ಗೋಲು ಬಾರಿಸುವುದರಲ್ಲಿ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ ಸುನಿಲ್ ಚೆಟ್ರಿ..!
* ಫುಟ್ಬಾಲ್ ಕ್ವಾಲಿಫೈಯರ್ ಪಂದ್ಯದಲ್ಲಿ ದಾಖಲೆ ಬರೆದ ಸುನಿಲ್ ಚೆಟ್ರಿ
* ಸುನಿಲ್ ಚೆಟ್ರಿ ಭಾರತ ಫುಟ್ಬಾಲ್ ತಂಡದ ನಾಯಕ
* ಅತಿಹೆಚ್ಚು ಅಂತಾರಾಷ್ಟ್ರೀಯ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆಟ್ರಿ
ದೋಹಾ(ಜೂ.08): ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಹಾಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರ ಪೈಕಿ ಅಲಿ ಮಬ್ಖೋತ್ ಹಾಗೂ ಲಿಯೋನೆಲ್ ಮೆಸ್ಸಿಯವರನ್ನು ಹಿಂದಿಕ್ಕಿ ಗರಿಷ್ಠ ಗೋಲು ಬಾರಿಸಿದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಸುನಿಲ್ ಚೆಟ್ರಿ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಎರಡು ಗೋಲು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ 74 ಗೋಲು ಬಾರಿಸಿ ಎರಡನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಹಾಲಿ ಆಟಗಾರರ ಪೈಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೋ ಹೆಸರಿನಲ್ಲಿದೆ. ರೊನಾಲ್ಡೋ ಇದುವರೆಗೂ 103 ಅಂತಾರಾಷ್ಟ್ರೀಯ ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಫುಟ್ಬಾಲ್: ಸುನಿಲ್ ಚೆಟ್ರಿ ಕಾಲ್ಚಳಕ, ಭಾರತಕ್ಕೆ ಒಲಿದ ಮೊದಲ ಜಯ
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲಿ ಮಬ್ಖೋತ್ ಸದ್ಯ 73 ಗೋಲು ಬಾರಿಸಿದ್ದರೆ, ಅರ್ಜಿಂಟೀನಾದ ಲಿಯೋನೆಲ್ ಮೆಸ್ಸಿ 72 ಅಂತಾರಾಷ್ಟ್ರೀಯ ಗೋಲುಗಳನ್ನು ಬಾರಿಸಿದ್ದಾರೆ. ಇನ್ನು ಭಾರತ ತಂಡವು ಜೂನ್ 15ರಂದು ಆಪ್ಘಾನಿಸ್ತಾನ ತಂಡವನ್ನು ಎದುರಿಸಲಿದ್ದು, ಚೆಟ್ರಿ ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಬಹುದಾಗಿದೆ.