MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • What's New
  • Coffee Maker: ದಿನವೂ ಕೆಫೆ ಸ್ಟೈಲ್ ಕಾಫಿ ಕುಡೀಬೇಕಾ? ₹100 ರಿಂದ ₹500ಕ್ಕೆ ಸಿಗುತ್ತೆ ಬೆಸ್ಟ್ ಕಾಫಿ ಮೇಕರ್

Coffee Maker: ದಿನವೂ ಕೆಫೆ ಸ್ಟೈಲ್ ಕಾಫಿ ಕುಡೀಬೇಕಾ? ₹100 ರಿಂದ ₹500ಕ್ಕೆ ಸಿಗುತ್ತೆ ಬೆಸ್ಟ್ ಕಾಫಿ ಮೇಕರ್

ಮನೆಯಲ್ಲೇ ಕೆಫೆ ಸ್ಟೈಲ್ ಕಾಫಿ ಮಾಡುವುದು ಹೇಗೆ? ಅತಿ ಕಡಿಮೆ ಬೆಲೆಯ ಕಾಫಿ ಮೇಕರ್ ಯಾವುದು? ಯುಎಸ್‌ಬಿ ಕಾಫಿ ಮಗ್ ನಿಜವಾಗಿಯೂ ಚೆನ್ನಾಗಿರುತ್ತಾ? ಕಾಫಿ ವಿಸ್ಕ್ ಹೇಗೆ ಕೆಲಸ ಮಾಡುತ್ತೆ? ಪೋರ್ ಓವರ್ ಕಾಫಿ ಮೇಕರ್ ಅಂದ್ರೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

2 Min read
Author : Ravi Janekal
| Updated : Jun 11 2026, 09:45 AM IST
Share this Photo Gallery
  • FB
  • TW
  • Linkdin
  • Whatsapp
15
ಕಾಫಿ ಮೇಕರ್‌ನ ವಿಶೇಷತೆಗಳು
Image Credit : Asianet News

ಕಾಫಿ ಮೇಕರ್‌ನ ವಿಶೇಷತೆಗಳು

ಕಾಫಿ ಮೇಕರ್ ಬಳಸಿ ನೀವು ಕೂಡ ಮನೆಯಲ್ಲೇ ಕೆಫೆಯಂತಹ ನೊರೆಭರಿತ ಕಾಫಿ ಮಾಡ್ಕೊಂಡು ಕುಡಿಬಹುದು.. ಅಚ್ಚರಿ ಆಗ್ತಿದೆಯಾ? ಹೌದು ಬರೀ ಕಾಫಿ ಅಷ್ಟೇ ಅಲ್ಲ,  ಇದರಲ್ಲಿ ಎಸ್‌ಪ್ರೆಸೊ, ಕ್ಯಾಪೆಚಿನೊ, ಡಲ್ಗೋನಾ ಕಾಫಿ, ರೆಗ್ಯುಲರ್ ಕಾಫಿ, ಮಚಾ, ಹಾಟ್ ಚಾಕೊಲೇಟ್ ಸುಲಭವಾಗಿ ತಯಾರಿಸಬಹುದು. ಈ ಕಾಫಿ ಮೇಕರ್ ಹೇಗೆ ಬಳಸುವುದು ಅಂತಾನಾ? ನೋ ವರಿ, ಇದನ್ನ ಬಳಸೋದು ತುಂಬಾ ಸುಲಭ. ಕೆಲವು ಕಾಫಿ ಮೇಕರ್‌ಗಳು ಯುಎಸ್‌ಬಿ ಚಾರ್ಜಿಂಗ್ ಅಥವಾ ಬ್ಯಾಟರಿಯಿಂದಲೂ ಕೆಲಸ ಮಾಡುತ್ತವೆ. ಇದರಿಂದ ನೀವು ಎಲ್ಲಿ ಬೇಕಾದರೂ ಕಾಫಿ ಮಾಡಿಕೊಳ್ಳಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Wonderchef ಕಾಫಿ ಮೇಕರ್
Image Credit : Amazon.in

Wonderchef ಕಾಫಿ ಮೇಕರ್

Wonderchef ನ ಈ ಕಾಫಿ ಮೇಕರ್ Amazon.in ನಲ್ಲಿ ₹499 ಕ್ಕೆ ಸಿಗುತ್ತೆ!. ಇದರಲ್ಲಿ ಫ್ರೆಂಚ್ ಪ್ರೆಸ್ ಸ್ಟೈಲ್ ಕಾಫಿಯನ್ನು ಸುಲಭವಾಗಿ ಮಾಡಬಹುದು. ಇದರಲ್ಲಿ 350 ml ಬೊರೊಸಿಲ್ ಗ್ಲಾಸ್ ಇದ್ದು, ಒಂದೇ ಬಾರಿಗೆ 1–2 ಕಪ್ ಕಾಫಿ ತಯಾರಿಸಬಹುದು. ಈ ಕಾಫಿ ಮೇಕರ್ ತುಂಬಾ ನಾಜೂಕು ಆಗಿದೆ. ಬಳಸುವಾಗ ಕೆಳಗೆ ಬೀಳದಂತೆ ಎಚ್ಚರಿಕೆ ವಹಿಸುವುದು ಮುಖ್ಯ. ಇಷ್ಟು ಕಾಳಜಿವಹಿಸಿದರೆ ಸಾಕು ಮನೆಯಲ್ಲೇ ಕೆಫೆಯಂತಹ ಕಾಫಿ ಮಾಡಿಕೊಂಡು ಕುಡಿಯಬಹುದು.

Related Articles

Related image1
ಟ್ವಿಟ್ಟರ್‌ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್‌ ಮಸ್ಕ್‌..!
Related image2
ಕುಡಿಯೋದು ಓಕೆ, ಚಹಾ, ಕಾಫಿ ಕುಡಿಯದಿದ್ದರೆ ಏನಾಗುತ್ತದೆ? ಜಸ್ಟ್‌ 10 ದಿನ ಇವನ್ನು ಬಿಟ್ಟು ನೋಡಿ, ಹೀಗೆಲ್ಲಾ ಆಗುತ್ತದೆ!
35
ಕಾಫಿ ವಿಸ್ಕ್
Image Credit : Amazon.in

ಕಾಫಿ ವಿಸ್ಕ್

ಕಾಫಿ ವಿಸ್ಕ್, ನೋಡೋಕೆ ಇದು ಸಣ್ಣದು ಆದ್ರೆ ಇದರ ಉಪಯೋಗ ಮಾತ್ರ ತುಂಬಾ. ಇದೊಂದು ಉಪಯುಕ್ತ ಗ್ಯಾಜೆಟ್. ಇದರಿಂದ ನೀವು ಹಾಲು ಅಥವಾ ಕಾಫಿಯನ್ನು ನೇರವಾಗಿ ಕಪ್‌ನಲ್ಲಿಯೇ ಕಡೆಯಬಹುದು. ಇದರ ಮೂಲಕ ಕ್ಯಾಪೆಚಿನೊ, ಲ್ಯಾಟೆ, ಮಚಾ, ಹಾಟ್ ಚಾಕೊಲೇಟ್ ಮತ್ತು ಪ್ರೊಟೀನ್ ಶೇಕ್‌ಗಳನ್ನು ಸುಲಭವಾಗಿ ಮಾಡಬಹುದು. ಇದರ ಬೆಲೆಯೂ ತುಂಬಾ ಕಮ್ಮಿ, ಇದೊಂದು ಪೋರ್ಟಬಲ್ ಆಗಿದ್ದು, ಪ್ರಯಾಣದ ವೇಳೆ ಇದು ಮುಖ್ಯ. ಇದರ ಬೆಲೆ ಸುಮಾರು ₹100–₹200 ಕ್ಕೆ ಸಿಗುತ್ತದೆ. ತ್ವರಿತವಾಗಿ ನೊರೆಭರಿತ ಕಾಫಿ ಮಾಡಲು ಇದು ಪರ್ಫೆಕ್ಟ್.

45
ಪೋರ್-ಓವರ್ ಕಾಫಿ ಮೇಕರ್
Image Credit : Amazon.in

ಪೋರ್-ಓವರ್ ಕಾಫಿ ಮೇಕರ್

ಕೆಫೆ ಸ್ಟೈಲ್ ಫಿಲ್ಟರ್ ಕಾಫಿ ಇಷ್ಟಪಡುವವರಿಗೆ ಪೋರ್-ಓವರ್ ಕಾಫಿ ಮೇಕರ್ ಬೆಸ್ಟ್. ಇದರಲ್ಲಿ ಮೇಲಿನಿಂದ ಕಾಫಿ ಪುಡಿ ಹಾಕಿದರೆ ನಿಧಾನವಾಗಿ ಫಿಲ್ಟರ್ ಮಾಡಲಾಗುತ್ತದೆ. ಇದರಿಂದ ಕಾಫಿಯ ಅಸಲಿ ಸುವಾಸನೆ ಮತ್ತು ಪರಿಮಳ ಹೊರಬರುತ್ತದೆ. ಇದು ಹಗುರ, ಪೋರ್ಟಬಲ್, ಸುಲಭವಾಗಿ ಸ್ವಚ್ಛಗೊಳಿಸಬಹುದಾದ ಇದು ಕೂಡ ಒಂದು ಗ್ಯಾಜೆಟ್ ಆಗಿದ್ದು, ನೀವು ಎಲ್ಲಿ ಬೇಕಾದರೂ ಬಳಸಬಹುದು.

55
ಸೆಲ್ಫ್-ಸ್ಟಿರಿಂಗ್ ಮಗ್ ಕಾಫಿ ಮೇಕರ್
Image Credit : Amazon.in

ಸೆಲ್ಫ್-ಸ್ಟಿರಿಂಗ್ ಮಗ್ ಕಾಫಿ ಮೇಕರ್

ಇದು ಒಂದು ಆಟೋಮ್ಯಾಟಿಕ್ USB ಕಾಫಿ ಮಗ್. ಇದರಲ್ಲಿ ಬಟನ್ ಒತ್ತಿದ ತಕ್ಷಣ ಕಾಫಿ ತಾನಾಗಿಯೇ ಮಿಕ್ಸ್ ಆಗುತ್ತದೆ. ಇದರಲ್ಲಿ ಕಾಫಿ, ಹಾಲು, ನೀರು ಮತ್ತು ಸಕ್ಕರೆ ಹಾಕಿ, ಕೇವಲ ಒಂದು ಕ್ಲಿಕ್‌ನಲ್ಲಿ 1 ನಿಮಿಷದೊಳಗೆ ಕಾಫಿ ಸಿದ್ಧವಾಗುತ್ತದೆ. ಇದು ಆಫೀಸ್ ಮತ್ತು ಪ್ರಯಾಣಕ್ಕೆ ಬಹಳ ಅನುಕೂಲಕರ ಮತ್ತು ಮಾಡರ್ನ್ ಗ್ಯಾಜೆಟ್ ಆಗಿದೆ.

ಹೆಚ್ಚು ಹುಡುಕಲ್ಪಟ್ಟ ಪ್ರಶ್ನೆಗಳು

1: ₹500 ಒಳಗೆ ಉತ್ತಮ ಕಾಫಿ ಮೇಕರ್ ಸಿಗುತ್ತದೆಯೇ?

ಹೌದು, ಕಾಫಿ ವಿಸ್ಕ್ ಮತ್ತು ಪೋರ್-ಓವರ್‌ನಂತಹ ಹಲವು ಅಗ್ಗದ ಆಯ್ಕೆಗಳು ಲಭ್ಯವಿವೆ.

2: ಯುಎಸ್‌ಬಿ ಕಾಫಿ ಮಗ್ ಸುರಕ್ಷಿತವೇ?

ಹೌದು, ಸರಿಯಾದ ರೀತಿಯಲ್ಲಿ ಬಳಸಿದರೆ ಇದು ಸುರಕ್ಷಿತ ಮತ್ತು ಅನುಕೂಲಕರ.

3: ಮನೆಯಲ್ಲಿ ಕೆಫೆ ಶೈಲಿಯ ಕಾಫಿ ಮಾಡುವುದು ಹೇಗೆ?

ಸರಿಯಾದ ಕಾಫಿ ಮೇಕರ್ ಮತ್ತು ತಾಜಾ ಕಾಫಿ ಪುಡಿಯನ್ನು ಬಳಸಿಕೊಂಡು ಸುಲಭವಾಗಿ ಮಾಡಬಹುದು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಕಾಫಿ
ಅಮೆಜಾನ್
ಶಾಪಿಂಗ್
Latest Videos
Recommended Stories
Recommended image1
ಜಾಗತಿಕ ಐಟಿ ವಲಯದ ಹೊಸ ಮೈಲಿಗಲ್ಲು: ಗೂಗಲ್ ಕ್ಲೌಡ್ ಜೊತೆ ಸೇರಿ ಎಐ ಇನ್ನೋವೇಶನ್ ಝೋನ್ ಆರಂಭಿಸಿದ ಎಚ್‌ಸಿಎಲ್‌ ಟೆಕ್!
Recommended image2
ವಾಟ್ಸಾಪ್‌ನಲ್ಲಿ ಭರ್ಜರಿ ಸೆಕ್ಯೂರಿಟಿ ಫೀಚರ್: ಇನ್ಮುಂದೆ ಮೆಸೇಜ್ ಓದಿದ ತಕ್ಷಣ ತಾನಾಗಿಯೇ ಡಿಲೀಟ್!
Recommended image3
ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'!
Related Stories
Recommended image1
ಟ್ವಿಟ್ಟರ್‌ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್‌ ಮಸ್ಕ್‌..!
Recommended image2
ಕುಡಿಯೋದು ಓಕೆ, ಚಹಾ, ಕಾಫಿ ಕುಡಿಯದಿದ್ದರೆ ಏನಾಗುತ್ತದೆ? ಜಸ್ಟ್‌ 10 ದಿನ ಇವನ್ನು ಬಿಟ್ಟು ನೋಡಿ, ಹೀಗೆಲ್ಲಾ ಆಗುತ್ತದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved