4 ರಾಶಿಯವರ ಮಾತಿನ ಮೇಲೆ ನಿಗಾ ಇರಲಿ: ಇಂದು ಮಧ್ಯಾಹ್ನ 12:35ರಿಂದ ಅತಿಗಂಡ ಯೋಗ ಆರಂಭ
ಇಂದಿನ ಪಂಚಾಂಗದ ಪ್ರಕಾರ, ಅತಿಗಂಡ ಯೋಗ ಮತ್ತು ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರವು ಕೆಲವು ರಾಶಿಗಳ ಮೇಲೆ ನೇರ ಪ್ರಭಾವ ಬೀರಲಿದೆ. ವಿಶೇಷವಾಗಿ 4 ಸಮಯದಲ್ಲಿ ತಮ್ಮ ನಿರ್ಧಾರಗಳು, ಮಾತುಗಳು ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಸಿದೆ.

ಇಂದು ಅತಿಗಂಡ ಯೋಗ
ಇಂದಿನ ಪಂಚಾಂಗದ ಪ್ರಕಾರ ಕೃಷ್ಣ ಪಕ್ಷ ತೃತೀಯಾ ತಿಥಿ, ಪೂರ್ವ ಫಲ್ಗುಣಿ ನಕ್ಷತ್ರವಾಗಿದೆ. ಇಂದು ಅತಿಗಂಡ ಯೋಗ ಮತ್ತು ಸಿಂಹ ರಾಶಿಯಲ್ಲಿ ಚಂದ್ರನ ಸಂಚಾರವು ನಿಮ್ಮ ಮನಸ್ಥಿತಿ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ನಡವಳಿಕೆಯ ಮೇಲೆ ನೇರವಾಗಿ ಪ್ರಭಾವ ಬೀರುತ್ತಿದೆ. ಹಾಗಾಗಿ ಕೆಲವು ರಾಶಿಯವರು ತಾವು ಏನು ಮಾಡುತ್ತಿದ್ದೇವೆ? ತಮ್ಮ ಮಾತುಗಳ ಮೇಲೆ ನಿಗಾ ಇರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ರಾಹು ಕಾಲ ಮಧ್ಯಾಹ್ನ 12:35 ರಿಂದ 1:57
ಇಂದು ರಾಹು ಕಾಲ ಮಧ್ಯಾಹ್ನ 12:35 ರಿಂದ 1:57 ರವರೆಗೆ ಇರಲಿದೆ. ಈ ಸಮಯದಲ್ಲಿಅತಿಗಂಡ ಯೋಗ ಶುರುವಾಗಲಿದೆ. ಈ ರಾಹುಕಾಲದಲ್ಲಿ ಅಪಾಯಗಳು, ವಿವಾದಗಳು ಮತ್ತು ಆತುರವನ್ನು ತಪ್ಪಿಸುವುದು ಮುಖ್ಯವಾದ ಸಮಯವಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಇಂದು ರಾಹುಕಾಲ ಆರಂಭಕ್ಕೂ ಮುನ್ನವೇ ಪ್ರಮುಖ ಅಥವಾ ಶುಭಕಾರ್ಯಗಳನ್ನು ಮಾಡಿಕೊಳ್ಳೋದು ಉತ್ತಮವಾಗಿದೆ. ಮಧ್ಯಾಹ್ನದ ನಂತರ ಮಿಥುನ ರಾಶಿಯವರಲ್ಲಿ ಮಾನಸಿಕ ಚಡಪಡಿಕೆ ಹೆಚ್ಚಾಗಬಹುದು. ಮಧ್ಯಾಹ್ನ 12:35 ರಿಂದ 1:57 ರವರೆಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬೇಡಿ. ಅನಗತ್ಯವಾಗಿ ಯಾರೊಂದಿಗೆ ಮಾತನಾಡಬೇಡಿ.
ಸಿಂಹ ರಾಶಿ
ಸಿಂಹ ರಾಶಿಯವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸುವುದು ಮುಖ್ಯ ಎಂದು ಸಲಹೆ ನೀಡಲಾಗಿದೆ. ಇಂದು ಅಭಿಜಿತ್ ಮುಹೂರ್ತವಿಲ್ಲದ ಕಾರಣ ಪ್ರಮುಖ ಕೆಲಸಗಳನ್ನು ಮುಂದೂಡಿಕೆ ಮಾಡುವುದು ಜಾಣರ ಕೆಲಸವಾಗಿದೆ. ಇಂದು ಮಧ್ಯಾಹ್ನದ ಬಳಿಕ ಆರೋಗ್ಯದ ಬಗ್ಗೆ ಗಮನ ನೀಡಿ. ಮಾನಸಿಕ ಆಯಾಸ ನಿಮ್ಮನ್ನು ಕಾಡಬಹುದು.
ತುಲಾ ರಾಶಿ
ತುಲಾ ರಾಶಿಯವರಲ್ಲಿಂದು ನಿದ್ದೆಯ ಕೊರತೆಯನ್ನು ಅನುಭವಿಸಬಹುದು. ಅತಿಯಾದ ಕೆಲಸಗಳಿಂದ ಮಾನಸಿಕ ಮತ್ತು ದೈಹಿಕವಾಗಿ ನಿಶ್ಯಕ್ತಿ ಹೊಂದಿರುವ ಕಾರಣ ರಾಹುಕಾಲ ಸಮಯದಲ್ಲಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳಬೇಡಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡಬಹುದು.
ಇದನ್ನೂ ಓದಿ: ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ! ಇಂದಿರಾ, ರಾಜೀವ್, ಸಂಜಯ್ ಸತ್ತಿದ್ದು ಇದೇ ದಿನ- ಜ್ಯೋತಿಷಿ ಹೇಳಿದ್ದೇನು?
ಮಕರ ರಾಶಿ
ಆರ್ಥಿಕವಾಗಿ ನಿಮ್ಮ ಖರ್ಚನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ. ವೃತ್ತಿ ಮತ್ತು ಖಾಸಗಿ ಸಂಬಂಧಗಳಲ್ಲಿನ ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳುಂಟಾಗಿ ಕಲಹಕ್ಕೆ ಕಾರಣವಾಗಬಹುದು. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮಧ್ಯಾಹ್ನ 12:35 ರಿಂದ 1:57 ರವರೆಗೆ ಯಾವುದೇ ಹೂಡಿಕೆಗಳು, ಸಾಲಗಳು ಅಥವಾ ಅಪಾಯಕಾರಿ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಇದನ್ನೂ ಓದಿ: ಮಧ್ಯಾಹ್ನ 3:18ರ ನಂತರ 5 ರಾಶಿಯವರಿಗೆ ಅಶುಭ ಕಂಟಕ ಕಾಲ ಆರಂಭ: ಈ ಕೆಲಸಗಳನ್ನ ಮಾಡ್ಬೇಡಿ
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

