MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಚಂದ್ರನ ಪ್ರಭಾವದಿಂದ ಯೋಗ ಶೂಲ ರಚನೆ: 6 ರಾಶಿಗಳ ನಿರ್ಣಯಕ್ಕೆ ಇಂದು ಅಗ್ನಿಪರೀಕ್ಷೆ, ಎಚ್ಚರ

ಚಂದ್ರನ ಪ್ರಭಾವದಿಂದ ಯೋಗ ಶೂಲ ರಚನೆ: 6 ರಾಶಿಗಳ ನಿರ್ಣಯಕ್ಕೆ ಇಂದು ಅಗ್ನಿಪರೀಕ್ಷೆ, ಎಚ್ಚರ

ಇಂದು ಚಂದ್ರನು ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುವುದರಿಂದ, ಯೋಗ ಶೂಲದ ಪ್ರಭಾವದಿಂದ ಮಾನಸಿಕ ಒತ್ತಡ ಮತ್ತು ನಿರ್ಣಯಗಳಲ್ಲಿ ಗೊಂದಲ ಉಂಟಾಗಲಿದೆ. ಈ ಕಾರಣದಿಂದಾಗಿ ರಾಶಿಯವರು ದಿನವಿಡೀ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

2 Min read
Author : Mahmad Rafik
Published : Feb 07 2026, 08:21 AM IST
Share this Photo Gallery
  • FB
  • TW
  • Linkdin
  • Whatsapp
17
ಮಾನಸಿಕ ಒತ್ತಡ ಮತ್ತು ತೆಗೆದುಕೊಳ್ಳುವ ನಿರ್ಣಯ
Image Credit : Social Media

ಮಾನಸಿಕ ಒತ್ತಡ ಮತ್ತು ತೆಗೆದುಕೊಳ್ಳುವ ನಿರ್ಣಯ

ಇಂದು ಚಂದ್ರ ದಿನದ ಮೊದಲಾರ್ಧದಲ್ಲಿ ಕನ್ಯಾರಾಶಿಯಲ್ಲಿರಲಿದ್ದು, ಮಧ್ಯಾಹ್ನ 1:22 ರ ನಂತರ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಚಿತ್ರ ನಕ್ಷತ್ರದ ಪ್ರಭಾವದ ಜೊತೆಗೆ ಯೋಗ ಶೂಲ ದಿನವಾದ ಇಂದು ಮಾನಸಿಕ ಒತ್ತಡ ಮತ್ತು ತೆಗೆದುಕೊಳ್ಳುವ ನಿರ್ಣಯದಲ್ಲಿ ಗೊಂದಲ ಸೂಚಿಸುತ್ತದೆ. ಹಾಗಾಗಿ ಕನ್ಯಾ ಸೇರಿದಂತೆ 6 ರಾಶಿಯವರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ.

27
ಮೇಷ ರಾಶಿ
Image Credit : SOCIAL MEDIA

ಮೇಷ ರಾಶಿ

ಮೇಷ ರಾಶಿಯವರು ಇಂದು ತಮ್ಮ ಮೇಲೆಯೇ ಸ್ವಯಂ ನಿಯಂತ್ರಣ ಹೊಂದುವುದು ಅವಶ್ಯಕವಾಗಿದೆ. ದಿನದ ಮೊದಲಾರ್ಧದಲ್ಲಿ ಮೇಷ ರಾಶಿಯವರಲ್ಲಿ ಪ್ರಕ್ಷುಬ್ಧತೆಯ ಅನುಭವ ಉಂಟಾಗಬಹುದು. ಮಧ್ಯಾಹ್ನದ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ. ಹಣಕಾಸು ವಿಷಯಗಳಲ್ಲಿ ಎಚ್ಚರದಿಂದಿರಿ.

Related Articles

Related image1
4 ರಾಶಿಯವರ ಮಾತಿನ ಮೇಲೆ ನಿಗಾ ಇರಲಿ: ಇಂದು ಮಧ್ಯಾಹ್ನ 12:35ರಿಂದ ಅತಿಗಂಡ ಯೋಗ ಆರಂಭ
Related image2
ಅತೀ ಶೀಘ್ರದಲ್ಲಿ ಶನಿ ಶುಕ್ರ ಸಂಯೋಗದಿಂದ ದೊಡ್ಡ ಯೋಗ, ಈ ರಾಶಿಯವರಿಗೆ ಹಠಾತ್‌ ಧನಲಾಭ, ಅಪಾರ ಯಶಸ್ಸು
37
ತುಲಾ ರಾಶಿ
Image Credit : OTHERS

ತುಲಾ ರಾಶಿ

ಇಂದು ಮಧ್ಯಾಹ್ನದ ನಂತರವೇ ನಿಮಗೆ ನೀವು ಮಾಡುವ ಕೆಲಸಗಳಲ್ಲಿ ಸ್ಪಷ್ಟತೆ ಸಿಗುತ್ತದೆ. ಸಹೋದ್ಯೋಗಿ ಅಥವಾ ಪಾಲುದಾರರ ಸಹಾಯ ಸಿಗಲಿದೆ. ಸೌಂದರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಣ ಹೆಚ್ಚು ಖರ್ಚಾಗುವ ಸಾಧ್ಯತೆಗಳಿವೆ. ಇಂದು ನಿಮ್ಮೆಲ್ಲಾ ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು. ಯೋಗಶೂಲದಿಂದ ಮಾನಸಿಕ ಆಯಾಸ ಮತ್ತು ಬೆನ್ನು ನೋವು ಕಾಡಬಹುದು.

47
ಮಕರ ರಾಶಿ
Image Credit : SOCIAL MEDIA

ಮಕರ ರಾಶಿ

ಇಂದು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ದಿನವಾಗಿದ್ದು, ಹಾಗಾಗಿ ಮಾತುಗಳ ಮೇಲೆ ಹಿಡಿತವಿರಲಿ. ಬೆಳಗ್ಗೆ ಒಂಬತ್ತನೇ ಮನೆಯಲ್ಲಿ ಕನ್ಯಾರಾಶಿಯಲ್ಲಿರುವ ಚಂದ್ರನು ಮಾರ್ಗದರ್ಶನ, ಅಧ್ಯಯನ ಮತ್ತು ಭವಿಷ್ಯದ ಯೋಜನೆಗಳನ್ನು ಸಕ್ರಿಯಗೊಳಿಸುತ್ತಾನೆ. ಹಾಗಾಗಿ ಮಾಡುವ ಕೆಲಸಗಳಿಗೆ ತ್ವರಿತ ಫಲಿತಾಂಶಗಳನ್ನು ನಿರೀಕ್ಷಿಸಬೇಡಿ. ಇಂದು ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿದ್ದು, ಹಳೆಯ ಹೂಡಿಕೆಗಳಿಂದ ಲಾಭ ಸಿಗಬಹುದು.

57
ಕುಂಭ ರಾಶಿ
Image Credit : SOCIAL MEDIA

ಕುಂಭ ರಾಶಿ

ಇಂದು ಕುಂಭ ರಾಶಿಯವರಿಗೆ ಎಂಟನೇ ಮನೆಯಲ್ಲಿ ಕನ್ಯಾರಾಶಿಯಲ್ಲಿರುವ ಚಂದ್ರನು ಅಭದ್ರತೆಯನ್ನುಂಟು ಮಾಡಬಹುದು. ಇದರಿಂದಾಗಿ ನಿಮ್ಮಲ್ಲಿ ಆತಂಕ ಅಥವಾ ಭಯದ ಭಾವನೆಗಳು ಉಂಟಾಗಬಹುದು. ಹೊಣೆಗಾರಿಕೆಗಳು ಹೆಚ್ಚಾಗಿ ಹಠಾತ್ ವೆಚ್ಚಗಳು ಅಧಿಕವಾಗಲಿವೆ. ನಿದ್ರೆ ಮತ್ತು ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.

67
ಮೀನ ರಾಶಿ
Image Credit : OTHERS

ಮೀನ ರಾಶಿ

ಮೀನ ರಾಶಿಯವರು ರಾಹುಕಾಲದ ಸಮಯದಲ್ಲಿ ಬೆಳಿಗ್ಗೆ 9:50 ರಿಂದ 11:13 ರವರೆಗಿನ ಭಾವನಾತ್ಮಕ ಬದ್ಧತೆಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತಿದೆ. ನಿಮ್ಮ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಇಟ್ಟುಕೊಂಡು, ಎದುರಾಗುವ ಸನ್ನಿವೇಶಗಳನ್ನು ಭಾವನಾತ್ಮವಾಗಿ ಯೋಚಿಸದೇ ಪ್ರಾಯೋಗಿಕವಾಗಿ ಎದುರಿಸಿ. ಆದಾಯ ಸಾಮಾನ್ಯವಾಗಿರುತ್ತದೆ. ವ್ಯವಹಾರದ ವಿಷಯಗಳಲ್ಲಿ ಎಚ್ಚರಿಕೆಯಿಂದಿರಿ.

ಇದನ್ನೂ ಓದಿ: ಫೆಬ್ರವರಿ ಉತ್ತರಾರ್ಧದಲ್ಲಿ ಪಂಚಕ್ರಗಿ ಯೋಗದಿಂದ ಇಡೀ ತಿಂಗಳು ಒಂದು ರಾಶಿಗೆ ಮಾತ್ರ ಜಾಕ್‌ಪಾಟ್

77
ಕನ್ಯಾ ರಾಶಿ
Image Credit : OTHERS

ಕನ್ಯಾ ರಾಶಿ

ದಿನದ ಮೊದಲಾರ್ಧದಲ್ಲಿ ಕನ್ಯಾ ರಾಶಿಯವರು ವಿರೋಧಿಗಳನ್ನು ಅಥವಾ ಸವಾಲುಗಳನ್ನು ನೇರವಾಗಿ ಎದುರಿಸುವ ಸನ್ನಿವೇಶ ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಬೆಳಗ್ಗೆಯೇ ಚಂದ್ರನು ಕನ್ಯಾ ರಾಶಿಯಲ್ಲಿರೋದರಿಂದ ಸ್ವಯಂ ವಿಮರ್ಶೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹದು. ಮಧ್ಯಾಹ್ನದ ನಂತರ ಆರ್ಥಿಕ ಮತ್ತು ಪ್ರಾಯೋಗಿಕ ಸಮತೋಲನ ನಿಮ್ಮಲ್ಲಿ ಉಂಟಾಗುತ್ತದೆ. ಕಠಿಣ ಪರಿಶ್ರಮ ಎದುರಾದರೂ ಉತ್ತಮ ಫಲಿತಾಂಶಗಳು ನಿಧಾನವಾಗಿ ಒಲಿಯುತ್ತವೆ.

ಇದನ್ನೂ ಓದಿ: ಕುಂಭದಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ: 3 ರಾಶಿಗಳಿಗೆ ಲಕ್ಷ್ಮಿ ಕಟಾಕ್ಷದಿಂದ ಜೀವನದಲ್ಲಿ ಸಮೃದ್ಧಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಾಶಿ
ಜ್ಯೋತಿಷ್ಯ

Latest Videos
Recommended Stories
Recommended image1
ತಿರುಪತಿ ತಿಮ್ಮಪ್ಪನ ಲಡ್ಡುಗೆ 'ಟಾಯ್ಲೆಟ್ ಕ್ಲೀನಿಂಗ್ ರಾಸಾಯನಿಕ'ದ ತುಪ್ಪ ಬಳಕೆ; ಸಿಎಂ ಚಂದ್ರಬಾಬು ನಾಯ್ಡು
Recommended image2
ಶನಿ ಕೃಪೆಯಿಂದ ಈ 5 ರಾಶಿಗಳಿಗೆ ಅದೃಷ್ಟ, ಸಂಪತ್ತು ಡಬಲ್ ಆಗೋದು ಗ್ಯಾರಂಟಿ!
Recommended image3
ಫೆಬ್ರವರಿಯಲ್ಲಿ ಮೂರು ಬಾರಿ ಬುಧನ ಚಲನೆ, ಅದು 3 ರಾಶಿಗೆ ಕೋಟ್ಯಾಧಿಪತಿ ಯೋಗ
Related Stories
Recommended image1
4 ರಾಶಿಯವರ ಮಾತಿನ ಮೇಲೆ ನಿಗಾ ಇರಲಿ: ಇಂದು ಮಧ್ಯಾಹ್ನ 12:35ರಿಂದ ಅತಿಗಂಡ ಯೋಗ ಆರಂಭ
Recommended image2
ಅತೀ ಶೀಘ್ರದಲ್ಲಿ ಶನಿ ಶುಕ್ರ ಸಂಯೋಗದಿಂದ ದೊಡ್ಡ ಯೋಗ, ಈ ರಾಶಿಯವರಿಗೆ ಹಠಾತ್‌ ಧನಲಾಭ, ಅಪಾರ ಯಶಸ್ಸು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved