ನವರಾತ್ರಿಯ 9 ದಿನಗಳ ರಹಸ್ಯ: ದೇವಿಯ ಕೃಪೆಗೆ 9 ದಿನ ಈ ನೈವೇದ್ಯ ಸಮರ್ಪಿಸಿ- ಯಾವ ದಿನ ಯಾವ ಪದಾರ್ಥ
ಅಕ್ಟೋಬರ್ 11 ರಿಂದ 19ರವರೆಗೆ ನಡೆಯುವ ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳಿಗೆ ವಿಶೇಷ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಪ್ರತಿದಿನವೂ ಪಾಯಸ, ಸಕ್ಕರೆ, ಹಾಲಿನಂತಹ ನಿರ್ದಿಷ್ಟ ವಸ್ತುಗಳನ್ನು ಪೂಜೆಗೆ ಬಳಸುವುದರಿಂದ ರೋಗ ನಿವಾರಣೆ, ಸುಖ-ಶಾಂತಿ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.

ಅ.11ರಿಂದ 19 ನವರಾತ್ರಿ
ನವರಾತ್ರಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಕ್ಟೋಬರ್ 11 ರಿಂದ 19ರವರೆಗೆ ನವರಾತ್ರಿ ಶುರುವಾಗಲಿದ್ದು, ಒಂದೊಂದು ದಿನ ಒಂದೊಂದು ನೈವೇದ್ಯವನ್ನು ಇಟ್ಟು ದೇವಿಯನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರಲಿವೆ.
ಮೊದಲ ದಿನ ಪಾಯಸ
ಮೊದಲ ದಿನ ಶೈಲಪುತ್ರಿ ದೇವಿಗೆ ಪಾಯಸವನ್ನು ಸಮರ್ಪಿಸಬೇಕು. ಇದರಿಂದ ರೋಗಗಳು ನಿವಾರಣೆಯಾಗುತ್ತವೆ.
ಎರಡನೆಯ ದಿನ ಸಕ್ಕರೆ
ಎರಡನೆಯ ದಿನ ಬ್ರಹ್ಮಚಾರಿಣಿ ದೇವಿಗೆ ಸಕ್ಕರೆಯನ್ನು ನೈವೇದ್ಯಕ್ಕೆ ಇಡಬೇಕು. ಹೀಗೆ ಮಾಡುವುದರಿಂದ ಪರಿವಾರದ ಆಯಸ್ಸು ಹೆಚ್ಚಾಗುತ್ತದೆ.
3ನೇ ದಿನ ಹಾಲು
3ನೇ ದಿನ ಚಂದ್ರಘಂಟಾ ದೇವಿಗೆ ಹಾಲನ್ನು ಅರ್ಪಿಸುವುದರಿಂದ ದುಃಖ ಮತ್ತು ಕ್ಷೇಶದ ನಾಶವಾಗುತ್ತದೆ.
4ನೇ ದಿನ ಮಾಲ್ಪುವಾ
4ನೇ ದಿನ ಖುಷ್ಮಾಂಡಾ ದೇವಿಯ ಮಾಲ್ಪುವಾ ಅರ್ಪಿಸುವುದರಿಂದ ಬುದ್ಧಿ ಮತ್ತು ಹಣದ ಹರಿವು ಬರುತ್ತದೆ.
5ನೇ ದಿನ ಬಾಳೆಹಣ್ಣು
5ನೇ ದಿನ ಬಾಳೆಹಣ್ಣು ಸ್ಕಂದಮಾತಾ ದೇವಿಗೆ ನೈವೇದ್ಯ ಮಾಡುವುದರಿಂದ ಸುಖ, ಶಾಂತಿ ಸಂಭವಿಸುತ್ತದೆ.
6ನೇ ದಿನ ಜೇನುತುಪ್ಪ
6ನೇ ದಿನ ಜೇನುತುಪ್ಪವನ್ನು ಮಾ ಕಾತ್ಯಾಯಿನಿಗೆ ಸಮರ್ಪಿಸುವುದರಿಂದ ನಿಂತುಹೋದ ಕೆಲಸವೆಲ್ಲಾ ಪುನಃ ಆರಂಭವಾಗುವುದು.
7ನೇ ದಿನ ಬೆಲ್ಲ
7ನೇ ದಿನ ಮಾ ಕಾಲರಾತ್ರಿಗೆ ಬೆಲ್ಲವನ್ನು ಸಮರ್ಪಿಸಬೇಕು. ಹೀಗೆ ಮಾಡಿದರೆ ಎಲ್ಲ ಸಂಕಟ ಮತ್ತು ಕೆಟ್ಟ ದೃಷ್ಟಿ ಹೋಗುತ್ತದೆ.
8ನೇ ದಿನ ತೆಂಗಿನಕಾಯಿ
8ನೇ ದಿನ ತೆಂಗಿನಕಾಯಿಯನ್ನು ದೇವಿ ಮಹಾಗೌರಿಗೆ ಇದನ್ನು ಅರ್ಪಿಸಿದರೆ ನಿಮ್ಮ ಮನೋಭಿಲಾಷ್ಟೆಗಳು ನೆರವೇರುವುದು.
9ನೇ ದಿನ ಹಲ್ವಾಪೂರಿ
9ನೇ ದಿನ ಹಲ್ವಾಪೂರಿಯನ್ನು ಮಾ ಸಿದ್ಧಿಧಾತ್ರಿಗೆ ಸಮರ್ಪಿಸಿದರೆ ಇದರಿಂದ ಸಂಪೂರ್ಣ ನವರಾತ್ರಿ ಸಫಲವಾಗುತ್ತದೆ.

