ಜಾವಾ ಯೆಜ್ಡಿ 3 ಹೊಸ ಬೈಕ್‌ಗಳು ಅನಾವರಣ: ಕೇರಳದ ಕೊಚ್ಚಿಯಲ್ಲಿ ಬಿಡುಗಡೆ ।
ಆರವತ್ತು, ಎಪ್ಪತ್ತರ ದಶಕದಲ್ಲಿ ಮೋಟಾರ್ ಸೈಕಲ್ ಪ್ರಿಯರ ಕನಸಿನ ಬೈಕ್ ಜಾವಾ ಯೆಜ್ಡಿ ಕಂಪನಿ ಮೂರು ಹೊಸ ಮಾಡೆಲ್‌ನ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಜಾವಾ ಯೆಜ್ಡಿ 3 ಹೊಸ ಬೈಕ್‌ಗಳು ಬಿದುಗಡೆ
ಆರವತ್ತು, ಎಪ್ಪತ್ತರ ದಶಕದಲ್ಲಿ ಮೋಟಾರ್ ಸೈಕಲ್ ಪ್ರಿಯರ ಕನಸಿನ ಬೈಕ್ ಜಾವಾ ಯೆಜ್ಡಿ ಕಂಪನಿ ಮೂರು ಹೊಸ ಮಾಡೆಲ್‌ನ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಕೇರಳದ ಕೊಚ್ಚಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ‘ಯೆಲ್ಲೋ ಫಾಲ್ಕನ್ ಅಡ್ವೆಂಚರ್’, ‘ಗ್ರೀನ್ ಮಾಂಬಾ ರೋಡ್‌ಸ್ಟರ್’ ಮತ್ತು ‘ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್’ ಹೆಸರಿನ ಮೂರು ಬೈಕ್‌ಗಳನ್ನು ಖ್ಯಾತ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಕ್ಲಾಸಿಕ್ ಲೆಜೆಂಡ್ಸ್‌ನ ಸಹ ಸಂಸ್ಥಾಪಕರಾದ ಬೋಮನ್ ರುಸ್ತಮ್ ಇರಾನಿ ಮತ್ತು ಅನುಪಮ್ ತರೇಜಾ ಅವರು ಅನಾವರಣಗೊಳಿಸಿದರು.
ಜಾವಾ ಯೆಜ್ಡಿ 3 ಹೊಸ ಬೈಕ್‌ಗಳು ಬಿದುಗಡೆ
ಈ ವೇಳೆ ಮಾತನಾಡಿದ ಇರಾನಿ, ಕೇರಳದಲ್ಲಿ ಓಣಂ ಸೇರಿ ದೇಶದೆಲ್ಲೆಡೆ ಹಬ್ಬದ ಋತು ಆರಂಭವಾಗುವ ಸಮಯದಲ್ಲಿ ಜಾವಾ ಯೆಜ್ಡಿ ವತಿಯಿಂದ ಹೊಸ ಬೈಕ್‌ಗಳನ್ನು ಅನಾವರಣಗೊಳಿಸಲಾಗಿದೆ. ದೇಶದಲ್ಲಿ ಹಾಲಿ 500 ಡೀಲರ್‌ಗಳಿದ್ದಾರೆ. 2028ರ ವೇಳೆಗೆ ಡೀಲರ್‌ಶಿಪ್ ಸಂಖ್ಯೆಯನ್ನು 700ಕ್ಕೆ ವಿಸ್ತರಿಸಲಾಗುತ್ತದೆ. ಬೈಕ್ ಬಿಡಿ ಭಾಗಗಳನ್ನು ಡೀಲರ್ ಮಾತ್ರವಲ್ಲದೆ ಇತರೆ ಆಟೋಮೊಬೈಲ್ ಶಾಪ್‌ಗಳಲ್ಲಿ ಲಭ್ಯವಾಗಿಸುತ್ತೇವೆ ಎಂದರು.
ತರೇಜಾ ಮಾತನಾಡಿ, ಯೆಜ್ಡಿ ಬೈಕ್‌ಗಳು ರೈಡರ್‌ಗಳೇ ನಿರ್ಮಿಸಿ, ಬೆಳೆಸಿರುವ ಬ್ರ್ಯಾಂಡ್. ರೈಡರ್‌ಗಳು ಯೆಜ್ಡಿ ಮೋಟಾರ್ ಸೈಕಲ್‌ಗಳನ್ನು ತಲೆಮಾರುಗಳಿಂದ ಬಳಸುತ್ತಿದ್ದಾರೆ. ಹೀಗಾಗಿ, ಹೊಸ ತಲೆಮಾರು ಮತ್ತು ಹಳೇ ತಲೆಮಾರಿನ ಬೈಕ್ ಪ್ರಿಯರು ಇಷ್ಟ ಪಡುವಂತೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದೇವೆ. ಲಾಂಗ್ ರೈಡಿಂಗ್‌ಗೆ ಅನುಕೂಲವಾಗುವ ಜೊತೆಗೆ ನಗರ ಪ್ರದೇಶಗಳಲ್ಲಿ ಸಂಚಾರ, ಆಫ್ ರೋಡ್ ರೈಡಿಂಗ್‌ಗೆ ಬೈಕ್‌ಗಳು ಸೂಕ್ತವಾಗಿವೆ ಎಂದರು.
ಬೈಕ್‌ಗಳ ಬೆಲೆ (ಎಕ್ಸ್‌ಶೋರೂಂ) ಎಷ್ಟು?
ವರ್ಷಕ್ಕೆ ಎರಡೂವರೆ ಕೋಟಿ ಬೈಕ್‌ಗಳು ದೇಶದಲ್ಲಿ ಮಾರಾಟವಾಗುತ್ತಿವೆ. ಅದರಲ್ಲಿ 350 ಸಿಸಿ ಮತ್ತು ಮೇಲ್ಪಟ್ಟು ಸಾಮರ್ಥ್ಯದ ಬೈಕ್‌ಗಳ ಸಂಖ್ಯೆ ಸುಮಾರು 15 ಲಕ್ಷ ಇದೆ. 350 ಸಿಸಿ ಸಾಮರ್ಥ್ಯದ ಬೈಕ್ ಮಾರುಕಟ್ಟೆಯಲ್ಲಿ ಯೆಜ್ಡಿ ಬೈಕ್‌ಗಳು ಮುಂಚೂಣಿಯಲ್ಲಿವೆ. ಮುಂಬರುವ ದಿನಗಳಲ್ಲಿ ಬೈಕ್ ಮಾರುಕಟ್ಟೆಯಲ್ಲಿ ಶೇ.10ರಷ್ಟು ಮಾರುಕಟ್ಟೆ ಪಾಲು ಹೊಂದುವ ವಿಶ್ವಾಸವಿದೆ ಎಂದು ತರೇಜಾ ಹೇಳಿದ್ದಾರೆ.
ಯೆಲ್ಲೋ ಫಾಲ್ಕನ್ ಅಡ್ವೆಂಚರ್ (ಟ್ಯೂಬ್‌ಲೆಸ್) ಬೆಲೆ 2,32,969 ರು, ಯೆಲ್ಲೋ ಫಾಲ್ಕನ್ ಅಡ್ವೆಂಚರ್ (ಸ್ಟ್ಯಾಂಡರ್ಡ್) 2,12,969 ರು, ಗ್ರೀನ್ ಮಾಂಬಾ ರೋಡ್‌ಸ್ಟರ್- 2,05,969 ರು. ಹಾಗೂ ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್‌ಗೆ 2,05,969 ರು. ನಿಗದಿಪಡಿಸಲಾಗಿದೆ. ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ.

