WhatsApp Channel : ವಾಟ್ಸ್ ಅಪ್ ಇನ್ಮುಂದೆ ಬರೀ ಚಾಟ್ ಆಗಿರೋದಿಲ್ಲ. ನೀವು ಇದ್ರಿಂದ್ಲೂ ಲಾಭ ಪಡೆಯಬಹುದು. ವಾಟ್ಸ್ ಅಪ್ ಚಾನೆಲ್ ಶುರು ಮಾಡಿ ಹಣ ಸಂಪಾದನೆ ಮಾಡ್ಬಹುದು. ಇದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಯೂಟ್ಯೂಬ್, ಇನ್ಸ್ಟಾಗ್ರಾಮ್ ಸೇರಿದಂತೆ ಕೆಲ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ, ಫೋಟೋ ಪೋಸ್ಟ್ ಮಾಡಿ ಜನ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ನೀವೂ ಯೂಟ್ಯೂಬ್ ಚಾನೆಲ್ ಶುರು ಮಾಡುವ ಆಲೋಚನೆಯಲ್ಲಿದ್ರೆ ನಿಮಗೆ ಇನ್ನೊಂದು ಅವಕಾಶ ಇದೆ. ಯೂಟ್ಯೂಬ್ ನಂತೆಯೇ ವಾಟ್ಸ್ ಅಪ್ ಕೂಡ ಗಳಿಕೆಗೆ ಅವಕಾಶ ನೀಡೋ ಬಗ್ಗೆ ಪ್ಲಾನ್ ಮಾಡ್ತಿದೆ. ಯೂಟ್ಯೂಬ್, ಇನ್ಸ್ಟಾ ಮಾತ್ರವಲ್ಲ ನೀವು ವಾಟ್ಸ್ ಅಪ್ ನಲ್ಲೂ ಇನ್ಮುಂದೆ ಅರ್ನಿಂಗ್ ಶುರು ಮಾಡ್ಬಹುದು.
ವಾಟ್ಸ್ ಅಪ್ ಇನ್ಮುಂದೆ ಕೇವಲ ಚಾಟ್ ಮಾಡೋಕೆ ಮಾತ್ರ ಸೀಮಿತವಾಗೋದಿಲ್ಲ. ವರದಿಗಳ ಪ್ರಕಾರ, ವಾಟ್ಸಪ್ ತನ್ನ ಹೊಸ ಫೀಚರ್ ಶುರು ಮಾಡಿದ್ಮೇಲೆ ಬಳಕೆದಾರರು ತಮ್ಮ WhatsApp ಚಾನಲ್ ಮೂಲಕ ಹಣ ಸಂಪಾದನೆ ಮಾಡ್ಬಹುದು. ವಾಟ್ಸ್ ಅಪ್ ಚಾನೆಲ್ ಬಗ್ಗೆ ನೀವು ಆಲೋಚನೆ ಮಾಡ್ತಿದ್ದರೆ ಇದು ಬೆಸ್ಟ್ ಎನ್ನುತ್ತಾರೆ ತಜ್ಞರು. ಆದ್ರೆ ಕೆಲವೊಂದು ಷರತ್ತುಗಳನ್ನು ವಾಟ್ಸ್ಅಪ್ ಇಡ್ತಿದೆ.
ಮಕ್ಕಳ ಕೈಗೆ ಬೀಗ ಹಾಕಿದ 'WhatsApp'.. ಇನ್ಮುಂದೆ ಪೋಷಕರ ಕಂಟ್ರೋಲ್‌ನಷ್ಟೇ ಮಕ್ಕಳ ಮೊಬೈಲ್ ಆಟ ಸಾಧ್ಯ!
ವಾಟ್ಸಾಪ್ನಲ್ಲಿ ಹಣ ಗಳಿಸುವ ಹೊಸ ಮಾರ್ಗ
ವರದಿಗಳ ಪ್ರಕಾರ, ಹೊಸ ಫೀಚರ್ ಶುರು ಆದ್ಮೇಲೆ ಬಳಕೆದಾರರು ಉಚಿತವಾಗಿ ಎಲ್ಲ ವಾಟ್ಸ್ ಅಪ್ ಚಾನೆಲ್ ನೋಡಲು ಸಾಧ್ಯವಿಲ್ಲ. ಕೆಲ ಚಾನೆಲ್ ಗಳನ್ನು ಸಬ್ಸ್ಕ್ರೈಬ್ ಮಾಡಲು ಹಣ ನೀಡ್ಬೇಕು. ಹಾಘಂತ ಎಲ್ಲ ಚಾನೆಲ್ ಸಬ್ಸ್ಕ್ರೈಬ್ ಗೆ ಹಣ ಪಾವತಿಸಬೇಕಾಗಿಲ್ಲ. ವಾಟ್ಸ್ ಅಪ್ ಇದಕ್ಕೆ ಆಯ್ಕೆ ನೀಡ್ತಿದೆ. ಪೇಡ್, ಪೇಡ್ ಇಲ್ಲದ ಚಾನೆಲ್ ಎರಡನ್ನೂ ಬೇರೆಯಾಗಿ ಕಾಣ್ಬಹುದು. ಈಗ್ಲೂ ವಾಟ್ಸ್ ಅಪ್ ನಲ್ಲಿ ಜನರು ಚಾನೆಲ್ ಓಪನ್ ಮಾಡ್ಬಹುದು. ಆದ್ರೆ ಬಳಕೆದಾರರು ಯಾವುದೇ ಶುಲ್ಕವಿಲ್ಲದೆ ಚಾನೆಲ್ ಸಬ್ಸ್ಕ್ರೈಬ್ ಮಾಡ್ಬಹುದಿತ್ತು. ಹೊಸ ಫೀಚರ್ ಬರ್ತಿದ್ದಂತೆ ಈ ರೂಲ್ಸ್ ಬದಲಾಗಲಿದೆ. ಬಳಕೆದಾರ ಹಣ ನೀಡಿ ಚಾನೆಲ್ ಸಬ್ಸ್ಕ್ರೈಬ್ ಮಾಡ್ಬೇಕು. ಬಳಕೆದಾರರು ಸಬ್ಸ್ಕ್ರೈಬ್ ಆಗುವ ಮುನ್ನ, ಚಾನೆಲ್ ಬಗ್ಗೆ, ಅಲ್ಲಿನ ಸಬ್ಸ್ಕ್ರೈಬರ್ ಬಗ್ಗೆ ಎಲ್ಲ ಮಾಹಿತಿ ಪಡೆಯುವ ಅಧಿಕಾವಿರುತ್ತದೆ.
ವಾಟ್ಸ್ ಅಪ್ WhatsApp ಚಾನಲ್ ಶುರು ಮಾಡೋದು ಹೇಗೆ?
ವಾಟ್ಸ್ ಅಪ್ ಚಾನಲ್ ರಚಿಸೋದು ತುಂಬಾ ಸುಲಭ. Android ಮತ್ತು iPhone ಎರಡರಲ್ಲೂ ಮಾಡ್ಬಹುದು. ಮೊದಲು, ಅಪ್ಲಿಕೇಶನ್ ಓಪನ್ ಮಾಡಿ, ಚಾನೆಲ್ ಎಂಟ್ರಿ ಪಡೆದುಕೊಳ್ಳಿ. ಚಾನಲ್ ಲಿಸ್ಟ್ ಕೆಳಗೆ ಕ್ರಿಯೆಟ್ ಚಾನೆಲ್ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡ್ಕೊಳ್ಳಿ. ವಾಟ್ಸ್ ಅಪ್ ಸಂದೇಶವನ್ನು ಸರಿಯಾಗಿ ಓಡಿ, ಮುಂದೆ ಹೋಗಿ. ಮುಂದಿನ ಪೇಜ್ ನಲ್ಲಿ ಚಾನಲ್ ಹೆಸರು ಮತ್ತು ಉಳಿದ ಮಾಹಿತಿ ಕೇಳಲಾಗುತ್ತದೆ. ನಿಮಗೆ ಇಷ್ಟವಿದ್ರೆ ಚಾನಲ್ ಐಕಾನ್ ಸೇರಿಸ್ಬಹುದು. ಅಗತ್ಯ ಮಾಹಿತಿ ತುಂಬಿದ ಮೇಲೆ ಟ್ಯಾಪ್ ಮಾಡಿ. ನಿಮ್ಮ ಚಾನೆಲ್ ರೆಡಿಯಾಗಿರುತ್ತದೆ.
ವಾಟ್ಸ್ ಅಪ್ ಕಂಟೆಂಟ್ ಕ್ರಿಯೇಟರ್ಸ್ ಗೆ ಹೊಸ ಫೀಚರ್ ಕೂಡ ನೀಡ್ತಿದೆ. ಅದ್ರಲ್ಲಿ ಕ್ರಿಯೇಟರ್ಸ್ ತಮ್ಮ ಕೆಲ ವಿಡಿಯೋಗಳನ್ನು ಲಾಕ್ ಮಾಡಬಹುದು. ಪೇಯ್ಡ್ ಫಾಲೋವರ್ಸ್ ಗೆ ಮಾತ್ರ ಇದು ಲಭ್ಯವಾಗುವಂತೆ ಮಾಡ್ಬಹುದು.


