* ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಮೊದಲ ಗೆಲುವು ದಾಖಲಿಸಿದ ಭಾರತ ಫುಟ್ಬಾಲ್ ತಂಡ* ಎರಡು ಗೋಲು ಬಾರಿಸಿ ಮತ್ತೊಮ್ಮೆ ಮಿಂಚಿದ ಸುನಿಲ್ ಚೆಟ್ರಿ* ಬಾಂಗ್ಲಾದೇಶ ವಿರುದ್ದ 2-0 ಅಂತರದಲ್ಲಿ ಗೆದ್ದ ಭಾರತ

ದೋಹಾ(ಜೂ.08): ಭಾರತದ ಫುಟ್ಬಾಲ್ ಐಕಾನ್‌ ಸುನಿಲ್ ಚೆಟ್ರಿ ಬಾಂಗ್ಲಾದೇಶ ಎದುರು ಬಾರಿಸಿದ ಎರಡು ಅತ್ಯಾಕರ್ಷಕ ಗೋಲುಗಳ ನೆರವಿನಿಂದ ಫಿಫಾ ವಿಶ್ವಕಪ್ ಅರ್ಹಾತಾ ಸುತ್ತಿನಲ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ಮೊದಲ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ವಿರುದ್ದ ಭಾರತ ಫುಟ್ಬಾಲ್ ತಂಡವು 2-0 ಅಂತರದಲ್ಲಿ ಗೆದ್ದು, ಅಂಕಗಳ ಖಾತೆ ತೆರೆದಿದೆ.

ಸುನಿಲ್ ಚೆಟ್ರಿ ಪಂದ್ಯದ 79ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸುವ ಮೂಲಕ ಭಾರತ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಇದರೊಂದಿಗೆ 2023ರ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಕನಸಿಗೆ ಬಲ ತುಂಬಿದರು. ಇನ್ನು ಪಂದ್ಯದ ಹೆಚ್ಚುವರಿ ಸಮಯದಲ್ಲಿ(90+2) ಸುನಿಲ್ ಚೆಟ್ರಿ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತ ಗೆಲುವಿನ ಹೊನಲಿನಲ್ಲಿ ತೇಲುವಂತೆ ಮಾಡಿದರು.

Scroll to load tweet…

ಫುಟ್ಬಾಲ್‌: ಭಾರತಕ್ಕಿಂದು ಬಾಂಗ್ಲಾದೇಶ ಸವಾಲು

ಈ ಗೆಲುವು ಕಳೆದ ಕೆಲ ವರ್ಷಗಳಿಂದಲೂ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅನುಭವಿಸುತ್ತಿದ್ದ ನೀರಸ ಪ್ರದರ್ಶನಕ್ಕೆ ಬ್ರೇಕ್ ಬೀಳುವಂತೆ ಮಾಡಿದೆ. ಅಂದಹಾಗೆ ಫಿಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ತವರಿನಾಚೆ ಭಾರತ ದಾಖಲಿಸಿದ ಮೊದಲ ಗೆಲುವು ಎನಿಸಿದೆ.

ದೋಹಾದಲ್ಲೇ ನಡೆದ ಮೊದಲ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡವು ಬಲಿಷ್ಠ ಕತಾರ್ ವಿರುದ್ದ 1-0 ಗೋಲುಗಳಿದ ಸೋಲು ಅನುಭವಿಸಿತ್ತು.