ತಿಂಗಳ ಸಂಬಳ ದಿನವೇ ಗುಡ್‌ನ್ಯೂಸ್; ಚಿನ್ನದ ಬೆಲೆಯಲ್ಲಿ 8,200 ರೂ.ನಷ್ಟು ಗಣನೀಯ ಇಳಿಕೆ
ಸದಾ ಏರಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇದೀಗ ಇಳಿಮುಖವಾಗಿವೆ. ಇಂದಿನ ವರದಿಯ ಪ್ರಕಾರ, 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 8,200 ರೂ. ಮತ್ತು 22 ಕ್ಯಾರಟ್ 10 ಗ್ರಾಂ ಮೇಲೆ 7,500 ರೂ. ಕುಸಿತ ಕಂಡಿದ್ದು, ಬೆಳ್ಳಿ ದರ ಸ್ಥಿರವಾಗಿದೆ.

ಚಿನ್ನ ಮತ್ತು ಬೆಳ್ಳಿ ದರ
ಸದಾ ಏರಿಕೆಯತ್ತವೇ ಮುಖ ಮಾಡಿದ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖವಾಗಿ ಜಾರುತ್ತಿವೆ. ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕುಸಿತಗೊಂಡಿದೆ. ಚಿನ್ನ ಖರೀದಿಗೆ ಏನಾದ್ರು ಪ್ಲಾನ್ ಮಾಡಿಕೊಂಡಿದ್ರೆ ಇಂದು ಜೇಬಿಗೆ ಹಗುರವಾದ ದಿನವಾಗಿದ್ದು, ಹಳದಿ ಲೋಹವನ್ನು ಮನೆಗೆ ಬರಮಾಡಿಕೊಳ್ಳಿ.
8,200 ರೂ.ಗಳಷ್ಟು ಕಡಿಮೆ
ಗೂಡ್ಸ್‌ರಿಟರ್ನ್ ವರದಿ ಪ್ರಕಾರ, ಇಂದು 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 8,200 ರೂ.ಗಳಷ್ಟು ಕಡಿಮೆಯಾಗಿದೆ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 7,500 ರೂಪಾಯಿ ಕುಸಿತವಾಗಿದೆ. ಆದ್ರೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರ ಸಮಾಧಾನಕರವಾಗಿದೆ. ಇಂದಿನ ದರಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,320 ರೂಪಾಯಿ
8 ಗ್ರಾಂ: 1,14,560 ರೂಪಾಯಿ
10 ಗ್ರಾಂ: 1,43,200 ರೂಪಾಯಿ
100 ಗ್ರಾಂ: 14,32,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 15,622 ರೂಪಾಯಿ
8 ಗ್ರಾಂ: 1,24,976 ರೂಪಾಯಿ
10 ಗ್ರಾಂ: 1,56,220 ರೂಪಾಯಿ
100 ಗ್ರಾಂ: 15,62,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರಗಳು ಈ ರೀತಿಯಾಗಿವೆ. ಮುಂಬೈ: 1,43,200 ರೂಪಾಯಿ, ಚೆನ್ನೈ: 1,45,000 ರೂಪಾಯಿ, ದೆಹಲಿ: 1,43,350 ರೂಪಾಯಿ, ಕೋಲ್ಕತ್ತಾ: 1,43,200 ರೂಪಾಯಿ, ಬೆಂಗಳೂರು: 1,43,200 ರೂಪಾಯಿ, ಹೈದರಾಬಾದ್: 1,43,200 ರೂಪಾಯಿ, ಕೇರಳ: 1,43,200 ರೂಪಾಯಿ, ಪುಣೆ: 1,43,200 ರೂಪಾಯಿ, ವಡೋದರ: 1,43,250 ರೂಪಾಯಿ
ಇದನ್ನೂ ಓದಿ: Gold demand drop india: ಕೇಂದ್ರ ಸರ್ಕಾರ ಸುಂಕ ಏರಿಕೆ ಬಳಿಕ ಚಿನ್ನಾಭರಣಗಳ ಬೇಡಿಕೆ ಶೇ.70ರಷ್ಟು ಭಾರೀ ಕುಸಿತ!
ದೇಶದಲ್ಲಿಂದು ಬೆಳ್ಳಿ ದರಗಳು ಈ ರೀತಿಯಾಗಿವೆ
ಚಿನ್ನ ದರ ಏರಿಕೆಯಾಗಿದ್ದರಿಂದ ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣವು ಹೆಚ್ಚಳಗೊಂಡಿದೆ. ದೇಶದಲ್ಲಿಂದು ಬೆಳ್ಳಿ ದರ ಸ್ಥಿರವಾಗಿದ್ದು, ಇಂದಿನ ದರ ಕೆಳಗಿನಂತಿವೆ.
10 ಗ್ರಾಂ: 2,800 ರೂಪಾಯಿ
100 ಗ್ರಾಂ: 28,000 ರೂಪಾಯಿ
1000 ಗ್ರಾಂ: 2,80,000 ರೂಪಾಯಿ
ಇದನ್ನೂ ಓದಿ: LPG: ತಿಂಗಳ ಮೊದಲ ದಿನವೇ ಬಹುದೊಡ್ಡ ಆಘಾತ; ಮತ್ತೆ ಸಿಲಿಂಡರ್ ಬೆಲೆಯಲ್ಲಿ ಭಾರೀ ಹೆಚ್ಚಳ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

