ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ
ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಈ ದಾಖಲೆಯ ಏರಿಕೆಯು ಮಧ್ಯಮ ವರ್ಗದವರಿಗೆ ಆಭರಣ ಖರೀದಿಯನ್ನು ಕಷ್ಟಕರವಾಗಿಸಿದ್ದು, ಹೂಡಿಕೆದಾರರು ಇದನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿದ್ದಾರೆ.

ಚಿನ್ನ ಮತ್ತು ಬೆಳ್ಳಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು, ಅನಿಶ್ಚಿತ ಜಾಗತಿಕ ಪರಿಸ್ಥಿತಿ, ರೂಪಾಯಿ ಮೌಲ್ಯ ಮತ್ತು ಸರ್ಕಾರದ ತೆರಿಗೆ ನೀತಿಗಳು ಚಿನ್ನ ಮತ್ತು ಬೆಳ್ಳಿ ದರದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂದು ಚಿನ್ನ ಮತ್ತು ಬೆಳ್ಳಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದ್ದು, ಮಧ್ಯಮವರ್ಗದರಿಗೆ ಹಳದಿ ಲೋಹ ಗಗಗನ ಕುಸುಮವಾಗಿದೆ.
ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ
ಕಳೆದ ಕೆಲವು ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆಯಾಗಿದ್ದು, ಗೃಹಿಣಿಯರು ಮತ್ತು ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ. ಚಿನ್ನದಂತೆಯೇ ಬೆಳ್ಳಿಯ ಬೆಲೆಯೂ ಇಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,400 ರೂಪಾಯಿ
8 ಗ್ರಾಂ: 99,200 ರೂಪಾಯಿ
10 ಗ್ರಾಂ: 1,24,000 ರೂಪಾಯಿ
100 ಗ್ರಾಂ: 12,40,000 ರೂಪಾಯಿ
ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 13,528 ರೂಪಾಯಿ
8 ಗ್ರಾಂ: 1,08,224 ರೂಪಾಯಿ
10 ಗ್ರಾಂ: 1,35,280 ರೂಪಾಯಿ
100 ಗ್ರಾಂ: 13,52,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಗಳು ದೇಶದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ. ಚೆನ್ನೈ: 1,24,800 ರೂಪಾಯಿ, ಮುಂಬೈ: 1,24,000 ರೂಪಾಯಿ, ದೆಹಲಿ: 1,24,050 ರೂಪಾಯಿ, ಕೋಲ್ಕತ್ತಾ: 1,24,000 ರೂಪಾಯಿ, ಬೆಂಗಳೂರು: 1,24,000 ರೂಪಾಯಿ, ಹೈದರಾಬಾದ್: 1,24,000 ರೂಪಾಯಿ, ಪುಣೆ: 1,24,000 ರೂಪಾಯಿ
ದೇಶದಲ್ಲಿ ಬೆಳ್ಳಿ ಬೆಲೆ
ಕೈಗಾರಿಕಾ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಬದಲಾವಣೆಗಳಿಂದಾಗಿ ಬೆಳ್ಳಿ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಭಾರತದಲ್ಲಿಂದು ಸಹ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
10 ಗ್ರಾಂ: 2,190 ರೂಪಾಯಿ
100 ಗ್ರಾಂ: 21,900 ರೂಪಾಯಿ
1000 ಗ್ರಾಂ: 2,19,000 ರೂಪಾಯಿ
ಇದನ್ನೂ ಓದಿ: 1,2,5 ರೂ. ನಾಣ್ಯ ಇವೆಯಾ? ಹಾಗಿದ್ರೆ ರಿಸರ್ವ್ ಬ್ಯಾಂಕ್ ಕೊಟ್ಟಿರೋ ಬಿಗ್ ಅಪ್ಡೇಟ್ ಒಮ್ಮೆ ನೋಡಿ
ದಾಖಲೆ ಬರೆಯುತ್ತಿರುವ ಚಿನ್ನ ಮತ್ತು ಬೆಳ್ಳಿ
ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರವಾಗಿ ಏರುತ್ತಿರುವುದರಿಂದ, ಮಧ್ಯಮ ವರ್ಗದವರು ಆಭರಣಗಳನ್ನು ಖರೀದಿಸುವುದನ್ನು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿರುವುದರಿಂದ ಅದರ ಮೇಲೆ ಆಸಕ್ತಿ ತೋರಿಸುತ್ತಲೇ ಇದ್ದಾರೆ. ಆದ್ದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗುತ್ತಾ ದಾಖಲೆಯನ್ನು ಬರೆಯುತ್ತಿದೆ.
ಇದನ್ನೂ ಓದಿ: ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

