ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ; ಖರೀದಿಗೆ ಇದು ಸುವರ್ಣವಕಾಶ
Gold And Silver Price Today: ಇಂದು ಚಿನ್ನ ಮತ್ತು ಬೆಳ್ಳಿ ದರ ಗಣನೀಯವಾಗಿ ಕುಸಿತ ಕಂಡಿದೆ. 24, 22 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಖರೀದಿಗೆ ಉತ್ತಮ ಸಮಯವಾಗಿದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ.

ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಬೆಲೆ ಕಡಿಮೆಯಾಗುತ್ತಿರೋದನ್ನೇ ಕಾಯುತ್ತಿರುತ್ತಾರೆ. ನೀವು ಸಹ ಬೆಲೆ ಇಳಿಕೆಗೆ ಕಾಯುತ್ತಿದ್ರೆ ಈ ದಿನ ಮಿಸ್ ಮಾಡಿಕೊಳ್ಳಬೇಡಿ. ಇಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಗಣನೀಯವಾಗಿ ಕುಸಿದಿದೆ.
ಬೆಲೆ ಕಡಿಮೆಯಾಗಿರುವ ಸಂದರ್ಭದಲ್ಲಿಯೇ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡೋದು ಬುದ್ಧಿವಂತರ ಲಕ್ಷಣವಾಗಿದೆ. ಇಂದು 24, 22 ಮತ್ತು 18 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
- 1 ಗ್ರಾಂ: 9,726 ರೂಪಾಯಿ
- 8 ಗ್ರಾಂ: 77,808 ರೂಪಾಯಿ
- 10 ಗ್ರಾಂ: 97,260 ರೂಪಾಯಿ
- 100 ಗ್ರಾಂ: 9,72,600 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
- 1 ಗ್ರಾಂ: 8,915 ರೂಪಾಯಿ
- 8 ಗ್ರಾಂ: 71,320 ರೂಪಾಯಿ
- 10 ಗ್ರಾಂ: 89,150 ರೂಪಾಯಿ
- 100 ಗ್ರಾಂ: 8,91,500 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
- 1 ಗ್ರಾಂ: 7,294 ರೂಪಾಯಿ
- 8 ಗ್ರಾಂ: 58,352 ರೂಪಾಯಿ
- 10 ಗ್ರಾಂ: 72,940 ರೂಪಾಯಿ
- 100 ಗ್ರಾಂ: 7,29,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 89,150 ರೂಪಾಯಿ, ಮುಂಬೈ: 89,150 ರೂಪಾಯಿ, ದೆಹಲಿ: 89,300 ರೂಪಾಯಿ, ಬೆಂಗಳೂರು: 89,150 ರೂಪಾಯಿ, ಕೋಲ್ಕತ್ತಾ: 89,150 ರೂಪಾಯಿ, ಹೈದರಾಬಾದ್: 89,150 ರೂಪಾಯಿ, ವಡೋದರಾ: 89,200 ರೂಪಾಯಿ, ಅಹಮದಾಬಾದ್: 89,200 ರೂಪಾಯಿ
ಎಷ್ಟು ಇಳಿಕೆ?
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,500 ರೂ. ಇಳಿಕೆ ಕಂಡು ಬಂದಿದೆ.
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 100 ರೂ.ಗಳಷ್ಟು ಕುಸಿತ ಕಂಡು ಬಂದಿದೆ.
- 10 ಗ್ರಾಂ: 1,077 ರೂಪಾಯಿ
- 100 ಗ್ರಾಂ: 10,770 ರೂಪಾಯಿ
- 1000 ಗ್ರಾಂ: 1,07,700 ರೂಪಾಯಿ