Gold Price: ಬಂಗಾರದ ಓಟಕ್ಕೆ ಬ್ರೇಕ್: ದಿಢೀರ್ ಕುಸಿದ ಚಿನ್ನದ ಬೆಲೆ, ಹೂಡಿಕೆದಾರರಲ್ಲಿ ಸಂಚಲನ
ಹತ್ತು ದಿನಗಳ ನಿರಂತರ ಏರಿಕೆಯ ನಂತರ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಚಿನ್ನದ ಜೊತೆಗೆ, ಆರು ದಿನಗಳಿಂದ ಏರುತ್ತಿದ್ದ ಬೆಳ್ಳಿ ಬೆಲೆಯಲ್ಲೂ ಕುಸಿತವಾಗಿದ್ದು, ಹೂಡಿಕೆದಾರರಲ್ಲಿ ಹೊಸ ಸಂಚಲನ ಮೂಡಿಸಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿಯ ನಿಖರ ದರಗಳನ್ನು ವಿವರಿಸುತ್ತದೆ.

ದಿಢೀರ್ ಇಳಿಕೆಯಾದ ಚಿನ್ನದ ಬೆಲೆ
ಜಾಗತಿಕವಾಗಿ ಕೈಗಾರಿಕಾ ವಲಯದಿಂದ ಭಾರೀ ಬೇಡಿಕೆ, ಅದಿರಿನಲ್ಲಿ ನಿಕ್ಷೇಪದ ಕೊರತೆ, ಹೂಡಿಕೆದಾರರಿಂದ ಹೆಚ್ಚಿನ ಸಂಗ್ರಹಣೆಯು ಬೆಳ್ಳಿ ಬೆಲೆ ಏರಿಕೆಗೆ ಕಾರಣಗಳಾಗಿವೆ. ಕಳೆದ 6 ದಿನಗಳ ಅವಧಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 35900 ರು. ಏರಿಕೆ ದಾಖಲಾಗಿದೆ. ಆದ್ರೆ ಇಂದು ಚಿನ್ನದ ಬೆಲೆಯಲ್ಲಿ ದಿಢೀರ ಇಳಿಕೆಯಾಗಿದೆ.
ಚಿನ್ನದ ದರ ಕುಸಿತ
ಇಂದು ದೇಶದಲ್ಲಿ ಬರೋಬ್ಬರಿ 10 ದಿನಗಳ ಬಳಿಕ ಚಿನ್ನದ ದರ ಕುಸಿತವಾಗಿದೆ. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 7,100 ರೂ.ವರೆಗೆ ಕಡಿಮೆಯಾಗಿದೆ. ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ 4 ಸಾವಿರ ರೂ.ಗಳಷ್ಟು ಇಳಿಕೆಯಾಗಿದೆ. ಭಾರತದಲ್ಲಿಂದು 1 ಗ್ರಾಂ ಬೆಳ್ಳಿ ಬೆಲೆ 258 ರೂಪಾಯಿ ಆಗಿದೆ.
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 14,171 ರೂಪಾಯಿ
8 ಗ್ರಾಂ: 1,13,368 ರೂಪಾಯಿ
10 ಗ್ರಾಂ: 1,41,710 ರೂಪಾಯಿ
100 ಗ್ರಾಂ: 14,17,100 ರೂಪಾಯಿ
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,990 ರೂಪಾಯಿ
8 ಗ್ರಾಂ: 1,03,920 ರೂಪಾಯಿ
10 ಗ್ರಾಂ: 1,29,900 ರೂಪಾಯಿ
100 ಗ್ರಾಂ: 12,99,000 ರೂಪಾಯಿ
ಎಷ್ಟು ಇಳಿಕೆ?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 650 ರೂಪಾಯಿ ಕುಸಿತವಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 710 ರೂಪಾಯಿ ಕಡಿಮೆಯಾಗಿದೆ. ಕಳೆದ ಆರು ದಿನಗಳಿಂದ ಏರಿಕೆಯಾಗುತ್ತಿದ್ದ ಬೆಳ್ಳಿ ಓಟಕ್ಕೂ ಬ್ರೇಕ್ ಬಿದ್ದಿದೆ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 1,29,900 ರೂಪಾಯಿ ಆಗಿದೆ.
ಇದನ್ನೂ ಓದಿ: ಧಮ್ ಎಳೆಯೋ ಮಂದಿಗೆ ಗುಡ್‌ನ್ಯೂಸ್, ಸಿಗರೇಟ್ ರೇಟ್ 72 ರೂಪಾಯಿಗೆ ಏರಿಕೆ ಆಗಲ್ಲ!
ಬೆಳ್ಳಿ ದರ
1 ಗ್ರಾಂ: 258 ರೂಪಾಯಿ
10 ಗ್ರಾಂ: 2,580 ರೂಪಾಯಿ
100 ಗ್ರಾಂ: 25,800 ರೂಪಾಯಿ
1000 ಗ್ರಾಂ: 2,58,000 ರೂಪಾಯಿ
ಇದನ್ನೂ ಓದಿ: Bengaluru: ಉದ್ಯಮಕ್ಕೆಂದು ಜಾಗ ಪಡೆದು 250 ಕೋಟಿಗೆ ರಿಯಲ್ ಎಸ್ಟೇಟ್ ಕಂಪನಿಗೆ ಮಾರಿದ ಇನ್ಫೋಸಿಸ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

