ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?
ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್
ಒಂದು ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಾ ಸಾಗಿತ್ತು. ಇನ್ನೊಂದೆಡೆ ಅಕ್ಷಯ ತೃತೀಯ ಸಮೀಪಿಸುತ್ತಿತ್ತು. ಹೀಗಿರುವಾಗಲೇ ಚಿನ್ನ ಖರೀದಿಸುವವರ ಪಾಲಿಗೆ ಇದೀಗ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1370 ರುಪಾಯಿ ಕುಸಿತ
ಹೌದು, 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಮೇಲೆ ಶುಕ್ರವಾರವಾದ ಇಂದು ಬರೋಬ್ಬರಿ 1370 ರುಪಾಯಿ ಇಳಿಯಾಗಿದೆ. ನಿನ್ನೆ 24 ಕ್ಯಾರಟ್ ಒಂದು ಗ್ರಾಮ್‌ಗೆ 15,557 ಇದ್ದ ರೇಟ್ ಇಂದು 15,420 ರುಪಾಯಿಗೆ ಇಳಿಕೆಯಾಗಿದೆ.
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1250 ರುಪಾಯಿ ಕುಸಿತ
ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಗೋಲ್ಡ್ ರೇಟ್‌ನಲ್ಲೂ ಇಂದು ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 1250 ರುಪಾಯಿ ಇಳಿಕೆಯಾಗಿದೆ.
22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕುಸಿತ
ನಿನ್ನೆ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,260 ರುಪಾಯಿ ಆಗಿತ್ತು. ಈ ಮೂಲಕ ಮೇ ತಿಂಗಳ ಗರಿಷ್ಠ ಮೊತ್ತ ತಲುಪಿತ್ತು. ಆದರೆ ಇದೀಗ ಪ್ರತಿ ಗ್ರಾಮ್ ಮೇಲೆ 125 ರುಪಾಯಿ ಕುಸಿತವಾಗಿದ್ದು, ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,135 ರುಪಾಯಿಗಳಾಗಿದೆ.
ಚಿನ್ನ ಖರೀದಿಸುವವರ ಮುಖದಲ್ಲಿ ಮಂದಹಾಸ
ಒಟ್ಟಿನಲ್ಲಿ ಅಕ್ಷಯ ತೃತೀಯ ಸಮೀಪಿಸುತ್ತಿರುವಾಗಲೇ ಚಿನ್ನದ ಬೆಲೆಯಲ್ಲಿ ಇಳಿಮುಖ ಕಾಣುತ್ತಿರುವುದು ಬಂಗಾರ ಖರೀದಿಸುವವರ ಮುಖದಲ್ಲಿ ಕೊಂಚ ಸಮಾಧಾನ ಮೂಡುವಂತೆ ಮಾಡಿರುವಂತೆ ಮಾಡಿರುವುದಂತೂ ಸುಳ್ಳಲ್ಲ.
ಒಂದು ಕೆಜಿ ಬೆಳ್ಳಿ ಮೇಲೆ 5000 ರುಪಾಯಿ ಇಳಿಕೆ
ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಇಳಿಕೆಯಾಗಿದೆ. ನಿನ್ನೆಯ ದಿನಕ್ಕೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5000 ರುಪಾಯಿ ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2,65,000 ರುಪಾಯಿಗಳಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

