ಎಲ್‌ಪಿಜಿ ಬಿಕ್ಕಟ್ಟು, 14.2 ಕೆಜಿ ಬದಲಾಗಿ 10 ಕೆಜಿ? ಬದಲಾಗಲಿದೆಯಾ ಸಿಲಿಂಡರ್ ತೂಕ?
ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು, ಸರ್ಕಾರವು ಗೃಹಬಳಕೆಯ 14.2 ಕೆಜಿ ಸಿಲಿಂಡರ್‌ಗಳಲ್ಲಿ 10 ಕೆಜಿ ಗ್ಯಾಸ್ ತುಂಬಿ ವಿತರಿಸುವ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ.

ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಾಸ
ಹಾರ್ಮುಜ್ ಜಲಸಂಧಿ (Strait of Hormuz) ಬಂದ್ ಆಗಿರೋದರಿಂದ ದೇಶದೊಳಗೆ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದ್ದು, ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿದೆ. ಈ ನಡುವೆ ಗೃಹಬಳಕೆಯ 14.2 ಕೆಜಿ ಸಿಲಿಂಡರ್ ನಲ್ಲಿ ಕೇವಲ 10 ಕೆಜಿ ಗ್ಯಾಸ್ ಫಿಲ್ ಮಾಡುವ ಚಿಂತನೆ ನಡೆದಿದೆ ಎಂದು ವರದಿಯಾಗಿದೆ.
ಗೃಹಬಳಕೆ ಸಿಲಿಂಡರ್ ಪೂರೈಕೆ
ಗೃಹಬಳಕೆ ಸಿಲಿಂಡರ್ ಪೂರೈಕೆಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ಆದ್ರೆ ಪೂರೈಕೆಯಲ್ಲಿನ ಸಮಸ್ಯೆ ನಿವಾರಣೆಗೆ 14.2 ಕೆಜಿ ಬದಲಾಗಿ 10 ಕೆಜಿ ಗ್ಯಾಸ್ ಭರ್ತಿ ಮಾಡಿ ಪೂರೈಸುವ ಕುರಿತು ಚರ್ಚೆಗಳು ಸರ್ಕಾರದಮಟ್ಟದಲ್ಲಿ ನಡೆಯುತ್ತಿವೆ ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ. ಈ ಮೂಲಕ ಎಲ್ಲಾ ಮನೆಗಳಿಗೂ ಸಮಯಕ್ಕೆ ಸರಿಯಾಗಿ ಎಲ್‌ಪಿಜಿ ಪೂರೈಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
10 ಕೆಜಿ ಸಿಲಿಂಡರ್ ಪೂರೈಕೆ
ಹಾರ್ಮುಜ್ ಜಲಸಂಧಿ ಮಾರ್ಗದ ಮೂಲಕ ಆಗಮಿಸುವ ಹಡುಗಗಳ ವೇಗ ಸಂಚಾರ ನಿಧಾನವಾಗುತ್ತಿರೋದರಿಂದ 10 ಕೆಜಿ ಸಿಲಿಂಡರ್ ಪೂರೈಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಬೆರಳೆಣಿಕೆಯಷ್ಟು ಹಡಗುಗಳು ಮಾತ್ರ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಬರುತ್ತಿವೆ. ಆದ್ರೆ ಈ ಪ್ರಮಾಣ ಭಾರತದಲ್ಲಿ ಒಂದು ದಿನದ ಬಳಕೆಗೆ ಮಾತ್ರ ಸೀಮಿತವಾಗಲಿದೆ.
ಪರ್ಷಿಯನ್ ಕೊಲ್ಲಿ
ಭಾರತಕ್ಕೆ ಹೋಗುವ ಹಲವಾರು ಎಲ್‌ಪಿಜಿ ಶಿಪ್‌ಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದು, ಇರಾನ್ ಅನುಮತಿಗಾಗಿ ಕಾಯುತ್ತಿವೆ. 14.2 ಕೆಜಿ ಸಿಲಿಂಡರ್ ಸಾಮಾನ್ಯವಾಗಿ ಸರಾಸರಿ ಕುಟುಂಬಕ್ಕೆ 35-40 ದಿನಗಳವರೆಗೆ ಬಾಳಿಕೆ ಬರುತ್ತದೆ. 10 ಕೆಜಿ ಸಿಲಿಂಡರ್ ವಿತರಣೆ ಮಾಡಿದ್ರೆ ಕುಟುಂಬದ ಒಂದು ತಿಂಗಳ ಬಳಕೆಗೆ ಅವಕಾಶ ಸಿಗಲಿದೆ. ಇದರಿಂದ ಎಲ್‌ಪಿಜಿ ಬಿಕ್ಕಟ್ಟು ಪರಿಹಾರವಾಗಲಿದೆ.
ಇದನ್ನೂ ಓದಿ: ಕಾಶ್ಮೀರದ ಮುಸ್ಲಿಮರಿಂದ ಯುದ್ಧ ಪೀಡಿತ ಇರಾನ್‌ಗೆ ದೇಣಿಗೆ ಸಂಗ್ರಹ, ಟೆಹ್ರಾನ್ ಭಾವುಕ
93,500 ಟನ್ ಎಲ್‌ಪಿಜಿ
ಭಾರತ ಪ್ರತಿದಿನ ಸುಮಾರು 93,500 ಟನ್ ಎಲ್‌ಪಿಜಿಯನ್ನು ಬಳಸುತ್ತಿದ್ದು, ಗೃಹ ಬಳಕೆ ಸಿಲಿಂಡರ್ ಹೆಚ್ಚಿನ ಬೇಡಿಕೆ ಹೊಂದಿದೆ. ಈಗಾಗಲೇ ಜನರು ಎಲ್‌ಪಿಜಿ ಸಿಲಿಂಡರ್ ಹಿಡಿದುಕೊಂಡು ಏಜೆನ್ಸಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ವಾಣಿಜ್ಯ ಬಳಕೆ ಸಿಲಿಂಡರ್ ಸಿಗದ ಹಿನ್ನೆಲೆ ಹೋಟೆಲ್‌ಗಳು ಸೌದೆ ಒಲೆ ಬಳಕೆಗೆ ಮುಂದಾಗಿವೆ.
ಇದನ್ನೂ ಓದಿ: ಅಸ್ಸಾಂ ಚುನಾವಣೆ: ಟಿಕೆಟ್ ನೀಡದ ಬಿಜೆಪಿಗೆ ಶಾಕ್ ಕೊಟ್ಟ ಸಚಿವೆ, ರಾತ್ರಿ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ನಂದಿತಾ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

