- Home
- Business
- Today's Gold & Silver Price: ಬಂಗಾರ ಖರೀದಿಸುವ ಸುದಿನ ಬಂದೇ ಬಿಡ್ತು; ಕೊನೆಗೂ ಇಳಿಕೆಯಾದ ಚಿನ್ನದ ಬೆಲೆ
Today's Gold & Silver Price: ಬಂಗಾರ ಖರೀದಿಸುವ ಸುದಿನ ಬಂದೇ ಬಿಡ್ತು; ಕೊನೆಗೂ ಇಳಿಕೆಯಾದ ಚಿನ್ನದ ಬೆಲೆ
Gold and Silver Price Today: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 22, 24 ಮತ್ತು 18 ಕ್ಯಾರಟ್ ಚಿನ್ನದ ಇಂದಿನ ದರಗಳನ್ನು ತಿಳಿದುಕೊಳ್ಳಿ.

ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಜಾಗತೀಕ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಆದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ.
ಬೆಲೆ ಏರಿಕೆಯಾಗುತ್ತಿರೋದರಿಂದ ಚಿನ್ನದ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದರು. ಇಂದು ಚಿನ್ನದ ಬೆಲೆ ಕಡಿಮೆಯಾಗಿರೋದರಿಂದ ಅಂಗಡಿಗೆ ತೆರಳಿ ಬಂಗಾರ ನಿಮ್ಮದಾಗಿಸಿಕೊಳ್ಳಬಹುದು. ಅಂಗಡಿಗೆ ತೆರಳುವ ಮುನ್ನ ಇಂದಿನ 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,151 ರೂಪಾಯಿ
8 ಗ್ರಾಂ: 81,208 ರೂಪಾಯಿ
10 ಗ್ರಾಂ: 1,01,510 ರೂಪಾಯಿ
100 ಗ್ರಾಂ: 10,15,100 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,305 ರೂಪಾಯಿ
8 ಗ್ರಾಂ: 74,440 ರೂಪಾಯಿ
10 ಗ್ರಾಂ: 93,500 ರೂಪಾಯಿ
100 ಗ್ರಾಂ: 9,30,500 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,614 ರೂಪಾಯಿ
8 ಗ್ರಾಂ: 60,912 ರೂಪಾಯಿ
10 ಗ್ರಾಂ: 76,140 ರೂಪಾಯಿ
100 ಗ್ರಾಂ: 7,61,400 ರೂಪಾಯಿ
ಎಷ್ಟು ಇಳಿಕೆ?
ದೇಶದಲ್ಲಿಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಮೇಲೆ 150 ರೂಪಾಯಿ ಇಳಿಕೆಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 170 ರೂ.ಗಳಷ್ಟು ಇಳಿಕೆ ಕಂಡುಬಂದಿದೆ. ಚಿನ್ನದ ಜೊತೆ ಬೆಳ್ಳಿ ದರ ಸಹ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 100 ರೂ.ಗಳಷ್ಟು ಕಡಿಮೆಯಾಗಿದೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,01,510 ರೂಪಾಯಿ, ಮುಂಬೈ: 1,01,510 ರೂಪಾಯಿ, ದೆಹಲಿ: 1,01,660 ರೂಪಾಯಿ, ಕೋಲ್ಕತ್ತಾ: 1,01,510 ರೂಪಾಯಿ, ವಡೋದರಾ: 1,01,560 ರೂಪಾಯಿ, ಬೆಂಗಳೂರು: 1,01,510 ರೂಪಾಯಿ, ಅಹಮದಾಬಾದ್: 1,01,560 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,099 ರೂಪಾಯಿ
100 ಗ್ರಾಂ: 10,990 ರೂಪಾಯಿ
1000 ಗ್ರಾಂ: 1,09,900 ರೂಪಾಯಿ