- Home
- Astrology
- Bedtime Vastu: ರಾತ್ರಿ ಮಲಗುವ ಮುನ್ನ ಈ ಸಿಂಪಲ್ ಕೆಲಸ ಮಾಡಿದ್ರೆ ಬಲಗಾಲಿಟ್ಟು ಮನೆಗೆ ಬರ್ತಾಳೆ ಲಕ್ಷ್ಮಿ
Bedtime Vastu: ರಾತ್ರಿ ಮಲಗುವ ಮುನ್ನ ಈ ಸಿಂಪಲ್ ಕೆಲಸ ಮಾಡಿದ್ರೆ ಬಲಗಾಲಿಟ್ಟು ಮನೆಗೆ ಬರ್ತಾಳೆ ಲಕ್ಷ್ಮಿ
ಆರೋಗ್ಯಕ್ಕೆ, ದೇವರ ಪೂಜೆಗೆ, ಸಣ್ಣ ಸಣ್ಣ ವಾಸ್ತು ಉಪಾಯಕ್ಕೆ ಜನರ ಬಳಿ ಟೈಂ ಇರೋದಿಲ್ಲ. ಅದೇ ಗಂಟೆಗಟ್ಟಲೆ ಮೊಬೈಲ್ ಹಿಡಿದು ಟೈಂ ಹಾಳು ಮಾಡ್ತಿರ್ತಾರೆ. ರಾತ್ರಿ ಮೊಬೈಲ್ ನೋಡೋ ಟೈಂನಲ್ಲಿ ಅತ್ಯಂತ ಸರಳ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಮನೆಯ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗುತ್ತೆ.

ವಾಸ್ತು ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ಮಲಗುವ ಮೊದಲು ತೆಗೆದುಕೊಳ್ಳುವ ಸಣ್ಣ ಕ್ರಮಗಳು ಸಹ ಮನೆಯಲ್ಲಿ ವಾಸ್ತು ದೋಷಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಕೆಲ ನಿಯಮಗಳನ್ನು ನಿಯಮಿತವಾಗಿ ಪಾಲಿಸೋದ್ರಿಂದ ಲಕ್ಷ್ಮಿ ಆಶೀರ್ವಾದ ಸಿಗುತ್ತದೆ. ಕ್ರಮೇಣ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಬಕೆಟ್ ತುಂಬಿಸಿ
ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವ ಮೊದಲು ಬಾತ್ ರೂಮಿನ ಬಕೆಟನ್ನು ಶುದ್ಧ ನೀರಿನಿಂದ ತುಂಬಿಸಿ. ಇದು ಅತ್ಯಂತ ಶುಭ ಎಂದು ನಂಬಲಾಗಿದೆ. ಈ ಪರಿಹಾರ ಆರ್ಥಿಕ ತೊಂದರೆಗಳು ಮತ್ತು ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಅಡುಗೆಮನೆಯಲ್ಲಿ ಖಾಲಿ ಬಕೆಟ್ ಇಡಬೇಡಿ. ನೀರಿನಿಂದ ತುಂಬಿದ ಬಕೆಟ್ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ಸಮೃದ್ಧಿಯ ವಾತಾವರಣ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಕೊಳಕು ಪಾತ್ರೆಗಳು
ವಾಸ್ತು ನಂಬಿಕೆಗಳ ಪ್ರಕಾರ, ರಾತ್ರಿ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಎಂದಿಗೂ ಇಡಬೇಡಿ. ಊಟದ ನಂತರ ಮಲಗುವ ಮೊದಲು ಪಾತ್ರೆಗಳನ್ನು ಕ್ಲೀನ್ ಮಾಡಿ, ಸಿಂಕ್ ಸ್ವಚ್ಛತೆ ಕಾಪಾಡಿಕೊಳ್ಳಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ಆರ್ಥಿಕ ಅಭಿವೃದ್ಧಿಗೂ ಸಹಕಾರಿ. ಇದು ಮನೆಯ ವಾಸ್ತುವನ್ನು ಸಮತೋಲನಗೊಳಿಸುತ್ತದೆ. ಲಕ್ಷ್ಮಿ ಆಶೀರ್ವಾದ ನಿಮಗೆ ಲಭಿಸುತ್ತದೆ.
ಮುಖ್ಯ ದ್ವಾರದಲ್ಲಿ ದೀಪ
ಮನೆಗೆ ಸಕಾರಾತ್ಮಕ ಶಕ್ತಿಯ ಪ್ರವೇಶ ಆಗ್ಬೇಕು ಅಂದ್ರೆ ಮುಖ್ಯ ದ್ವಾರಕ್ಕೆ ದೀಪ ಬೆಳಗಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿದಿನ ಸಂಜೆ ಮುಖ್ಯ ದ್ವಾರದಲ್ಲಿ ದೀಪ ಹಚ್ಚುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮುಖ್ಯ ದ್ವಾರದ ಸುತ್ತಲೂ ಸಾಕಷ್ಟು ಬೆಳಕು ಇರುವಂತೆ ನೋಡ್ಕೊಳ್ಳಿ. ಮುಖ್ಯದ್ವಾರ ಬೆಳಕಿನಿಂದ ಕೂಡಿದ್ದರೆ ಅದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಬಲಗಾಲಿಟ್ಟು ಲಕ್ಷ್ಮಿ ಮನೆಗೆ ಬರ್ತಾಳೆ.
ಮನೆಯಲ್ಲಿರಲಿ ಬೆಳಕು
ಸೂರ್ಯಾಸ್ತದ ನಂತರ ಮನೆ ಬೆಳಗಿಸಲು ಮರೆಯಬೇಡಿ. ಸೂರ್ಯಾಸ್ತವಾಗ್ತಿದ್ದಂತೆ ದೇವರ ಮುಂದೆ ದೀಪ ಬೆಳಗುವ ಜೊತೆಗೆ ಮನೆಯ ಹಾಲ್ ನಲ್ಲಿ ದೀಪ ಬೆಳಗಿಸಿ. ರಾತ್ರಿ ಮಲಗುವಾಗ್ಲೂ ಸಂಪೂರ್ಣ ಕತ್ತಲೆ ಬೇಡ. ಮನೆಯ ಯಾವುದಾದ್ರೂ ಒಂದು ಜಾಗದಲ್ಲಿ ಸಣ್ಣದಾಗಿ ದೀಪ ಬೆಳಗುತ್ತಿರಲಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿ ಸ್ವಚ್ಛ ಮತ್ತು ಚೆನ್ನಾಗಿ ಬೆಳಕಿರುವ ಮನೆಗೆ ಬರುತ್ತಾಳೆ. ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾಳೆ.

