ಕೇಂದ್ರ , ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿ ವಿಲೀನದ ಪ್ರಸ್ತಾಪಕ್ಕೆ ಮರುಜೀವ ನೀಡಿದೆ. ಸಣ್ಣ ಬ್ಯಾಂಕ್‌ಗಳ ವಿಲೀನ ಮಾಡಿ ಬೃಹತ್‌ ಬ್ಯಾಂಕ್‌ಗಳ ಸ್ಥಾಪನೆ ಮಾಡಿದಂತೆ 3 ವಿಮಾ ಕಂಪನಿಗಳ ವಿಲೀನದ ಮೂಲಕ ಮೂಲಕ ಜಾಗತಿಕ ಮಟ್ಟದಲ್ಲಿ ಬೃಹತ್‌ ಕಂಪನಿ ರಚಿಸುವ ಮತ್ತು ಅವುಗಳ ದಕ್ಷತೆ ಹೆಚ್ಚಿಸುವತ್ತ ಹೆಜ್ಜೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಹಣಕಾಸು ಇಲಾಖೆಯು, ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳನ್ನು ವಿಲೀನದ ಪ್ರಸ್ತಾಪಕ್ಕೆ ಮರುಜೀವ ನೀಡಿದೆ.

3 ವಿಮಾ ಕಂಪನಿಗಳ ವಿಲೀನ

ಸಣ್ಣ ಬ್ಯಾಂಕ್‌ಗಳ ವಿಲೀನ ಮಾಡಿ ಬೃಹತ್‌ ಬ್ಯಾಂಕ್‌ಗಳ ಸ್ಥಾಪನೆ ಮಾಡಿದಂತೆ 3 ವಿಮಾ ಕಂಪನಿಗಳ ವಿಲೀನದ ಮೂಲಕ ಮೂಲಕ ಜಾಗತಿಕ ಮಟ್ಟದಲ್ಲಿ ಬೃಹತ್‌ ಕಂಪನಿ ರಚಿಸುವ ಮತ್ತು ಅವುಗಳ ದಕ್ಷತೆ ಹೆಚ್ಚಿಸುವತ್ತ ಹೆಜ್ಜೆ ಇಟ್ಟಿದೆ.

ಅರುಣ್‌ ಜೇಟ್ಲಿ ಪ್ರಸ್ತಾಪ ಮಾಡಿದ್ದರು.

2018-19ರಲ್ಲಿ ಆಗ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, ಸರ್ಕಾರಿ ಸ್ವಾಮ್ಯದ ಓರಿಯೆಂಟಲ್‌ ಇನ್ಶೂರೆನ್ಸ್‌, ನ್ಯಾಷನಲ್‌ ಇನ್ಶೂರೆನ್ಸ್‌, ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ವಿಲೀನದ ಪ್ರಸ್ತಾಪ ಮಾಡಿದ್ದರು. ಆದರೆ ನಂತರದ 2 ವಿತ್ತೀಯ ವರ್ಷದಲ್ಲಿ ಈ ಮೂರು ಕಂಪನಿಗಳು 17,450 ಕೋಟಿ ರು. ನಷ್ಟಕ್ಕೆ ಸಿಲುಕಿತ್ತು. ಆ ಬಳಿಕ 2020ರಲ್ಲಿ ಸರ್ಕಾರ ನಿರ್ಧಾರ ಕೈಬಿಟ್ಟಿತ್ತು. ಆದರೆ ಇದೀಗ ಈ ಕಂಪನಿಗಳು ಲಾಭದ ಹಳಿಗೆ ಮರಳಿರುವುದರಿಂದ ಕೇಂದ್ರ ಅವುಗಳ ದಕ್ಷತೆಯನ್ನು ಸುಧಾರಿಸುವುದಕ್ಕೆ ವಿಲೀನಕ್ಕೆ ಮುಂದಾಗಿದೆ. ಇದರ ಜತೆಗೆ ಕೇಂದ್ರ ಸರ್ಕಾರ ಡಿ.1ರಿಂದ ಆರಂಭವಾಗುವ ಚಳಿಗಾಲ ಅಧಿವೇಶನದಲ್ಲಿ ವಿಮಾ ಕಂಪನಿಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ.74ರಿಂದ ಶೇ.100ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.