- Home
- Business
- Gold Mine: ವಿಶ್ವದ ನಂ.1 ಚಿನ್ನದ ಗಣಿ! ವರ್ಷಕ್ಕೆ 52 ಟನ್ ಉತ್ಪಾದನೆ; ಇದಕ್ಕಾಗಿ ಸ್ವಂತ ಏರ್‌ಪೋರ್ಟ್, ಬಂದರು
Gold Mine: ವಿಶ್ವದ ನಂ.1 ಚಿನ್ನದ ಗಣಿ! ವರ್ಷಕ್ಕೆ 52 ಟನ್ ಉತ್ಪಾದನೆ; ಇದಕ್ಕಾಗಿ ಸ್ವಂತ ಏರ್‌ಪೋರ್ಟ್, ಬಂದರು
ವಿಶ್ವದ ನಂಬರ್ 1 ಚಿನ್ನದ ಗಣಿ ವರ್ಷಕ್ಕೆ 52 ಟನ್ ಚಿನ್ನ ಉತ್ಪಾದಿಸುತ್ತದೆ. ಈ ಗಣಿಗಾಗಿಯೇ ಪ್ರತ್ಯೇಕ ವಿಮಾನ ನಿಲ್ದಾಣವೂ ಇದೆ. ಈ ಅಚ್ಚರಿಯ ಗಣಿಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದ ಶ್ರೀಮಂತ ಚಿನ್ನದ ಗಣಿ
ವಿಶ್ವದ ಅತಿದೊಡ್ಡ ಮತ್ತು ಶ್ರೀಮಂತ ಚಿನ್ನದ ಗಣಿ ಇಂಡೋನೇಷ್ಯಾದ ಪಪುವಾ ಪ್ರಾಂತ್ಯದಲ್ಲಿರುವ ಗ್ರಾಸ್‌ಬರ್ಗ್. ಈ ಗಣಿ ವಾರ್ಷಿಕವಾಗಿ ಸುಮಾರು 48 ಟನ್ ಚಿನ್ನವನ್ನು ಉತ್ಪಾದಿಸುತ್ತದೆ. ಚಿನ್ನದ ಜೊತೆಗೆ, ಇದು ವಿಶ್ವದ ಅತಿದೊಡ್ಡ ತಾಮ್ರದ ಗಣಿಗಳಲ್ಲಿ ಒಂದಾಗಿದೆ.
ಸ್ವಂತ ವಿಮಾನ ನಿಲ್ದಾಣ
ಗ್ರಾಸ್‌ಬರ್ಗ್ ಗಣಿಯಿಂದ ತೆಗೆಯುವ ಅದಿರಿನಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಮತ್ತು ತಾಮ್ರ ಎರಡೂ ಇವೆ. ಪಪುವಾದ ಅತಿ ಎತ್ತರದ ಪರ್ವತವಾದ ಪುನ್‌ಕಾಕ್ ಜಯಾ ಬಳಿ ಈ ಗಣಿ ಇದೆ. ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದ ಈ ಇಡೀ ಪ್ರದೇಶವು ರೂಪುಗೊಂಡಿದ್ದು, ಖನಿಜ ನಿಕ್ಷೇಪಗಳಿಂದ ತುಂಬಿದೆ.
ಸುಮಾರು 20,000 ಜನರು ಕೆಲಸ
ಗ್ರಾಸ್‌ಬರ್ಗ್ ಚಿನ್ನದ ಗಣಿಯಿಂದ ಪ್ರತಿವರ್ಷ ಭಾರೀ ಪ್ರಮಾಣದ ಚಿನ್ನವನ್ನು ಹೊರತೆಗೆಯಲಾಗುತ್ತದೆ. ಈ ಬೃಹತ್ ಗಣಿಯಲ್ಲಿ ಸುಮಾರು 20,000 ಜನರು ಕೆಲಸ ಮಾಡುತ್ತಾರೆ.
ಪ್ರತ್ಯೇಕ ವಿಮಾನ ನಿಲ್ದಾಣ ಮತ್ತು ಬಂದರು
ಈ ಚಿನ್ನದ ಗಣಿಗಾಗಿಯೇ ಪ್ರತ್ಯೇಕ ವಿಮಾನ ನಿಲ್ದಾಣ ಮತ್ತು ಬಂದರು ಕೂಡ ಇದೆ. ಅಷ್ಟೇ ಅಲ್ಲ, ಇಲ್ಲಿನ ಉದ್ಯೋಗಿಗಳಿಗಾಗಿ ವಸತಿ ಸಮುಚ್ಚಯಗಳು, ಶಾಲೆಗಳು ಮತ್ತು ಆಸ್ಪತ್ರೆಗಳನ್ನೂ ನಿರ್ಮಿಸಲಾಗಿದೆ.
1936ರಲ್ಲಿ ಪತ್ತೆ
ಗ್ರಾಸ್‌ಬರ್ಗ್ ಚಿನ್ನದ ಗಣಿಯ ಇತಿಹಾಸ ನೋಡಿದರೆ, 1936ರಲ್ಲಿ ಡಚ್ ಭೂವಿಜ್ಞಾನಿ ಜೀನ್ ಜಾಕ್ವೆಸ್ ಡೋಜಿ ಇಲ್ಲಿನ ಖನಿಜ ಸಂಪನ್ಮೂಲಗಳನ್ನು ಮೊದಲು ಕಂಡುಹಿಡಿದರು.
ಇದನ್ನೂ ಓದಿ: ಚಿನ್ನ, ಬೆಳ್ಳಿ ಚಿಂತೆ ಬಿಟ್ಟುಬಿಡಿ... ಇನ್ಮುಂದೆ ತಾಮ್ರದ್ದೇ ಹವಾ ಶುರು.. ಈಗ್ಲೇ ಏನ್ ಮಾಡ್ಬೇಕು ತಿಳ್ಕೊಳ್ಳಿ ಬೇಗ..!
190 ಟನ್ ಬೆಳ್ಳಿ ಉತ್ಪಾದನೆ
1960ರ ದಶಕದಲ್ಲಿ ಫ್ರೀಪೋರ್ಟ್-ಮ್ಯಾಕ್‌ಮೊರಾನ್ ಎಂಬ ಕಂಪನಿ ಇಲ್ಲಿ ಚಿನ್ನ ತೆಗೆಯಲು ಪರವಾನಗಿ ಪಡೆದ ನಂತರ ಈ ಗಣಿ ವಿಸ್ತರಣೆಯಾಗುತ್ತಲೇ ಇದೆ. 2023ರಲ್ಲಿ ಮಾತ್ರ ಈ ಚಿನ್ನದ ಗಣಿಯು 52.9 ಟನ್ (1.7 ಮಿಲಿಯನ್ ಔನ್ಸ್) ಚಿನ್ನ, 680,000 ಟನ್ ತಾಮ್ರ ಮತ್ತು 190 ಟನ್ ಬೆಳ್ಳಿಯನ್ನು ಉತ್ಪಾದಿಸಿದೆ.
ಇದನ್ನೂ ಓದಿ: ಭಾರತ ಅಮೆರಿಕಾ ವ್ಯಾಪಾರ ಒಪ್ಪಂದ: ಅಮೆರಿಕಾದ ಈ ಉತ್ಪನ್ನಗಳಿಗೆ ಝಿರೋ ಟ್ಯಾಕ್ಸ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

