ಮೂರನೇ ದಿನವೂ ಭಾರೀ ಇಳಿಕೆಯಾದ ಚಿನ್ನದ ಬೆಲೆ; ಬಂಗಾರದಂಗಡಿಗೆ ಚಿನ್ನಾಭರಣಪ್ರಿಯರ ದಾಂಗುಡಿ
ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರಗಳು ಗಣನೀಯವಾಗಿ ಕುಸಿದಿದ್ದು, ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಈ ದರ ಕುಸಿತವು ಬಂಗಾರ ಪ್ರಿಯರನ್ನು ಆಭರಣ ಮಳಿಗೆಗಳತ್ತ ಆಕರ್ಷಿಸುತ್ತಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆ
ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಎರಡು ದಿನ ಭಾರೀ ಪ್ರಮಾಣದಲ್ಲಿ ದರ ಕುಸಿತವಾಗಿತ್ತು. ಬೆಲೆ ಕಡಿಮೆಯಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಬಂಗಾರಪ್ರಿಯರು ಚಿನ್ನದ ಮಳಿಗೆಯತ್ತ ಮುಖ ಮಾಡುತ್ತಿದ್ದಾರೆ.
22 ಕ್ಯಾರಟ್ 10 ಗ್ರಾಂ ಚಿನ್ನ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 790 ರೂಪಾಯಿ ಮತ್ತು 24 ಕ್ಯಾರಟ್ 10 ಗ್ರಾಂ ಬೆಲೆಯಲ್ಲಿ 862 ರೂ.ಗಳಷ್ಟು ಕಡಿಮೆಯಾಗಿದೆ. ಜನವರಿ 31, ಜನವರಿ 30ರಂದು ಸಹ ದರ ಇಳಿಕೆಯಾಗಿತ್ತು. ಅದೇ ರೀತಿ ಇಂದು ಬೆಳ್ಳಿ ಬೆಲೆಯಲ್ಲಿಯೂ 45 ಸಾವಿರ ರೂ.ಗಳಷ್ಟು ಕುಸಿತವಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,720 ರೂಪಾಯಿ
8 ಗ್ರಾಂ: 1,17,760 ರೂಪಾಯಿ
1 ಗ್ರಾಂ: 1,47,200 ರೂಪಾಯಿ
100 ಗ್ರಾಂ: 14,72,000 ರೂಪಾಯಿ
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 16,058 ರೂಪಾಯಿ
8 ಗ್ರಾಂ: 1,28,464 ರೂಪಾಯಿ
10 ಗ್ರಾಂ: 1,60,580 ರೂಪಾಯಿ
100 ಗ್ರಾಂ: 16,05,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ.
ಚೆನ್ನೈ: 1,49,000 ರೂಪಾಯಿ, ದೆಹಲಿ: 1,47,350 ರೂಪಾಯಿ, ಇಂದೋರ್:1,47,350 ರೂಪಾಯಿ, ಕೋಲ್ಕತ್ತಾ: 1,47,200 ರೂಪಾಯಿ, ಮುಂಬೈ: 1,47,200 ರೂಪಾಯಿ, ಹೈದರಾಬಾದ್: 1,47,200 ರೂಪಾಯಿ
ಇದನ್ನೂ ಓದಿ: ಇತಿಹಾಸದಲ್ಲಿ ಎರಡನೇ ಸಲ ಇಂದು ಕೇಂದ್ರ ಸಂಡೇ ಬಜೆಟ್! ಸಾಮಾನ್ಯ ವರ್ಗಕ್ಕೆ ಸಿಗುತ್ತಾ ಸಿಹಿ ಸುದ್ದಿ?
ಇಂದಿನ ಬೆಳ್ಳಿ ಬೆಲೆ
ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಹಾಗೆಯೇ ಬೆಳ್ಳಿ ದರದಲ್ಲಿಯೂ ಕುಸಿತ ಕಂಡು ಬರುತ್ತಿದೆ. ಇಂದು 1 ಕೆಜಿ ಬೆಳ್ಳಿ ಬೆಲೆಯಲ್ಲಿ 45,000 ರೂ.ಗಳಷ್ಟು ಕುಸಿತವಾಗಿದೆ.
10 ಗ್ರಾಂ: 3,500 ರೂಪಾಯಿ
100 ಗ್ರಾಂ: 35,000 ರೂಪಾಯಿ
1 ಕೆಜಿ: 3,50,000 ರೂಪಾಯಿ
ಇದನ್ನೂ ಓದಿ: Union Budget 2026: ಬಜೆಟ್ ಅರ್ಥ ಆಗ್ಬೇಕಾ? ಮೊದಲು ಇದನ್ನು ಓದಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

