ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಶೇ.366ರಷ್ಟು ರಿಟರ್ನ್ಸ್, 2 ಲಕ್ಷ ರೂ.ಗೆ 9.32 ಲಕ್ಷ ರೂ ಬಂಪರ್, ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್‌ ಅಂತಿಮ ಮರುಪಾವತಿ ಬೆಲೆ ಘೋಷಿಸಿದೆ. ಹೂಡಿಕೆದಾರರು ಸಂಭ್ರಮ ಡಬಲ್ ಆಗಿದೆ.

ನವದೆಹಲಿ (ಡಿ.12) ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾವರಿನ್ ಗೋಲ್ಡ್ ಬಾಂಡ್ (SGBs) ಅಂತಿಮ ಮರುಪಾವತಿ ಬೆಲೆ ಘೋಷಿಸಿದೆ. 2017-18ರ XII ಸರಣಿಯ ಸಾವರಿನ್ ಗೋಲ್ಡ್ ಬಾಂಡ್‌ಗೆ ಆರ್‌ಬಿಐ ಬರೋಬ್ಬರಿ ಶೇಕಡಾ 366ರಷ್ಟು ರಿಟರ್ನ್ಸ ಘೋಷಿಸಿದೆ. ಇದರಿಂದ ಹೂಡಿಕೆದಾರರಿಗೆ ಭರ್ಜರಿ ರಿಟರ್ನ್ಸ್ ಬರಲಿದೆ. ಮರುಪಾವತಿಗೆ ಇಂದು ( ಡಿಸೆಂಬರ್ 18, 2025) ಆರ್‌ಬಿಐ ಅನುಮತಿ ನೀಡಿದೆ. ಪ್ರತಿ ಯುನಿಟ್‌ಗೆ 13,245 ರೂಪಾಯಿ ಎಂದು ಬೆಲೆ ನಿಗದಿಪಡಿಸಲಾಗಿದೆ. ಆರ್‌ಬಿಐ ಮರುಪಾವತಿ ಬೆಲೆ ಘೋಷಣೆಯಿಂದ ಹೂಡಿಕೆದಾರರಿಗೆ ದುಪ್ಪಟ್ಟು ಹಣ ಮರುಪಾವತಿಯಾಗಲಿದೆ.

ಚಿನ್ನದ ಏರಿಕೆ ಜೊತೆ ಬಡ್ಡಿಯ ಲಾಭ

2017-18ರಲ್ಲಿ ಸೀರಿಸ್ 12ರ ಅಡಿಯಲ್ಲಿ ಸರ್ಕಾರಿ ಗೋಲ್ಡ್ ಬಾಂಡ್ ಖರೀದಿಸಿದವರಿಗೆ ಹೂಡಿಕೆ ಹಿಂಪಡೆಯಲು ಆರ್‌ಬಿಐ ಬೆಲೆ ನಿಗದಿಪಡಿಸಿ ಘೋಷಿಸಿದೆ. ಮರುಪಾವತಿಗೆ ಇಂದು ಆರ್‌ಬಿಐ ಅನುಮತಿ ನೀಡಿದೆ. 2017-18ರಲ್ಲಿ ಪ್ರತಿ ಯೂನಿಟ್ ಬೆಲೆ 2,890 ರೂಪಾಯಿ ಇತ್ತು. ಹಲವರು ಪ್ರತಿ ಯೂನಿಟ್‌ಗೆ ಈ ಬೆಲೆಯಲ್ಲಿ ಹೂಡಿಕೆ ಮಾಡಿದ್ದರು. ಇದೀಗ 8 ವರ್ಷಗಳ ಪೂರ್ಣಗೊಳ್ಳುತ್ತಿದ್ದಂತೆ ಆರ್‌ಬಿಐ ಶೇಕಡಾ 366ರಷ್ಟು ರಿಟರ್ನ್ ಅಂದರೆ ಪ್ರತಿ ಯೂನಿಟ್‌ಗೆ 13,245 ರೂಪಾಯಿ ಎಂದು ಘೋಷಿಸಿದೆ. ವಿಶೇಷ ಅಂದರೆ ಗ್ರಾಹಕರು ಶೇಕಡಾ 366ರಷ್ಟು ಚಿನ್ನದ ಮೇಲಿನ ರಿಟರ್ನ್ಸ್ ಅಂದರೆ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆಯ ಲಾಭ ಪಡೆಯಲಿದ್ದಾರೆ. ಗ್ರಾಹಕರ ಲಾಭ ಇಷ್ಟಕ್ಕೆ ಮುಗಿದಿಲ್ಲ, ಕಾರಣ ಪ್ರತಿ ವರ್ಷ ಶೇಕಡಾ 2.5ರಷ್ಟು 8 ವರ್ಷದ ಬಡ್ಡಿ ಪಡೆಯಲಿದ್ದಾರೆ. ಅಂದರೆ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಈಗ 9.32 ಲಕ್ಷ ರೂಪಾಯಿ ಆಗಲಿದೆ.

2017-18ರ ಸಾಲಿನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ವೇಳೆ ಆನ್‌ಲೈನ್ ಮೂಕ ಹಣ ಪಾವತಿ ಮಾಡಿದವರಿಗೆ ಪ್ರತಿ ಗಾಂ ಚಿನ್ನದ ಮೇಲೆ 50 ರೂಪಾಯಿ ಡಿಸ್ಕೌಂಟ್ ನೀಡಲಾಗಿತ್ತು. ಪ್ರತಿ ಯೂನಿಟ್ 2,890 ರೂಪಾಯಿ ಬೆಲೆ ರಿಯಾಯಿತಿಯಿಂದ 2,840 ರೂಪಾಯಿ ಆಗಿತ್ತು. ಇದರ ಆಧಾರದಲ್ಲಿ ಗ್ರಾಹಕರಿಗೆ ಒಟ್ಟು ಶೇಕಡಾ 366ರಷ್ಟು ಆದಾಯ ಸಿಗಲಿದೆ. ಇನ್ನು ರಿಯಾಯಿತಿ ಇಲ್ಲದೆ ಖರೀದಿಸಿದವರಿಗೆ 358.30% ಲಾಭ ಪಡೆಯಲಿದ್ದಾರೆ.

ನಿಯಮದಂತೆ ಸಾವರಿನ್ ಗೋಲ್ಡ್ ಬಾಂಡ್ 8 ವರ್ಷಗಳ ಯೋಜನೆಯಾಗಿದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಿಸಿದ ದಿನಾಂಕದಿಂದ 8 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಮರುಪಾವತಿ ಮಾಡಬೇಕು. ಈ ಕಂತಿನ ಅಂತಿಮ ಮರುಪಾವತಿ ದಿನಾಂಕ ಇಂದು (ಡಿ.18) ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಟ್ಯಾಕ್ಸ್ ಅನ್ವಯ

ಸಾವರಿನ್ ಗೋಲ್ಡ್ ಬಾಂಡ್ ತೆರಿಗೆ ನೀತಿಗೆ ಒಳಪಡುತ್ತದೆ. ಅಂದರೆ ಸಾವರಿನ್ ಗೋಲ್ಡ್ ಬಾಂಡ್ ಮೇಲೆ ನೀಡುವ ವಾರ್ಷಿಕ ಬಡ್ಡಿ ನಿಮ್ಮ ಆದಾಯಕ್ಕೆ ಸೇರಲಿದೆ. ಹೀಗಾಗಿ 1961ರ ತೆರಿಗೆ ಕಾಯ್ದೆಗೆ ಒಳಪಡಲಿದೆ. ಹೀಗಾಗಿ ಬಡ್ಡಿಯಿಂದ ಬರುವ ಆದಾಯ ನಿಮ್ಮ ಆದಾಯಕ್ಕೆ ಸೇರಿಕೊಳ್ಳವ ಕಾರಣ ನಿಮ್ಮ ಸ್ಲ್ಯಾಬ್ ಪ್ರಕಾರ ಆದಾಯ ತೆರಿಗೆ ಪಾವತಿಸಬೇಕು. ಆದರೆ ಇದರಲ್ಲಿ ಆರ್‌ಬಿಐ ಮತ್ತೊಂದು ಅನುಕೂಲ ಮಾಡಲಾಗಿದೆ. ಸಾವರಿನ್ ಬಾಂಡ್‌ನ್ನು 8 ವರ್ಷ ಅವಧಿಗೆ ಇಟ್ಟುಕೊಂಡಿದ್ದರೆ, ಜೊತೆಗೆ ನಿಗದಿತ ದಿನಾಂಕದಂದು ಮರುಪಾವತಿ ಮಾಡಿದರೆ ಲಾಭಾಂಶ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ.