ಅಡುಗೆಗೆ ಸೀಮಿತವಲ್ಲ ಉಪ್ಪು ! ಆರೋಗ್ಯದ ಜೊತೆ ಶ್ರೀಮಂತಿಕೆ ಬೇಕೆಂದ್ರೆ ಹೀಗೆ ಬಳಸಿ
ಉಪ್ಪು ಅಡುಗೆಮನೆಯಲ್ಲಿರುವ ಸಾಮಾನ್ಯ ಪದಾರ್ಥ ಅಲ್ವೇ ಅಲ್ಲ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಕೆಲ್ಸ ಮಾತ್ರ ಮಾಡೋದಿಲ್ಲ. ಉಪ್ಪು ನಮ್ಮ ಸಂಸ್ಕೃತಿಯಲ್ಲಿ ಬೆರೆತ ವಸ್ತು. ಉಪ್ಪನ್ನು ಶುದ್ಧೀಕರಣ, ರಕ್ಷಣೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿಯೂ ಬಳಸಲಾಗುತ್ತದೆ.

ಆರೋಗ್ಯ ವೃದ್ಧಿಗೆ
ಉಪ್ಪನ್ನು ನೀವು ಅನೇಕ ವಿಧಗಳಲ್ಲಿ ಬಳಸಿ ನಿಮ್ಮ ಸಂತೋಷ, ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯವೃದ್ಧಿಗೆ ಉಪ್ಪನ್ನು ಬಳಸಬಹುದು. ಸ್ವಲ್ಪ ಉಪ್ಪನ್ನು ಅಂಗೈಯಲ್ಲಿ ತೆಗೆದುಕೊಂಡು ಉಜ್ಜಬೇಕು. ಉಜ್ಜುವಾಗ, ಉಪ್ಪು ಮತ್ತು ನೀರಿನಿಂದ ನನ್ನ ಎಲ್ಲ ಸಮಸ್ಯೆ ದೂರವಾಗಿದೆ ಎನ್ನುತ್ತ ನೀವು ಕೈ ತೊಳೆಯಬೇಕು. ಇದರಿಂದ ನಕಾರಾತ್ಮಕತೆ ದೂರವಾಗಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಅದೃಷ್ಟ ವೃದ್ಧಿಗೆ ಉಪ್ಪು
ನಿಮ್ಮ ಅದೃಷ್ಟ ಉಪ್ಪಿನಲ್ಲಿದೆ ಅಂದ್ರೆ ತಪ್ಪಾಗೋದಿಲ್ಲ. ಚಿಕ್ಕದೊಂದು ಬಟ್ಟೆಯ ಚೀಲದಲ್ಲಿ ಉಪ್ಪನ್ನು ಹಾಕಿ ಎಡ ಜೇಬಿನಲ್ಲಿ ಇಟ್ಟುಕೊಂಡರೆ ಅದೃಷ್ಟ ನಮ್ಮ ಜೊತೆ ಇರುತ್ತದೆ ಎಂಬ ನಂಬಿಕೆ ಬಲವಾಗಿದೆ.
ಹಣ ಮತ್ತು ಸಮೃದ್ಧಿಗಾಗಿ ಉಪ್ಪು
ಮನೆಯ ಉಪ್ಪಿನ ಡಬ್ಬವನ್ನು ತುಂಬಿಡಲು ಒಂದು ದಿನವಿದೆ. ನೀವು ಶುಕ್ರವಾರ ಉಪ್ಪಿನ ಡಬ್ಬಿಯನ್ನು ಸಂಪೂರ್ಣವಾಗಿ ತುಂಬಿ ಇಟ್ಟರೆ ಮನೆಯಲ್ಲಿ ಆರ್ಥಿಕ ಸಮೃದ್ಧಿ ಬರುತ್ತದೆ. ಅದೇ ರೀತಿ ಸಂಬಳ ಬಂದ ನಂತರ, ಹಣ ಅಥವಾ ಕಾರ್ಡ್ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿದರೆ ಹಣದ ಅದೃಷ್ಟ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ.
ಮನೆಯ ರಕ್ಷಣೆಗಾಗಿ
ಮನೆಯ ಬಾಗಿಲಿನ ಬಳಿ ಉಪ್ಪನ್ನು ಸಿಂಪಡಿಸಿದರೆ ಮನೆಯನ್ನು ನಕಾರಾತ್ಮಕತೆಯಿಂದ ರಕ್ಷಿಸಬಹುದು. ಈ ಕೆಲಸವನ್ನು ನೀವು ವರ್ಷಕ್ಕೆ ನಾಲ್ಕು ಬಾರಿ ಮಾಡಿದರೆ ಸಾಕು.
ಮನೆಯ ನಕಾರಾತ್ಮಕ ಶಕ್ತಿ
ಬೆಳಗ್ಗೆ ಮನೆ ಸ್ವಚ್ಛ ಮಾಡುವ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಎನರ್ಜಿ ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
ಒತ್ತಡ ಕಡಿಮೆ ಮಾಡಲು ಈ ಉಪಾಯ
ನೀವು ಒತ್ತಡದಿಂದ ಬಳಲುತ್ತಿದ್ದರೆ ಅಥವಾ ಕೆಟ್ಟ ಅನುಭವ ನಿಮಗೆ ಆಗಿದ್ದರೆ ಎಡ ಭುಜದ ಮೇಲಿಂದ ಒಂದು ಚಿಟಿಕೆ ಉಪ್ಪನ್ನು ಹಿಂದಕ್ಕೆ ಎಸೆದರೆ ಟೆನ್ಶನ್ ದೂರವಾಗುತ್ತದೆ.

