮಾಸಿಕ ಹೆಚ್ಚಳ Affle 3i ಷೇರುಗಳ ಮೇಲೆ ಧನಾತ್ಮಕ ಪರಿಣಾಮ ಬೀರಿವೆ.
Affle 3i ಗಳಿಕೆ ಎಷ್ಟು?
ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ₹718 ಕೋಟಿ ಆದಾಯ ಗಳಿಸಿದೆ ಎಂದು Affle 3i ಫೆಬ್ರವರಿಯಲ್ಲಿ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಆದಾಯ ಕಳೆದ ತ್ರೈಮಾಸಿಕಕ್ಕಿಂತ ಶೇ.10.9ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿ ಆದಾಯ ಶೇ.19.2ರಷ್ಟು ಏರಿಕೆಯಾಗಿತ್ತು. ಇನ್ನು ಕಂಪನಿಯ EBITDA ₹163 ಕೋಟಿಗಳಾಗಿದ್ದು, ಹಿಂದಿನ ವರ್ಷಕ್ಕಿಂತ 24.1% ಹೆಚ್ಚಳ ಮತ್ತು ಸೆಪ್ಟೆಂಬರ್ ತ್ರೈಮಾಸಿಕಕ್ಕಿಂತ 11.6% ಹೆಚ್ಚಳವಾಗಿದೆ.
₹119 ಕೋಟಿ
ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ತೆರಿಗೆ ನಂತರದ ಲಾಭ (PAT) ₹119 ಕೋಟಿ ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ.19.1 ರಷ್ಟು ಸುಧಾರಣೆಯಾಗಿದೆ. ವಿನಿಮಯ ದಾಖಲೆಗಳ ಪ್ರಕಾರ, CPCU ನ ಆದಾಯ ₹714 ಕೋಟಿಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.19.6 ರಷ್ಟು ಹೆಚ್ಚಳ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.12.9 ರಷ್ಟು ಹೆಚ್ಚಳವಾಗಿದೆ.
Affle 3i ಕಂಪನಿ ಎದುರಿಸುತ್ತಿರುವ ಸವಾಲುಗಳು
* ರಿಯಲ್-ಮನಿ ಗೇಮಿಂಗ್ ನಿಯಮಗಳು ಕಂಪನಿ ಮೇಲೆ ನಕರಾತ್ಮಕ ಪರಿಣಾಮ
* ದಾಸ್ತಾನು ಮತ್ತು ಡೇಟಾ ವೆಚ್ಚಗಳ ಹೆಚ್ಚಳ
* ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಅಪಾಯ
ಇದನ್ನೂ ಓದಿ: ತನ್ನ ಬಾಯಲ್ಲಿ ಕೇಸರಿ ಹೇಳಿ, ಜನರ ಬಾಯಿಗೆ ವಿಸ್ಕಿಬಿಟ್ಟು ಕೋಟಿ ಕೋಟಿ ಗಳಿಸಿದ ಬಾಲಿವುಡ್ ನಟ ಅಜಯ್ ದೇವಗನ್!
ಅಂತರರಾಷ್ಟ್ರೀಯ ಮಾರುಕಟ್ಟೆ
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ಡೇಟಾ ಸಾಮರ್ಥ್ಯಗಳು ಮತ್ತು ಜಾಹೀರಾತು ದಾಸ್ತಾನುಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿರುವುದಾಗಿ ಅಫ್ಲೆ ಹೇಳಿದೆ. ಈ ಹೂಡಿಕೆಗಳು ಅದರ ದೀರ್ಘಕಾಲೀನ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದ್ದರೂ, ಅವು ಅಲ್ಪಾವಧಿಯ ಲಾಭದಾಯಕತೆ ಮತ್ತು ಅಂಚುಗಳ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: GPay,PhonePe, PayTM ಠಕ್ಕರ್ ಕೊಡಲು ಭಾರತಕ್ಕೆ ಬರ್ತಿದೆ Apple Pay!
Disclaimer:
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

