Gold Price: 10 ದಿನದಲ್ಲಿ 5ನೇ ಬಾರಿ ಇಳಿಕೆಯಾದ ಚಿನ್ನದ ಬೆಲೆ; ಇಂದು 7,000 ರೂ.ಗಿಂತ ಅಧಿಕ ಇಳಿಕೆ
Gold Silver Price: ಕಳೆದ 10 ದಿನಗಳಲ್ಲಿ 5ನೇ ಬಾರಿಗೆ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 7,000 ರೂ. ಗಿಂತ ಅಧಿಕ ಇಳಿಕೆಯಾಗಿದ್ದು, ಬೆಳ್ಳಿ ದರದಲ್ಲೂ 1 ಕೆಜಿಗೆ 1,000 ರೂ. ಕುಸಿತ ಕಂಡಿದೆ.

10 ದಿನಗಳಲ್ಲಿ 5ನೇ ಬಾರಿ
ಪ್ರತಿದಿನವೂ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆಯಾಗುತ್ತಿರುತ್ತದೆ. goodreturns ವೆಬ್‌ಸೈಟ್ ಪ್ರಕಾರ, ಕಳೆದ 10 ದಿನಗಳಲ್ಲಿ 5ನೇ ಬಾರಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. ಇಂದು ಸಹ 7,000 ರೂ.ಗೂ ಅಧಿಕ ದರ ಕಡಿಮೆಯಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ದರದಲ್ಲಿ 7 ಸಾವಿರ ರೂ.ವರೆಗೆ ಕಡಿಮೆಯಾಗಿದೆ. ಚಿನ್ನದ ಜೊತೆ ಇಂದಿನ ಬೆಳ್ಳಿ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,470 ರೂಪಾಯಿ
8 ಗ್ರಾಂ: 91,760 ರೂಪಾಯಿ
10 ಗ್ರಾಂ: 1,14,700 ರೂಪಾಯಿ
100 ಗ್ರಾಂ: 11,47,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,513 ರೂಪಾಯಿ
8 ಗ್ರಾಂ: 1,00,104 ರೂಪಾಯಿ
10 ಗ್ರಾಂ: 1,25,130 ರೂಪಾಯಿ
100 ಗ್ರಾಂ: 12,51,300 ರೂಪಾಯಿ
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,14,500 ರೂಪಾಯಿ, ಮುಂಬೈ: 1,14,700 ರೂಪಾಯಿ, ದೆಹಲಿ: 1,14,850 ರೂಪಾಯಿ, ಕೋಲ್ಕತ್ತಾ: 1,14,700 ರೂಪಾಯಿ, ಹೈದರಾಬಾದ್: 1,14,700 ರೂಪಾಯಿ, ಪುಣೆ: 1,14,700 ರೂಪಾಯಿ, ಬೆಂಗಳೂರು: 1,14,700 ರೂಪಾಯಿ
ಇದನ್ನೂ ಓದಿ: ಬೈಜು ರವೀಂದ್ರನ್‌ಗೆ 9 ಸಾವಿರ ಕೋಟಿ ದಂಡ ವಿಧಿಸಿದ ಅಮೆರಿಕ ಕೋರ್ಟ್
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿಂದು ಬೆಳ್ಳಿ ದರವೂ ಕಡಿಮೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 1,000 ರೂ.ಗಳವರೆಗೆ ಕುಸಿತವಾಗಿದೆ.
10 ಗ್ರಾಂ: 1,630 ರೂಪಾಯಿ
100 ಗ್ರಾಂ: 16,300 ರೂಪಾಯಿ
1000 ಗ್ರಾಂ: 1,63,000 ರೂಪಾಯಿ
ಇದನ್ನೂ ಓದಿ: CIBIL: ಸಿಬಿಲ್ ಸ್ಕೋರ್ 700 ಕ್ಕಿಂತ ಹೆಚ್ಚಿದ್ದರೂ ಬ್ಯಾಂಕ್‌ನಿಂದ ಸಾಲ ಸಿಗಲ್ಲ , ಯಾಕೆ ಗೊತ್ತಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

