MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಒಂದೇ ಆರ್ಡರ್‌ನಿಂದ ಗಗನಕ್ಕೇರಿದ ಷೇರು ಬೆಲೆ; ಹೂಡಿಕೆದಾರರಿಗೆ ಶೇ.7950 ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್

ಒಂದೇ ಆರ್ಡರ್‌ನಿಂದ ಗಗನಕ್ಕೇರಿದ ಷೇರು ಬೆಲೆ; ಹೂಡಿಕೆದಾರರಿಗೆ ಶೇ.7950 ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್

ಕಂಪನಿಯು 135 ಕೋಟಿ ರೂಪಾಯಿ ಮೌಲ್ಯದ ಹೊಸ ಆರ್ಡರ್ ಪಡೆದ ನಂತರ ಅದರ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭ ನೀಡಿರುವ ಈ ಮಲ್ಟಿಬ್ಯಾಗರ್ ಷೇರು, ಫೆಬ್ರವರಿ 11 ರಂದು 5% ಅಪ್ಪರ್ ಸರ್ಕ್ಯೂಟ್ ತಲುಪಿದೆ.

2 Min read
Author : Mahmad Rafik
Published : Feb 12 2026, 08:59 AM IST
Share this Photo Gallery
  • FB
  • TW
  • Linkdin
  • Whatsapp
16
ಹೂಡಿಕೆದಾರರಿಗೆ ಶೇ.7950 ಲಾಭ
Image Credit : Gemini

ಹೂಡಿಕೆದಾರರಿಗೆ ಶೇ.7950 ಲಾಭ

ಫೆಬ್ರವರಿ 11ರಂದು ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿತ್ತು. ಒಂದೇ ಒಂದು ಆರ್ಡರ್ ಪಡೆದುಕೊಂಡ ಪರಿಣಾಮ ಮಲ್ಟಿಬ್ಯಾಗರ್ ಷೇರು ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಹೂಡಿಕೆದಾರರಿಗೆ ಶೇ.7950 ಲಾಭವನ್ನು ನೀಡಿದೆ. ಕಳೆದ ಐದು ವಹಿವಾಟು ಅವಧಿಗಳಲ್ಲಿ ಷೇರುಗಳು ಶೇ.15ಕ್ಕಿಂತ ಹೆಚ್ಚು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

26
ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್
Image Credit : Asianet News

ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್

ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ (GHV Infra Projects) ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಬುಧವಾರ ಏರಿಕೆ ಕಂಡುಬಂದಿದೆ. ಈ ಏರಿಕೆಗೆ ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಬಹುದೊಡ್ಡ ಆರ್ಡರ್ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಕಂಪನಿ ಷೇರು ಮಾರುಕಟ್ಟೆಗೆ ಈ ಮಾಹಿತಿ ನೀಡುತ್ತಿದ್ದಂತೆ ಬೆಲೆಗಳು ಏರಿಕೆ ಕಂಡಿವೆ. ಹಾಗಾಗಿ ಇಂದು ಸಹ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್ ಮೇಲೆ ಕಣ್ಣಿಟ್ಟಿದ್ದಾರೆ.

Related Articles

Related image1
ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್
Related image2
ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ ವಧುವಿನ ಸೋದರ; ವಿಡಿಯೋ ನೋಡಿ ನೆಟ್ಟಿಗರಿಂದ ಮನವಿ
36
5% ಅಪ್ಪರ್ ಸರ್ಕ್ಯೂಟ್
Image Credit : Asianet News

5% ಅಪ್ಪರ್ ಸರ್ಕ್ಯೂಟ್

ಕಳೆದ ಐದು ವರ್ಷಗಳಲ್ಲಿ ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಮಲ್ಟಿಬ್ಯಾಗರ್ ಸ್ಟಾಕ್ ತನ್ನ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭವನ್ನು ನೀಡಿವೆ. ಫೆಬ್ರವರಿ 11 ರಂದು ಷೇರು ಮಾರುಕಟ್ಟೆಯಲ್ಲಿ 5% ಅಪ್ಪರ್ ಸರ್ಕ್ಯೂಟ್ ತಲುಪಿವೆ. ಹಾಗಾಗಿ ಬುಧವಾರ ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಹೂಡಿಕೆದಾರರ ಗಮನವನ್ನು ಸೆಳೆದಿತ್ತು.

46
135 ಕೋಟಿ ಮೌಲ್ಯದ ಆರ್ಡರ್
Image Credit : Gemini

135 ಕೋಟಿ ಮೌಲ್ಯದ ಆರ್ಡರ್

ಫೆಬ್ರವರಿ 10ರಂದು ಜಿಹೆಚ್‌ವಿ ಇನ್‌ಫ್ರಾ ಪ್ರೊಜೆಕ್ಟ್ ಹರಿಯಾಣದಲ್ಲಿ ನೀರು ಸಂಗ್ರಹಣಾ ಕೊಳವನ್ನು ನಿರ್ಮಿಸಲು MHK ಬಿಲ್ಡ್‌ಕಾನ್ LLPಯಿಂದ ಆರ್ಡರ್ ಪಡೆದುಕೊಂಡಿದೆ. ಫೆಬ್ರವರಿ 11ರಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡಲಾಗಿತ್ತು. ಈ ಯೋಜನೆಯ ಒಟ್ಟು ಮೌಲ್ಯ 135 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹೊಸ ಯೋಜನೆಯ ಘೋಷಣೆಯ ನಂತರ ಷೇರುಗಳು ಏರಿಕೆಯಾಗಿವೆ.

56
ಭವಿಷ್ಯದಲ್ಲಿ ಹೆಚ್ಚಾಗುವ ಸಾಧ್ಯತೆ
Image Credit : freepik

ಭವಿಷ್ಯದಲ್ಲಿ ಹೆಚ್ಚಾಗುವ ಸಾಧ್ಯತೆ

ಈ ಯೋಜನೆ ಪೂರ್ಣಗೊಳಿಸಲು ಕಂಪನಿಗೆ 22 ತಿಂಗಳ ಸಮಯವನ್ನು ನೀಡಲಾಗಿದೆ. ಇದು ಸಂಪೂರ್ಣ ದೇಶಿಯ ಯೋಜನೆಯಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 6,800% ರಷ್ಟು ಭಾರಿ ಲಾಭವನ್ನು ಕಂಡಿದೆ.

ಇದನ್ನೂ ಓದಿ: ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ; ಲಕ್ಷ ಲಕ್ಷ ಸಂಪಾದಿಸುವ ಆಸೆಯಿದ್ರೆ ಆರಂಭಿಸಿ ಅತ್ಯುತ್ತಮ ಬ್ಯುಸಿನೆಸ್

66
1,809 ಕೋಟಿ ಬಂಡವಾಳೀಕರಣ
Image Credit : freepik

1,809 ಕೋಟಿ ಬಂಡವಾಳೀಕರಣ

ಬುಧವಾರ ದಿನದ ಅಂತ್ಯದಲ್ಲಿ ಕಂಪನಿಯ ಷೇರುಗಳು ಶೇಕಡಾ 4.98 ರಷ್ಟು ಅಥವಾ ₹12.45 ರಷ್ಟು ಏರಿಕೆಯಾಗಿ ₹262.35 ಕ್ಕೆ ಮುಕ್ತಾಯಗೊಂಡಿವೆ. ಷೇರುಗಳು ದಿನ ₹262.35 ಕ್ಕೆ ಪ್ರಾರಂಭವಾದವು. ಕಂಪನಿಯ 52 ವಾರಗಳ ಗರಿಷ್ಠ ₹362.40 ಮತ್ತು ಅದರ 52 ವಾರಗಳ ಕನಿಷ್ಠ ₹32.86 ಆಗಿದೆ. ಇದರ ಮಾರುಕಟ್ಟೆ ಬಂಡವಾಳೀಕರಣ ಸುಮಾರು ₹1,809 ಕೋಟಿ.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಷೇರು ಮಾರುಕಟ್ಟೆ
ಹೂಡಿಕೆ
ಷೇರು ಮಾರುಕಟ್ಟೆ
ವ್ಯವಹಾರ

Latest Videos
Recommended Stories
Recommended image1
ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧನಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ
Recommended image2
ಭಾರತ - ಅಮೆರಿಕ ಡೀಲ್‌ನಿಂದ ಧಾನ್ಯಗಳಿಗೆ ಕೊಕ್‌ - ಫ್ಯಾಕ್ಟ್‌ ಶೀಟ್‌ನಲ್ಲಿ ದಿಢೀರ್‌ 3 ಬದಲಾವಣೆ
Recommended image3
DMart ಆನ್‌ಲೈನ್‌ ಅಪ್ಲಿಕೇಶನ್‌ ಅಥವಾ DMart ಸ್ಟೋರ್‌? ಹೆಚ್ಚಿನ ಆಫರ್‌ ಸಿಗೋದು ಎಲ್ಲಿ?
Related Stories
Recommended image1
ಪ್ರೇಮಿಗಳ ದಿನದ ಹೋಟೆಲ್ ಬುಕ್ಕಿಂಗ್‌ನಲ್ಲಿ ಶೇ.170ರಷ್ಟು ಹೆಚ್ಚಳ: ಭಾರತದ ಈ ತಾಣಗಳೇ ಹಾಟ್‌ ಫೇವರಿಟ್
Recommended image2
ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ ವಧುವಿನ ಸೋದರ; ವಿಡಿಯೋ ನೋಡಿ ನೆಟ್ಟಿಗರಿಂದ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved